Mangaluru News: ಕರಾವಳಿಯಲ್ಲಿ ತುಳುವರಿಂದ ಹೊಸ ಅಭಿಯಾನ!!! ಬೇಡಿಕೆ ಏನು?

Mangaluru Tulu Language: ತುಳು ಭಾಷೆಯ ಅಧಿಕೃತ ಸ್ಥಾನಮಾನಕ್ಕಾಗಿ ಕರಾವಳಿಗರು ಮುಂದಾಗಿದ್ದಾರೆ. ಜ.29 ರಿಂದ ಫೆ.2 ರವರೆಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಗಣ್ಯರು, ರಾಜಕಾರಣಿಗಳು, ಕಲಾವಿದರು, ವಿವಿಧ ಸಂಘ ಸಂಸ್ಥೆಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದೆ. ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ (8th Schedule) ಸೇರ್ಪಡೆ ಹಾಗೂ ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡ ಬೇಕೆನ್ನುವುದು ಹೋರಾಟಗಾರರ ಪ್ರಮುಖ ಬೇಡಿಕೆ.

ಇದನ್ನೂ ಓದಿ: Parliment election Survey: ಲೋಕಸಭಾ ಚುನಾವಣಾ- ಕರ್ನಾಟಕದಲ್ಲಿ ಬಿಜೆಪಿ ಗೆಲ್ಲೋ ಸೀಟುಗಳೆಷ್ಟು ಗೊತ್ತಾ? ಅಚ್ಚರಿ ಮೂಡಿಸಿದ ಸಮೀಕ್ಷಾ ವರದಿ

ಹಾಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 10 ಸಾವಿರ ಪತ್ರಗಳನ್ನು ಬರೆಯಲು ನಿರ್ಧರಿಸಲಾಗಿದೆ. ಈಗಾಗಲೇ ಇದಕ್ಕೆ ಜನ ಬೆಂಬಲ ದೊರಕಿದೆ. ತುಳು ಭಾಷೆ ಅಧಿಕೃತ ಲಿಪಿಯನ್ನು ಹೊಂದಿದೆ. ಹಾಗಾಗಿ ಸಂವಿಧಾನದಲ್ಲಿ ಈ ಭಾಷೆಗೆ 8ನೇ ಪರಿಚ್ಛೇದದಲ್ಲಿ ಸ್ಥಾನಮಾನ ಸಿಕ್ಕಲ್ಲಿ ಸಾಂವಿಧಾನಿಕ ಮಾನ್ಯತೆ ಸಿಗಲಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.

1 Comment
  1. […] ಇದನ್ನೂ ಓದಿ: Mangaluru News: ಕರಾವಳಿಯಲ್ಲಿ ತುಳುವರಿಂದ ಹೊಸ ಅಭಿಯ… […]

Leave A Reply

Your email address will not be published.