Belthangady: ಪಟಾಕಿ ಸ್ಫೋಟ ಪ್ರಕರಣ; ಮಾಲೀಕ ಸೈಯದ್‌ ಬಶೀರ್‌ ಪೊಲೀಸ್‌ ವಶಕ್ಕೆ!!!

Belthangady: ಪಟಾಕಿ ಗೋಡೌನ್‌ನಲ್ಲಿ ಪಟಾಕಿ ತಯಾರಿಕೆ ಸಂದರ್ಭ ಭೀಕರ ಸ್ಫೋಟ ಸಂಭವಿಸಿದ ಘಟನೆಯೊಂದು ನಿನ್ನೆ ನಡೆದಿತ್ತು. ಈ ದುರ್ಘಟನೆಯಲ್ಲಿ ಮೂವರು ಕಾರ್ಮಿಕರ ಮೃತದೇಹವು ಪತ್ತೆಯಾಗಿದ್ದು, ಛಿದ್ರ ಛಿದ್ರಗೊಂಡ ರೂಪದಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ: Egg Testing: ಮೊಟ್ಟೆ ತಿನ್ನುವ ಮೊದಲು ಅದು ಒಳ್ಳೆಯದ ಅಥವಾ ಕೆಟ್ಟದ್ದೇ ಎಂದು ಪರೀಕ್ಷಿಸಲೇಬೇಕು!

ಇದೀಗ ಈ ಘಟನೆ ಸಂಬಂಧ ವೇಣೂರು ಪೊಲೀಸ್‌ ಠಾಣೆಯಲ್ಲಿ ಶಾಂತಿ ಎಂಬುವರು ನೀಡಿದ ದೂರಿನ ಅನ್ವಯ ಮಾಲೀಕ ಬಶೀರ್‌ ಅವರ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಪ್ರಕರಣ ಸಂಬಂಧ ಜಾಗ ಹಾಗೂ ಪಟಾಕಿ ತಯಾರಿಕಾ ಮಾಲೀಕ ಸೈಯದ್‌ ಬಶೀರ್‌ ಘಟನೆ ಬಳಿಕ ವೇಣೂರಿನಿಂದ ಪರಾರಿಯಾಗಿದ್ದಾಗ ಖಚಿತ ಮಾಹಿತಿ ಮೇರೆ ಸುಳ್ಯದಲ್ಲಿ ವಶಕ್ಕೆ ಪಡೆಯಲಾಗಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

1 Comment
  1. […] ಇದನ್ನೂ ಓದಿ: Belthangady: ಪಟಾಕಿ ಸ್ಫೋಟ ಪ್ರಕರಣ; ಮಾಲೀಕ ಸೈಯದ್‌ … […]

Leave A Reply

Your email address will not be published.