Maldives : ಭಾರತದ ದ್ವೇಷ ಕಟ್ಟಿಕೊಂಡ ಮಾಲ್ಡೀವ್ಸ್ ಸರ್ಕಾರದ ವಿರುದ್ಧ ಸಿಡಿದೆದ್ದ ವಿಪಕ್ಷಗಳು- ಸಂಸತ್’ನಲ್ಲಿ ರೌಡಿಗಳಂತೆ ಹೊಡೆದಾಡಿದ ನಾಯಕರು !!
Maldives : ಭಾರತದೊಂದಿಗೆ ವಿರೋಧ ಕಟ್ಟಿಕೊಂಡ ಮಾಲ್ಡೀವ್ಸ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ನ(Maldivs) ಎರಡು ಪ್ರಮುಖ ವಿರೋಧ ಪಕ್ಷಗಳು ಬುಧವಾರ ತಮ್ಮ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ಸಂಸತ್ ಒಳಗೆ ಹಿಗ್ಗಾಮುಗ್ಗಾ ಹೊಡೆದಾಡಿವೆ. ಈ ಕುರಿತಂತೆ ವಿಡಿಯೋಗಳು ವೈರಲ್ ಆಗಿದ್ದು, ಅವು ಭಯಾನಕವಾಗಿವೆ.
https://x.com/MeghUpdates/status/1751557247950524840?t=FNWi26uoNyWdzb6vG7Md_Q&s=08
ಇದನ್ನೂ ಓದಿ: Pune: ಮದುವೆ ಆಗುವುದಾಗಿ ನಂಬಿಸಿ ಖ್ಯಾತ ನಟಿಯ ಮೇಲೆ ಅತ್ಯಾಚಾರ!!
https://x.com/MrSinha_/status/1751559778067951767?t=B527NrRVgAa4E3ctX0GznA&s=08
ಹೌದು, ಕೆಲವು ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ(PM Modi)ಯವರು ಲಕ್ಷದ್ವೀಪಕ್ಕೆ ನೀಡಿದ ಭೇಟಿಯಿಂದಾಗಿ ಆರ್ಥಿಕವಾಗಿ ನೆಲಕಚ್ಚಿರುವ ಮಾಲ್ಡೀವ್ಸ್ ಚೀನಾ ದೇಶದ ಸಹವಾಸ ಮಾಡಿ ಭಾರತದ ವಿರುದ್ಧ ತಿರುಗಿಬಿದ್ದಿದೆ. ಈ ಹಿನ್ನೆಲೆಯಲ್ಲಿ ಭಾರತದೊಂದಿಗೆ ವಿರೋಧ ಕಟ್ಟಿಕೊಂಡ ಮಾಲ್ಡೀವ್ಸ್ ವಿರುದ್ಧ ಅಲ್ಲಿನ ಪ್ರತಿಪಕ್ಷಗಳೇ ತಿರುಗಿಬಿದ್ದಿವೆ. ಇಂದು ಮಾಲ್ಡೀವ್ಸ್ ಸಂಸತ್ತಿನ ಮಾರಾಮಾರಿ ನಡೆದಿದೆ. ಈ ವಿಡಿಯೋಗಳು ವೈರಲ್ ಆಗಿದ್ದು, ಮಾಲ್ಡೀವ್ಸ್‌ನಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ.
ಮಾಲ್ಡೀವ್ಸ್‌ನ ಪ್ರಮುಖ ವಿರೋಧ ಪಕ್ಷಗಳಾದ ಎಂಡಿಪಿ ಮತ್ತು ಡೆಮೋಕ್ರಾಟ್‌ಗಳು ಮೊಹಮ್ಮದ್ ಮುಯಿಝು ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿವೆ. 87 ಸದಸ್ಯರ ಸದನದಲ್ಲಿ ಒಟ್ಟು 55 ಸ್ಥಾನಗಳನ್ನು ಹೊಂದಿರುವ ಈ ಎರಡು ಪ್ರಮುಖ ವಿರೋಧ ಪಕ್ಷಗಳು ವಿಶೇಷವಾಗಿ ನೆರೆಯ ಮತ್ತು ಪ್ರಮುಖ ಪಾಲುದಾರ ಭಾರತದೊಂದಿಗೆ ಹದಗೆಡುತ್ತಿರುವ ಸಂಬಂಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಇದರ ಸಂಬಂಧ ಸಂಸತ್ತಿನಲ್ಲಿ ವಿಪಕ್ಷಗಳ ನಾಯಕರು ಹಾಗೂ ಆಡಳಿತದ ಪಕ್ಷದ ಸಚಿವರ ನಡುವೆ ತಳ್ಳಾಟ ನೂಕಾಟ ನಡೆದಿದ್ದು, ದೊಡ್ಡ ಮಾರಾಮಾರಿಯೇ ನಡೆದುಹೋಗಿವೆ.
ಮಾಲ್ಡೀವ್ಸ್ ಸಂಸತ್ತಲ್ಲಿ ನಡೆದದ್ದೇನು?
ವಿರೋಧ ಪಕ್ಷಗಳ ಸಂಸದರನ್ನು ಆಡಳಿತಾರೂಢ ಪಕ್ಷದ ಸಂಸದರು ಸಂಸತ್ತನ್ನು ಪ್ರವೇಶಿಸುವುದರಿಂದ ತಡೆದಿದ್ದಾರೆ. ಮಾಲ್ಮೀಲ್ಸ್ ಸಂಸತ್ತಿನಲ್ಲಿ ಬಹುಮತ ಹೊಂದಿರುವ ಎಂಡಿಪಿಯು, ಆಡಳಿತಾರೂಢ ಮಾಲ್ಮೀಮ್ಸ್ ಅಧ್ಯಕ್ಷ ಮುಯಿಝು ಸಂಪುಟವನ್ನು ತನ್ನ ಪಕ್ಷದ ನಾಲ್ವರು ಸದಸ್ಯರು ಸೇರ್ಪಡೆಯಾಗುವುದಕ್ಕೆ ಅನುಮೋದನೆ ನೀಡದೆ ಇದ್ದುದರಿಂದ ರೊಚ್ಚಿಗೆದ್ದ ವಿರೋಧ ಪಕ್ಷಗಳು ಪರಸ್ಪರ ಹೊಡೆದಾಡಿಕೊಂಡಿವೆ.