Bantwala: ಪತಿ ಮೇಲೆ ಕಾರು ಹತ್ತಿಸಿ ಕೊಲೆಯತ್ನ ಆರೋಪ; ಶಿಕ್ಷಕಿ ಪತ್ನಿ, ಸಹೋದ್ಯೋಗಿ ಮೇಲೆ ದೂರು ದಾಖಲು!!

Bantwala: ಶಿಕ್ಷಕಿಯೊಬ್ಬರು ತನ್ನ ಸಹೋದ್ಯೋಗಿಯ ಜೊತೆ ಸೇರಿ ಪತಿಯ ಮೇಲೆ ಕಾರು ಹತ್ತಿಸಿ ಕೊಲೆಯತ್ನ ನಡೆಸಿರುವ ಘಟನೆಯೊಂದು ಬಂಟ್ವಾಳ ಪಾಣಿಮಂಗಳೂರಿನ ಮೆಲ್ಕಾರಿನಲ್ಲಿ ನಡೆದಿದೆ. ಇದೀಗ ಪತಿ ಎದೆನೋವಿಗೊಳಗಾಗಿ ಆಸ್ಪತ್ರೆಗೆ ಸೇರಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆ ಜ.23ರಂದು ನಡೆದಿದೆ. ಪತ್ರಿಕೆಯೊಂದರಲ್ಲಿ ಛಾಯಾಗ್ರಾಹಕರಾಗಿರುವ ಕಿಶೋರ್‌ ಕುಮಾರ್‌ ಬೋಳಾರ್‌ ಅವರು ನೀಡಿದ ದೂರಿನ ಪ್ರಕಾರ ಬಂಟ್ವಾಳ ನಗರ ಠಾಣೆಯಲ್ಲಿ ಕಿಶೋರ್‌ ಅವರ ಪತ್ನಿ ಶಿಕ್ಷಕಿ ಶುಭಾ ಮತ್ತು ಶಿಕ್ಷಕ ಶಿವಪ್ರಸಾದ್‌ ಶೆಟ್ಟಿ ಅವರ ಮೇಲೆ ದೂರು ದಾಖಲಾಗಿದೆ.

ಇದನ್ನೂ ಓದಿ: Dakshina Kannada: ದ.ಕ. ಜಿಲ್ಲೆಗೆ ಸಿಗದ ನಿಗಮ ಮಂಡಳಿ ಸ್ಥಾನಮಾನ; ಭಾರೀ ನಿರಾಸೆ!!!

ಶುಭಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಕಿಶೋರ್‌ ಅವರು ತಡೆಯಾಜ್ಞೆ ತಂದಿದ್ದರು. ಮೆಲ್ಕಾರಿನ ಸಾರಾ ಆರ್ಕೇಡ್‌ನಲ್ಲಿರುವ ಮನೆಯನ್ನು ತೆರವುಗೊಳಿಸಬೇಕೆಂದು ಶುಭಾ ಅವರು ದಾವೆ ಹೂಡಿದ್ದರು. ಇದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

ಜ.23 ರಂದು ಮೇಲ್ಕಾರಿನಲ್ಲಿರುವ ತನ್ನ ಮನೆಗೆ ಶುಭಾ, ಶಿವಪ್ರಸಾದ್‌ ಶೆಟ್ಟಿ ಹಾಗೂ ಇಬ್ಬರು ರೌಡಿಗಳೊಂದಿಗೆ ಬಂದಿದ್ದು, ಮನೆ ಖಾಲಿ ಮಾಡುವಂತೆ ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಆರೋಪ ಮಾಡಲಾಗಿದೆ ಎಂದು ವರದಿಯಾಗಿದೆ.

ಈ ಸಂದರ್ಭದಲ್ಲಿ ಆರೋಪಿ ಶಿವಪ್ರಸಾದ್‌ ಶೆಟ್ಟಿ ಅವರು ಶುಭಾಳನ್ನು ರಿಜಿಸ್ಟರ್‌ ಮದುವೆಯಾಗಿದ್ದಾಗಿ ಹೇಳಿರುವುದಾಗಿ ವರದಿಯಾಗಿದೆ. ಗಲಾಟೆ ಸಂದರ್ಭ ಆರೋಪಿಗಳು ಇನ್ನೋವಾ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದು, ಇವರನ್ನು ತಡೆಯಲು ಬಂದ ಕಿಶೋರ್‌ ಅವರ ಮೇಲೆ ಶಿವಪ್ರಸಾದ್‌ ಅವರು ವಾಹನ ಹತ್ತಿಸಿದ್ದಾರೆ ಎಂದು ವರದಿಯಾಗಿದೆ. ಕಾರು ಡಿಕ್ಕಿಯ ಆಘಾತದಿಂದ ಕಿಶೋರ್‌ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಅವರನ್ನು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave A Reply

Your email address will not be published.