India News: ಪಾಕ್‌ನಲ್ಲಿ ಮಂಗಳೂರಿನ ಏಜೆಂಟ್‌ರಿಂದ ಇಬ್ಬರು ಉಗ್ರರ ಹತ್ಯೆ; ಪಾಕಿಸ್ತಾನದಿಂದ ದಾಖಲೆ ಬಿಡುಗಡೆ!!!

Share the Article

India News: ಕೆನಡಾ ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆ ಹಿಂದೆ ಭಾರತದ ಏಜೆಂಟರು ಇದ್ದಾರೆಂಬ ಆರೋಪದ ಬೆನ್ನಲ್ಲಿಯೇ, ಅನಾಮಿಕ ವ್ಯಕ್ತಿಗಳಿಂದ ಕಳೆದ ವರ್ಷ ಪಾಕಿಸ್ತಾನದಲ್ಲಿ ಉಗ್ರರ ಸಾವಿಗೆ ಭಾರತೀಯ ಏಜೆಂಟರು ಕಾರಣ ಎಂದು ಪಾಕಿಸ್ತಾನ ಆರೋಪ ಮಾಡಿರುವ ಕುರಿತು ವರದಿಯಾಗಿದೆ. ಅಷ್ಟು ಮಾತ್ರವಲ್ಲದೇ ಇದಕ್ಕೆ ಪುರಾವೆ ಇದೆ ಎಂದು ಕೂಡಾ ಹೇಳಿಕೊಂಡಿದೆ.

ಇದನ್ನೂ ಓದಿ: Lakshmana savadi: ರಾಜ್ಯ ಕಾಂಗ್ರೆಸ್’ಗೆ ಮತ್ತೊಂದು ಶಾಕ್- ಶೆಟ್ಟರ್ ಬೆನ್ನಲ್ಲೇ ಲಕ್ಷ್ಮಣ ಸವದಿ ಬಿಜೆಪಿ ಸೇರ್ಪಡೆ!!

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಹತರಾದ ಇಬ್ಬರು ಉಗ್ರರ ಸಾವಿಗೆ ಭಾರತದ ಏಜೆಂಟ್‌ಗಳು ಕಾರಣ ಎಂದು ವರದಿಯಾಗಿದೆ. ಯೋಗೇಶ್‌, ಅಶೋಕ್‌ ಕುಮಾರ್‌ ಕಾರಣ ಎನ್ನಲಾಗಿದೆ. ಬಿಡುಗಡೆ ಮಾಡಲಾದ ಆಧಾರ್‌ ದಾಖಲೆಗಳಲ್ಲಿ ಅಶೋಕ್‌ ಕುಮಾರ್‌ ಆನಂದ್‌ ಮಂಗಳೂರಿನ ವಿಳಾಸ ಹೊಂದಿರುವುದಾಗಿ, ಯೋಗೇಶ್‌ ವಿಳಾಸ ರಾಜಸ್ಥಾನದ್ದಾಗಿದೆ. ಇವರಿಬ್ಬರು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಲಷ್ಕರ್‌ ಉಗ್ರ ರಿಯಾಜ್‌ ಅಹ್ಮದ್‌ ಹಾಗೂ ಅಕ್ಟೋಬರ್‌ನಲ್ಲಿ ಸಿಯಾಲ್‌ ಕೋಟ್‌ನಲ್ಲಿ ಜೈಷ್‌ ಉಗ್ರ ಶಾಹೀದ್‌ ಲತೀಫ್‌ ರನ್ನು ಮೊಹಮ್ಮದ್‌ ಉಮ್ಮೇರ್‌ ಎಂಬುವರಿಂದ ಹತ್ಯೆ ಮಾಡಿಸಿದ್ದರು ಎಂದು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಆರೋಪ ಮಾಡಿದ್ದಾರೆ.

ಭಾರತ ಸರಕಾರ ಈಗಾಗಲೇ ಪಾಕಿಸ್ತಾನಕ್ಕೆ ಭಾರತ ಸೇರಿ ಹಲವು ದೇಶಗಳು ಎಚ್ಚರಿಕೆ ನೀಡಿದೆ. ಪಾಕಿಸ್ತಾನ ತಾನು ಮಾಡಿದ ತಪ್ಪನ್ನು ಮುಚ್ಚಿಡಲು ಬೇರೆಯವರನ್ನು ದೂಷಿಸುತ್ತಿದೆ ಎಂದು ಭಾರತ ಸರಕಾರ ಕಿಡಿಕಾರಿದೆ.

Leave A Reply