Future Prediction: ಜನವರಿ 22 ರಂದು ಹುಟ್ಟಿದ ಮಕ್ಕಳ ಭವಿಷ್ಯ ಹೇಗಿರುತ್ತೆ ಗೊತ್ತಾ?? ಇವರಷ್ಟು ಅದೃಷ್ಟವಂತರು ಮತ್ತೊಬ್ಬರಿಲ್ಲ!!

Future Prediction: ಅಯೋಧ್ಯೆಯಲ್ಲಿ ರಾಮ ಮಂದಿರದ (Ayodhya Ram Mandir)ಉದ್ಘಾಟನೆಯ ಶುಭ ದಿನದಂದು ತಾಯ್ತನ ಆನಂದಿಸಲು ಎದುರು ನೋಡುತ್ತಿರುವ ಗರ್ಭಿಣಿಯರು, ತಮಗೆ ಜನಿಸುವ ಮಗು ಜನವರಿ 22ರಂದೇ ಆಗಬೇಕು ಎಂದು ವೈದ್ಯರ ಬಳಿ ದುಂಬಾಲು ಬೀಳುತ್ತಿದ್ದಾರಂತೆ.

 

ಇದನ್ನೂ ಓದಿ: Rama mandir donation: ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕೆ ಅತೀ ಹೆಚ್ಚು ದೇಣಿಗೆ ನೀಡಿದ್ದು ಇವರೇ ನೋಡಿ

ಜನವರಿ 22 ಬಹಳ ವಿಶೇಷವಾದ ದಿನ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ರಾಮನ ಪ್ರಾಣ ಪ್ರತಿಷ್ಠೆಯ ಈ ಶುಭ ಸಂದರ್ಭದಲ್ಲಿ12 ಶುಭಯೋಗಗಳು ರೂಪುಗೊಳ್ಳುತ್ತಿದೆ. ಈ ದಿನ ಹುಟ್ಟುವ ಮಕ್ಕಳ ಭವಿಷ್ಯ ಹೇಗಿರಲಿದೆ (Future Prediction)ಗೊತ್ತಾ??ಜನವರಿ 22ರಂದು12ಕ್ಕೂ ಹೆಚ್ಚು ಶುಭ ಯೋಗಗಳು ರೂಪುಗೊಳ್ಳಲಿದ್ದು, ಈ ದಿನ ಮತ್ತು ವಿಶೇಷವಾಗಿ ಅಭಿಜಿತ್ ಮುಹೂರ್ತದಲ್ಲಿ ಜನಿಸಿದ ಮಕ್ಕಳು ಅತ್ಯಂತ ಯಶಸ್ವಿ ಮತ್ತು ಉಜ್ವಲ ಭವಿಷ್ಯವನ್ನು ಹೊಂದಿರುತ್ತಾರೆ ಎನ್ನಲಾಗುತ್ತದೆ.

ಈ ದಿನ ಹುಟ್ಟಿದ ಮಕ್ಕಳು ಹೆಚ್ಚಾಗಿ ಕಲಾತ್ಮಕ ಪ್ರಯತ್ನಗಳಿಂದ ಜೀವನ ಮಾಡುವ ಸಾಮರ್ಥ್ಯವನ್ನ ಹೊಂದಿರುತ್ತಾರೆ. ಇವರು ತಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ವರ್ಷಗಳು ಬೇಕಾಗಬಹುದು. ಇವರು ಯಾರೇ ಮೋಸ ಮಾಡಿದರೂ ಕೂಡ ಅವರನ್ನು ಮತ್ತೆ ಮತ್ತೆ ನಂಬುವ ತಪ್ಪನ್ನು ಮಾಡುತ್ತಾರಂತೆ.

ಖ್ಯಾತಿ ಮತ್ತು ಪಾರಿಜಾತ ಯೋಗ ರೂಪುಗೊಂಡ ಸಮಯದಲ್ಲಿ ಮಕ್ಕಳು ಜನಿಸಿದರೆ ಅವರಷ್ಟು ಅದೃಷ್ಟವಂತರು ಮತ್ತೊಬ್ಬರಿಲ್ಲವಂತೆ. ಈ ಮಕ್ಕಳಿಗೆ ಸಮಾಜದಲ್ಲಿ ವಿಶೇಷ ಗೌರವ ಮತ್ತು ಪ್ರತಿಷ್ಠೆಗಳು ದೊರೆಯುವುದಲ್ಲದೆ ಹಣಗಳಿಸಲು ಸುವರ್ಣ ಅವಕಾಶಗಳು ಸಿಗುತ್ತವೆ. ಚಾಮರ ಯೋಗ ಮತ್ತು ದೀರ್ಘಾಯು ಯೋಗದ ಸಮಯದಲ್ಲಿ ಮಗು ಜನಿಸಿದರೆ ಶ್ರೀಮಂತ ಮತ್ತು ಉತ್ತಮ ಆರೋಗ್ಯವನ್ನು ಹೊಂದಿರಲಿದೆಯಂತೆ. ಆ ಮಗುವಿಗೆ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಅಷ್ಟೇ ಅಲ್ಲದೆ, ಅವರ ಆಯಸ್ಸು ಕೂಡ ಜಾಸ್ತಿ ಇರುತ್ತದೆ.

Leave A Reply

Your email address will not be published.