Drone prathap: ಬಿಗ್ ಬಾಸ್’ನಿಂದ ಡ್ರೋನ್ ಪ್ರತಾಪ್ ಔಟ್ ?!

Share the Article

Drone prathap: ಬಿಗ್ ಬಾಸ್ ಸೀಸನ್-10 ಮುಕ್ತಾಯ ಹಂತದಲ್ಲಿದ್ದು ಇನ್ನೇನು ಕೆಲವೇ ವಾರದಲ್ಲಿ ಮುಗಿಯಲಿದೆ. ಸ್ಪರ್ಧಿಗಳ ಅಭಿಮಾನಿಗಳು, ಪ್ರೇಕ್ಷಕರು ಫಿನಾಲೆ ನೋಡಲು ಕಾತರರಾಗಿದ್ದಾರೆ. ಆದರೆ ಈ ನಡುವೆ ಬಿಗ್ ಶಾಕ್ ಒಂದು ಎದುರಾಗಿದ್ದು, ಕೆಲವೇ ಸಮಯದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ ಡ್ರೋನ್ ಪ್ರತಾಪ್(Drone prathap) ಮನೆಯಿಂದ ಔಟ್ ಆಗಿದ್ದಾರೆ ಎಂಬ ಸುದ್ದಿ ಸದ್ದುಮಾಡುತ್ತಿದೆ.

ಇದನ್ನೂ ಓದಿ: Ram Lalla ನ ದರ್ಶನ ಪಡೆಯಲು ಮೊದಲ ದಿನವೇ ಗರ್ಭ ಗುಡಿ ಪ್ರವೇಶಿಸಿದ ರಾಮನ ಭಂಟ ಮಾರುತಿ!!

ಹೌದು, ಬಿಗ್ ಬಾಸ್ ಮನೆಯಿಂದ ತನಿಷಾ, ನಮ್ರತಾ ಮನೆಯಿಂದ ಹೊರನಡೆದ ಬಳಿಕ ಬಿಗ್ ಬಾಸ್ ಪ್ರೇಕ್ಷಕರಿಗೆ ಕಾತರ ಹೆಚ್ಚಾಗಿದೆ. ಈ ಸೀಸನ್ ಅಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಹೆಚ್ಚಿನ ಅಭಿಮಾನಿಗಳಿಗೆ ಡ್ರೋನ್ ಪ್ರತಾಪ್ ಗೆಲ್ಲಬೇಕೆಂಬುದು ಆಸೆ. ಆದರೀಗ ಡ್ರೋನ್ ಪ್ರತಾಪ್ (Drone Prathap) ಎಲಿಮಿನೇಟ್ ಆಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅಂದಹಾಗೆ ಬಿಗ್ ಬಾಸ್ ಮನೆಗೆ ಕಾಲಿಡುವ ಮುನ್ನ ಡ್ರೋನ್ ಪ್ರತಾಪ್ ಸಾಕಷ್ಟು ವಿಚಾರವಾಗಿ ಟ್ರೋಲ್ (Troll) ಆಗಿದ್ದರು. ಆದರೆ ಬಿಗ್ ಬಾಸ್‌ಗೆ ಬಂದ್ಮೇಲೆ ಪ್ರತಾಪ್ ಮೇಲಿನ ನೆಗೆಟಿವ್ ಅಂಶಗಳು ಪಾಸಿಟಿವ್ ಆಗಿದ್ದವು. ಇದೀಗ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಪ್ರತಾಪ್ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಸುಳ್ಳಾ ಎಂದು ಕಾದು ನೋಡಬೇಕಿದೆ.

Leave A Reply