Mangaluru (Kavoor Mosque): ಕುಡಿದ ಮತ್ತಿನಲ್ಲಿ ತಡರಾತ್ರಿ ಮಸೀದಿಗೆ ನುಗ್ಗಿ ಅಸಭ್ಯ ವರ್ತನೆ ಮಾಡಿದ ವ್ಯಕ್ತಿ; ಪೊಲೀಸರಿಂದ ವ್ಯಕ್ತಿ ಬಂಧನ!!

Mangaluru: ಮರಕಡ ಬಳಿ ಮಿಲಾತ್‌ ನಗರ ಎಂಬಲ್ಲಿ ತಡರಾತ್ರಿ ಕೂಲಿ ಕಾರ್ಮಿಕ ವ್ಯಕ್ತಿ ಕುಡಿದು ಮಸೀದಿಯೊಂದಕ್ಕೆ ನುಗ್ಗಿದ್ದು, ಅವಾಚ್ಯವಾಗಿ ಅಲ್ಲಿದ್ದವರಿಗೆಲ್ಲ ನಿಂದಿಸಿದ ಘಟನೆಯೊಂದು ನಡೆದಿದೆ ಎಂದು ವರದಿಯಾಗಿದೆ.

ಕೂಲಿ ಕಾರ್ಮಿಕ ಬಾಗಲಕೋಟ ಮೂಲದ ಆರೋಪಿ ಹನುಮಂತು ಎಂದು ಪೊಲೀಸರು ಗುರುತಿಸಿ, ವಶಕ್ಕೆ ಪಡೆದಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Section 144: ಇಲ್ಲಿ ನಾಳೆ ನಿಷೇಧಾಜ್ಞೆ!

ಮಾನಸಿಕ ಸ್ಥಿಮಿಕ ಕಳೆದುಕೊಂಡವನಂತರೆ ಕುಡಿದು ವರ್ತಿಸಿರುವ ಕುರಿತು ವರದಿಯಾಗಿದೆ. ಮಸೀದಿ ಸಿಬ್ಬಂದಿಯನ್ನು ಮನ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮೊಬೈಲ್‌ನಲ್ಲಿ ಇದರ ವೀಡಿಯೋ ಮಾಡಿದ ಮಸೀದಿ ಸಿಬ್ಬಂದಿ, ಕಾವೂರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಪೊಲೀಸರು ಕಾರ್ಮಿಕನನ್ನು ನಂತರ ಕರೆದುಕೊಂದು ಹೋಗಿದ್ದು ಆರೋಪಿ ವಿರುದ್ಧ ಹಲವು ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲು ಮಾಡಿದ್ದಾರೆ.

Leave A Reply

Your email address will not be published.