Kadaba: ತೋಡು ದಾಟುವಾಗ ಪಾಲದಿಂದ ನೀರಿಗೆ ಬಿದ್ದು ವ್ಯಕ್ತಿ ಸಾವು

ಕಡಬ: ನೀರು ಹರಿಯುವ ತೋಡಿಗೆ ಹಾಕಲಾಗಿದ್ದ ಪಾಲದಿಂದ ಕೆಳಕ್ಕೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಡಬ ತಾಲೂಕಿನ ಎಡಮಂಗಲದಿಂದ ವರದಿಯಾಗಿದೆ.

ಇದನ್ನೂ ಓದಿ: Mangaluru News: ಕರಾವಳಿಯಲ್ಲಿ ತುಳುವರಿಂದ ಹೊಸ ಅಭಿಯಾನ!!! ಬೇಡಿಕೆ ಏನು?

ಎಡಮಂಗಲ ಗ್ರಾಮದ ಕರಿಂಬಿಲ ಎಂಬಲ್ಲಿ ಶಶಿಕಲಾ ಶೆಟ್ಟಿ ಎಂಬವರ ಜಾಗದಲ್ಲಿ ಕೇರಳ ಮೂಲದ ಸುರೇಶ ಸತ್ಯವನ್ ಎಂಬವರು ರಬ್ಬರ್ ಟ್ಯಾಪಿಂಗ್ ಮಾಡುವ ಕೆಲಸ ಮಾಡಿಕೊಂಡಿದ್ದರು.

ಸುರೇಶ್ ಸತ್ಯವನ್ ಅವರ ತೋಟದಲ್ಲಿ ಸಣ್ಣ ತೋಡಿಗೆ ತಾತ್ಕಾಲಿಕವಾಗಿ ಹಾಕಿದ್ದ ಅಡಿಕೆ ಮರದ ಪಾಲದಲ್ಲಿ ದಾಟುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅಗ್ನಿ ಶಾಮಕದಳದವರು ಬಂದು ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ. ಈ ಬಗ್ಗೆ ಬಿಜು ಎಂಬವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.