Section 144: ಇಲ್ಲಿ ನಾಳೆ ನಿಷೇಧಾಜ್ಞೆ!

Chikkamagaluru News: ಚಿಕ್ಕಮಗಳೂರು ನಗರದಲ್ಲಿ ನಾಳೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ (ಸಿಎಆರ್, ಮತ್ತು ಡಿಎಆರ್) ಹುದ್ದೆಗಳಿಗೆ ಪರೀಕ್ಷಾ (Police Exam) ಕೇಂದ್ರಗಳು ನಿಗದಿಯಾಗಿದೆ. ಈ ಕಾರಣದಿಂದ ನಗರದ ವಿವಿಧ ಕಾಲೇಜುಗಳ ಮುಂದೆ ನಿಷೇಧಾಜ್ಞೆ (Prohibition) ಜಾರಿ ಮಾಡಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Viral Story: ಮಹಿಳೆಯರ ಈ ನಗ್ನ ಫೋಟೋಶೂಟ್‌ ಹಿಂದಿದೆ ʼಬ್ರೆಸ್ಟ್‌ ಫ್ರೆಂಡ್ಸ್‌ʼ ಸ್ಟೋರಿ!

ಹಾಗಾಗಿ ಜನವರಿ 28 ರ ಭಾನುವಾರದಂದು ಚಿಕ್ಕಮಗಳೂರು ನಗರದ ವಿವಿಧ ಕಾಲೇಜು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ.

ಎಐಟಿ ಕಾಲೇಜು, ಸರ್ಕಾರಿ ಜೂನಿಯರ್ ಕಾಲೇಜು, ಬೇಲೂರು ರಸ್ತೆ, ಐಡಿಎಸ್‌ಜಿ ಪ್ರಥಮ ದರ್ಜೆ ಕಾಲೇಜು, ಎಸ್‌ಟಿಜೆ ಕಾಲೇಜು ಹಾಗೂ ಟಿಎಂಎಸ್ ಮತ್ತು ಜೆವಿಎಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮುಂದೆ 1973ರ ಕಲಂ 144 ಸೆಕ್ಷನ್‌ ಅನ್ವಯ ನಿಷೇಧಾಜ್ಞೆಯು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಪರೀಕ್ಷಾ ಕೇಂದ್ರದ 200 ಮೀಟರ್‌ ವ್ಯಾಪ್ತಿಯಲ್ಲಿ ಜಾರಿಯಲ್ಲಿರಲಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಜೊತೆಗೆ ಸುತ್ತ ಮುತ್ತ 200 ಮೀಟರ್ ಆವರಣದಲ್ಲಿ ಯಾವುದೇ ಜೆರಾಕ್ಸ್, ಬುಕ್ ಸ್ಟೋರ್ ತೆರೆಯದಂತೆ ಸೂಚನೆ ನೀಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Leave A Reply

Your email address will not be published.