Mumbai: ಯುವತಿಗೆ ಡ್ರಗ್ಸ್ ನೀಡಿ ಇನ್‌ಸ್ಟಾ ಫ್ರೆಂಡ್’ನಿಂದ ಅತ್ಯಾಚಾರ – ನಾನು ಎಚ್ಚರ ಆದ್ರೂ ಇನ್ನೂ ರೇಪ್ ಮಾಡ್ತಿದ್ದ, ಬೇಡ ಬೇಡ ಅಂದ್ರೂ.. ಯಪ್ಪಾ, ಕಣ್ಣೀರು ತರಿಸುತ್ತೆ ಹುಡುಗಿಯ ಪೋಸ್ಟ್!!

Share the Article

 

Mumbai: ಇಂದು ಇನ್‌ಸ್ಟಾಗ್ರಾಮ್ ಎಂಬುದು ಭಾರೀ ಟ್ರೆಂಡ್ ಆಗುತ್ತಿದೆ. ಇದನ್ನೇ ಬಳಸಿಕೊಂಡು ಕೆಲ ಹಂತಕರು, ಕಾಮುಕರು ಅನೇಕರ ಜೀವನದಲ್ಲಿ ಆಟವಾಡುತ್ತಿದ್ದಾರೆ. ಅಂತೆಯೇ ಇದೀಗ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಗೆಳೆಯನ ಜೊತೆ ಪಾರ್ಟಿಗೆ ಹೋದ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಮುಂಬೈ(Mumbai)ನಲ್ಲಿ ನಡೆದಿದೆ.

ಹೌದು, 21 ವರ್ಷದ ಯುವತಿಯೊಬ್ಬಳು ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿರೋ ಪೋಸ್ಟ್ ಒಂದು ಎಂತವರನ್ನು ಬೆಚ್ಚಿಬೀಳಿಸುತ್ತೆ. ಯಾಕೆಂದರೆ ಸೋಶಿಯಲ್‌ ಮೀಡಿಯಾದಲ್ಲಿ ಪರಿಚಿತನಾದ ಹುಡುಗನೊಬ್ಬ ನನಗೆ ಡ್ರಗ್‌ ನೀಡಿ ರೇಪ್‌ ಮಾಡಿದ್ದಾನೆ ಎಂದು ಆ ಹುಡುಗಿ ಮನ ಮಿಡಿಯುವಂತೆ ಎಲ್ಲವನ್ನೂ ವಿವರಿಸಿ, ತನಗಾದ ಕಷ್ಟವನ್ನು ಸಂಪೂರ್ಣವಾಗಿ ಬರೆದುಕೊಂಡಿರುವ ಆಕೆ, ಇದು ನನ್ನ ಜೀವನದ ಅತ್ಯಂತ ಆಘಾತಕಾರಿ ಅನುಭವ ಎಂದು ವಿವರಿಸಿದ್ದಾಳೆ

ತನ್ನ ಐಡೆಂಟಿಟಿಯನ್ನು ಬಹಿರಂಗಪಡಿಸಲು ಯುವತಿ ನಿರಾಕರಿಸಿದ್ದು, ಇದಕ್ಕಾಗಿ ‘ಪನಿಶ್‌ ಮೈ ರೇಪಿಸ್ಟ್‌’ (punishmyrapist) ಎನ್ನುವ ಇನ್ಸ್‌ಟಾಗ್ರಾಮ್‌ ಖಾತೆಯ ಮೂಲಕ ಎರಡು ದಿನಗಳ ಹಿಂದೆ ತನಗಾದ ಅನುಭವದ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾಳೆ. ಅದು ಮಾತ್ರವಲ್ಲದೆ, ತನ್ನನ್ನು ರೇಪ್‌ ಮಾಡಿರುವ ವ್ಯಕ್ತಿ ಯಾರು ಎನ್ನುವ ಬಗ್ಗೆ ಆತನ ಇನ್ಸ್‌ಟಾಗ್ರಾಮ್‌ ಹ್ಯಾಂಡಲ್‌ಅನ್ನೂ ಟ್ಯಾಗ್‌ ಮಾಡಿದ್ದು, ಹೀತಿಕ್‌ ಶಾ ಎನ್ನುವ ವ್ಯಕ್ತಿಯ ಮೇಲೆ ಯುವತಿ ಆರೋಪ ಮಾಡಿದ್ದಾಳೆ. ಘಟನೆ ನಡೆದು ಈ ಕುರಿತಾಗಿ ದೂರು ನೀಡಿ 12 ದಿನಗಳಾಗಿದ್ದೂ ಪೊಲೀಸರು ಆ ವ್ಯಕ್ತಿಯನ್ನು ಈವರೆಗೂ ಬಂಧಿಸಿಲ್ಲ ಎಂದು ಹೇಳಿದ್ದಾಳೆ.

ನಾನು ಇನ್ಸ್‌ಟಾಗ್ರಾಮ್‌(Instagram)ನಲ್ಲಿ ಮಾತ್ರವೇ ಆತನೊಂದಿಗೆ ಮಾತನಾಡಿದ್ದೆ. ಬಳಿಕ ಇಬ್ಬರು ಭೇಟಿಯಾಗಬೇಕು ಎಂದು ನಿರ್ಧಾರ ಮಾಡಿದೆವು. ಜನವರಿ 13 ರಂದು ಈ ಘಟನೆ ನಡೆದಿದೆ ಎಂದು ಆಕೆ ಬರೆದುಕೊಂಡಿದ್ದಾರೆ. ಯುವತಿ ಹೇಳುವ ಪ್ರಕಾರ ಆಕೆಗೆ ಕೆಲ ಸಮಯದ ಹಿಂದೆ ಹಿತಿಕ್‌ ಶಾ ಎಂಬ ಯುವಕ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದಾನೆ. ನಂತರ ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರೂ ಸಲುಗೆ ಬೆಳೆಸಿಕೊಂಡಿದ್ದಾರೆ. ನಂತರ ಯುವಕ ಒಂದು ದಿನ ಆಕೆಯನ್ನು ರೆಸ್ಟೋರೆಂಟ್‌ಗೆ ಕರೆದಿದ್ದ. ಅಲ್ಲಿ ಆತನ ಸ್ನೇಹಿತರನ್ನು ಭೇಟಿಯಾಗಿ ಮದ್ಯ ಸೇವಿಸಿದ್ದ. ಆ ಬಳಿಕ ಆತ ಯುವತಿಯನ್ನು ತನ್ನ ಸ್ನೇಹಿತನ ಮನೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಆಕೆಗೆ ಮದ್ಯ ಸೇವಿಸುವಂತೆ ಒತ್ತಾಯ ಮಾಡಿದ್ದಾನೆ. ಅಲ್ಲದೆ ನನಗೆ ತಿಳಿಯದೇ ಅದರಲ್ಲಿ ಡ್ರಗ್ಸ್‌ ಸೇರಿಸಿದ್ದಿರಬಹುದು ಎಂದು ಆಕೆ ಶಂಕಿಸಿದ್ದಾಳೆ.

ಅಲ್ಲದೆ ನನಗೆ ಬ್ಲಾಕ್‌ಔಟ್‌ ಆಗಿತ್ತು ಎನ್ನುವ ಆಕೆ, ಒಂದು ಹಂತದಲ್ಲಿ ನನಗೆ ಎಚ್ಚರವಾದಾಗ ಹೀತಕ್‌ ಶಾ ನನ್ನ ಮೇಲೆ ರೇಪ್‌ ಮಾಡುತ್ತಿದ್ದ. ಈ ಹಂತದಲ್ಲಿ ನಾನು ಅತನನ್ನು ತಡೆಯಲು ಪ್ರಯತ್ನಿಸಿದರೂ ಅದು ವಿಫಲವಾಗಿತ್ತು. ಆತ ರೇಪ್‌ ಮಾಡುವುದನ್ನು ಮುಂದುವರಿಸಿದ್ದ. ಸಿಟ್ಟಿನಲ್ಲಿ ಆತ ಮೂರು ಬಾರಿ ನನ್ನ ಕೆನ್ನೆಗೆ ಹೊಡೆದಿದ್ದ. ನನ್ನನ್ನು ಆತ ಹೆದರಿಸಿದ್ದ ಕಾರಣ ಸಿಕ್ಕಾಪಟ್ಟೆ ಭಯವಾಗಿತ್ತು ಎಂದು ಯುವತಿ ಹೇಳಿದ್ದಾಳೆ.

ಇಷ್ಟೇ ಅಲ್ಲದೆ ಸಹಾಯಕ್ಕೆ ಯಾರನ್ನಾದರೂ ಕರೆದರೆ ಮುಂದಿನ ಪರಿಣಾಮ ಸರಿ ಇರೋದಿಲ್ಲ ಎಂದು ಆತ ಎಚ್ಚರಿಸಿದ್ದನಂತೆ. ಆತನ ಸ್ನೇಹಿತರು ಅವನ ಬೆಂಬಲಕ್ಕೆ ನಿಂತಿದ್ದರು. ಸ್ನೇಹಿತರ ಎದುರೇ ನನಗೆ ಬೆದರಿಕೆ ಹಾಕಿದ್ದ ಎಂದಿದ್ದಾಳೆ ಯುವತಿ.

https://www.instagram.com/p/C2giRy1Ij8E/?igsh=MWdpZ2RmeHhpMnMwOQ==

ನಂತರ ಯುವತಿ ತನ್ನ ಸೋದರ ಸಂಬಂಧಿಗೆ ಕರೆ ಮಾಡಿ ಮನೆಗೆ ತಲುಪಿದ ಬಳಿಕ ತನ್ನ ಕುಟುಂಬಸ್ಥರಿಗೆ ತನಗಾದ ಅನ್ಯಾಯವನ್ನು ತಿಳಿಸಿದ್ದಾಳೆ. ನಂತರ ಅದೇ ವಾರ ಎಫ್‌ಐಆರ್‌ ದಾಖಲಿಸಿದ್ದೆ ಎಂದು ಯುವತಿ ಬರೆದುಕೊಂಡಿದ್ದಾರೆ. ಈ ಮಧ್ಯೆ ಯುವಕ ಇನ್ಸ್‌ಟಾಗ್ರಾಂನಲ್ಲಿ ಯುವತಿಯೊಂದಿಗೆ ಆಗಿರುವ ಘಟನೆಯ ಬಗ್ಗೆ ಕ್ಷಮೆಯಾಚಿಸಿದ್ದಾನೆ. ಆದರೆ ಯುವತಿ ಇತ್ತ ಘಟನೆ ನಡೆದು 12 ದಿನ ಕಳೆದರೂ ಪೊಲೀಸರು ಬಂಧಿಸಿಲ್ಲ. ಆದರೆ ಆರೋಪಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ ಎಂದು ಆರೋಪಿಸಿದ್ದಾಳೆ

Leave A Reply

Your email address will not be published.