Home Interesting Ayodhya rama : ಅಯೋಧ್ಯೆಯಲ್ಲಿ ಕನ್ನಡಿಗನಿಂದ ಕೆತ್ತಲ್ಪಟ್ಟ ಬಾಲ ರಾಮನ ವಿಗ್ರಹ ಮರಳಿ ಕರ್ನಾಟಕಕ್ಕೆ ?!

Ayodhya rama : ಅಯೋಧ್ಯೆಯಲ್ಲಿ ಕನ್ನಡಿಗನಿಂದ ಕೆತ್ತಲ್ಪಟ್ಟ ಬಾಲ ರಾಮನ ವಿಗ್ರಹ ಮರಳಿ ಕರ್ನಾಟಕಕ್ಕೆ ?!

Ayodhya rama

Hindu neighbor gifts plot of land

Hindu neighbour gifts land to Muslim journalist

Ayodhya rama: ಅಯೋಧ್ಯೆಯಲ್ಲಿರುವ, ಕನ್ನಡಿಗ ಗಣೇಶ್ ಭಟ್ ಕೆತ್ತಿದ ಬಾಲ ರಾಮನ ಮೂರ್ತಿಯನ್ನು ಮರಳಿ ಕರ್ನಾಟಕಕ್ಕೆ ತರುವ ಪ್ರಯತ್ನ ನಡೆಯುತ್ತಿದೆ.

ಅಯೋಧ್ಯೆಯಲ್ಲಿ ಬಾಲರಾಮನ(Ayodhya rama) ಪ್ರಾಣ ಪ್ರತಿಷ್ಠೆಯಾಗಿ ಇದೀಗ ವಿಶ್ವವೇ ಈ ಸಂಭ್ರಮವನ್ನು ಸಂಭ್ರಮಿಸುತ್ತಿದೆ. ಬಲರಾಮನ ಮೂರ್ತಿಯನ್ನು ಕೆತ್ತಲು ಮೂರು ಜನ ಶಿಲ್ಪಿಗಳು ಆಯ್ಕೆಯಾಗಿದ್ದು ಅದರಲ್ಲಿ ಇಬ್ಬರು ಕರ್ನಾಟಕದವರು ಎಂಬುದು ಹೆಮ್ಮೆಯ ಸಂಗತಿ. ಈಗಾಗಲೇ ಶಿಲ್ಪಿ ಅರುಣ್ ಯೋಗಿರಾಜ್(Arun yogiraj) ಅವರು ಕೆತ್ತಿದ ಮೂರ್ತಿಯನ್ನು ಗರ್ಭಗುಡಿಯೊಳಗೆ ಪ್ರತಿಷ್ಠಾಪನೆ ಮಾಡಲಾಗಿದೆ. ಇನ್ನೋರ್ವ ಕನ್ನಡಿಗರಾದ ಗಣೇಶ್ ಭಟ್(Ganesh bhat) ಕೆತ್ತಿರುವ ಬಾಲರಾಮನ ಮೂರ್ತಿಯನ್ನು ಮರಳಿ ಕರ್ನಾಟಕಕ್ಕೆ ತರುವ ಪ್ರಯತ್ನ ಇದೀಗ ನಡೆಯುತ್ತಿದೆ.

Ayodhya Rama

ಇದನ್ನೂ ಓದಿ: Bantwala: ಪತಿ ಮೇಲೆ ಕಾರು ಹತ್ತಿಸಿ ಕೊಲೆಯತ್ನ ಆರೋಪ; ಶಿಕ್ಷಕಿ ಪತ್ನಿ, ಸಹೋದ್ಯೋಗಿ ಮೇಲೆ ದೂರು ದಾಖಲು!!

ಹೌದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆದ ಬಳಿಕ ದೇಶದ ವಿವಿಧೆಡೆಯಲ್ಲೂ ರಾಮ ಮಂದಿರ ನಿರ್ಮಾಣ ಆಗುತ್ತಿದೆ. ಅಂತೆಯೇ ಇದೀಗ ನಮ್ಮ ರಾಜ್ಯದ ರಾಮನಗರದಲ್ಲೂ 20ಎಕರೆ ಜಾಗದಲ್ಲಿ ರಾಮ ಮಂದಿರ ನಿರ್ಮಾಣ ಆಗಲಿದೆ. ಜೊತೆಗೆ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯೊಳಗೆ ಪ್ರತಿಷ್ಠಾಪನೆಗೊಂಡ ರಾಮನ ಮೂರ್ತಿಯ ಕಲ್ಲು ದೊರೆತ ಹಾಗೂ ಗಣೇಶ್ ಭಟ್ ಅವರು ಕೆತ್ತಿದ ಮೂರ್ತಿಯ ಕಲ್ಲು ದೊರೆತ ಜಾತಗದಲ್ಲೂ ರಾಮ ಮಂದಿರ ನಿರ್ಮಾಣ ಆಗಲಿದೆ. ಹೀಗಾಗಿ ಈ ಎರಡೂ ಮಂದಿರಗಳಿಗೆ ಅಯೋಧ್ಯೆಯಲ್ಲಿ ಗಣೇಶ್ ಭಟ್ ಕೆತ್ತಿದ ವಿಗ್ರಹ ಬೇಕೆಂಬದು ಮಂದಿರ ನಿರ್ಮಾಣಕಾರರ ಮಹದಾಸೆ.

ಈ ಕುರಿತಂತೆ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಟ್ರಸ್ಟ್ ಗೂ ರಾಜ್ಯದ ಶಾಸಕರಾದ ಜಿ ಟಿ ದೇವೇಗೌಡ ಹಾಗೂ ಹುಸೇನ್ ಅವರು ಪತ್ರ ಬರೆದಿದ್ದಾರೆ. ಆದರೆ ಈ ಕುರಿತಂತೆ ಟ್ರಸ್ಟ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂದು ನೋಡಬೇಕಿದೆ. ಯಾಕೆಂದರೆ ಉಳಿದ ಎರಡೂ ಮೂರ್ತಿಗಳನ್ನು ಕೂಡ ಅಯೋಧ್ಯೆಯ ರಾಮ ಮಂದಿರದ ಪ್ರಾಂಗಣದೊಳಗೆ ಪ್ರತಿಷ್ಠಾಪಿಸಲಾಗುವುದು ಎಂದು ಟ್ರಸ್ಟ್ ಹೇಳಿದೆ. ಆದರೆ ರಾಜ್ಯದ ಬೇಡಿಕೆಗೆ ಟ್ರಸ್ಟ್ ಉತ್ತರವನ್ನು ಕಾದು ನೋಡಬೇಕಿದೆ.