BJP National president : ಕರ್ನಾಟಕದ ಈ ನಾಯಕನಿಗೆ ಬಿಜೆಪಿ ‘ರಾಷ್ಟ್ರೀಯ ಅಧ್ಯಕ್ಷ’ ಪಟ್ಟ ?!

 

BJP National president: ರಾಜ್ಯ ಬಿಜೆಪಿಯಲ್ಲಿ ಕೆಲವು ಸಮಯದಿಂದ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಅತಂತ್ರವಾಗಿದ್ದ ಬಿಜೆಪಿಗೆ ರಾಜ್ಯಾಧ್ಯಕ್ಷರ ನೇಮಕವಾದ ಬಳಿಕ ಹಲವು ಚಟುವಟಿಕೆಗಳು ಗರಿಗೆದರಿವೆ. ಅಂತೆಯೇ ಜಗದೀಶ್ ಶೆಟ್ಟರ್ ಕೂಡ ಘರ್’ವಾಪ್ಸಿ ಆಗಿದ್ದಾರೆ. ಆದರೀಗ ಈ ಬೆನ್ನಲ್ಲೇ ಅಚ್ಚರಿ, ಕುತೂಹಲ ಹಾಗೂ ಸಂತೋಷದ ಸುದ್ದಿಯೊಂದು ಬಂದೊದಗಿದ್ದು, ರಾಜ್ಯದ ಈ ನಾಯಕನಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪಟ್ಟ(BJP National president)ದೊರೆಯಲಿದೆ ಎಂಬ ವಿಚಾರ ಸದ್ದು ಮಾಡುತ್ತಿದೆ.

ಹೌದು, ಕೆಲವು ದಿನಗಳಿಂದ ಬಿಜೆಪಿ(BJP) ಪಾಳಯದಲ್ಲಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಕುರಿತು ಭಾರೀ ಚರ್ಚೆಯಾಗುತ್ತಿದ್ದು, ಸದಾ ಕ್ರಿಯಾಶೀಲರಾಗಿರುವ, ಕೇಂದ್ರ ನಾಯಕರೊಂದಿಗೆ ಬಹಳ ಆತ್ಮೀಯತೆಯಿಂದಿರುವ, ಉತ್ತಮ ನಾಯಕ, ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಎಂಬ ಸುದ್ದಿ ಭಾರೀ ವೈರಲ್ ಆಗಿದೆ.

ಇದೀಗ ಈ ವಿಚಾರದ ಬಗ್ಗೆ ಪ್ರಹ್ಲಾದ್ ಜೋಷಿ(Prahlad joshi) ಸ್ಪಷ್ಟೀಕರಣ ನೀಡಿದ್ದು, ಕ್ಷೇತ್ರದಲ್ಲಿ ಶಾಸಕರು, ನಗರ ಘಟಕದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಚುನಾವಣೆ ಸಿದ್ಧತೆಯಲ್ಲಿದ್ದಾರೆ. ಇದರ ನಡುವೆ ಕೆಲವರು ನನ್ನನ್ನು ರಾಷ್ಟ್ರೀಯ ಅಧ್ಯಕ್ಷ ಎನ್ನುತ್ತಿದ್ದಾರೆ. ಪುಣ್ಯಕ್ಕೆ ರಾಷ್ಟ್ರಪತಿ ಆಗುತ್ತಾರೆ ಎಂದಿಲ್ಲ ಎಂದು ಇದು ಗಾಳಿ ಸುದ್ದಿ ಎನ್ನುವಂತೆ ಮಾತನಾಡಿದ್ದಾರೆ.

ಇಷ್ಟೇ ಅಲ್ಲದೆ ನಾನು ಧಾರವಾಡ (Dharwad) ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಈಗಾಗಲೇ ಚುನಾವಣೆಯ ತಯಾರಿ ಮಾಡಿಕೊಂಡಿದ್ದೇನೆ. ಲೋಕಸಭಾ ಚುನಾವಣೆಗೆ ಈ ಕ್ಷೇತ್ರದಿಂದ ಜೋಶಿನೆ ಅಭ್ಯರ್ಥಿ ಎಂದು ಒತ್ತಿ ಹೇಳಿದ್ದಾರೆ.

ಬಜೆಪಿ ಪಾಳಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ ಇದು ಸಾಧ್ಯವಿಲ್ಲ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ ಪ್ರಹ್ಲಾದ್ ಜೋಶಿ ಅವರು ಕೇಂದ್ರ ನಾಯಕರೊಂದಿಗೆ ಇರುಷ್ಟು ಆತ್ಮೀಯತೆ ರಾಜ್ಯದ ಬೆರಾವ ನಾಯಕರಿಗೂ ಕೂಡ ಇಲ್ಲ. ಅಲ್ಲದೆ ಅವರು ಮೋದಿಯೊಂದಿಗೆ, ರಾಷ್ಟ್ರೀಯ ಅಧ್ಯಕ್ಷರೊಂದಿಗೆ, ಅಮಿತ್ ಶಾ ಅವರೊಂದಿಗೆ ತುಂಬಾ ಆತ್ಮೀಯವಾಗಿದ್ದಾರೆ. ಮುಖ್ಯವಾಗಿ ಬಿಎಲ್ ಸಂತೋಷ್ ಬಣದಲ್ಲಿ ಗುರುತಿಸಿಕೊಂಡ ನಾಯಕ. ಜೊತೆಗೆ ಉತ್ತಮ ನಾಯಕತ್ವ ಗುಣಗಳನ್ನು ಕೂಡ ಹೊಂದಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾಗುವ ಎಲ್ಲಾ ಲಕ್ಷಣಗಳು, ಗುಣಗಳು ಅವರಲ್ಲಿ ಇವೆ. ಎಂಪಿ ಆದ ತಕ್ಷಣ ಅವರು ರಾಷ್ಟ್ರೀಯ ಅಧ್ಯಕ್ಷರು ಆಗಬಾರದು ಎಂಬ ನಿಯಮವೇನಿಲ್ಲ. ಈಗಾಗಲೇ ಇರುವ ಜೆಪಿ ನಾಡ್ಡ ಕೂಡ ಅವರು ಪ್ರಸ್ತುತ ಪಾರ್ಲಿಮೆಂಟ್ ಸದಸ್ಯರಾಗಿದ್ದಾರೆ. ಹೀಗಾಗಿ ಪ್ರಹಲ್ಲಾ ಜೋಶಿ ಅವರಿಗೆ ಈ ಅಧ್ಯಕ್ಷಗಿರಿ ಒಲಿದು ಬಂದರೂ ಆಶ್ಚರ್ಯವೇನಿಲ್ಲ. .

Leave A Reply

Your email address will not be published.