Accident: ಓಮ್ನಿ – ಜೀಪ್ ನಡುವೆ ಭೀಕರ ಅಪಘಾತ; ಇಬ್ಬರು ಸಾವು; ಕಾರು ಫುಲ್ ಜಖಂ!!
Accident: ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಸಮೀಪದಲ್ಲಿ ಬುಧವಾರ ಮಾರುತಿ ಓಮ್ಮಿ ಮತ್ತು ಬೊಲೆರೋ ಜೀಪ್ ನಡುವೆ ಭೀಕರ ಅವಘಡ (Accident)ಸಂಭವಿಸಿದ್ದು, ಈ ಸಂದರ್ಭ ತಂದೆ ಮತ್ತು ಮಗಳು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಇದನ್ನೂ ಓದಿ: Elephant Attack: ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ, ಅಟ್ಟಾಡಿಸಿದ ಆನೆ; ಮಹಿಳೆ ಮೃತ!!
ಓಮ್ಮಿ ವಾಹನಕ್ಕೆ ಬೋಯಿಕೇರಿಗೆ ತೋಟದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿರಿಯಾಪಟ್ಟಣ ತಾಲೂಕಿನ ಚನಕಲ್ ಕಾವಲ್‌ನ ಬೊಲೆರೋ ಜೀಪ್ ಢಿಕ್ಕಿಯಾಗಿದ್ದು, ಈ ಸಂದರ್ಭ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಮೃತಪಟ್ಟವರನ್ನು ಓಮ್ಮಿ ಚಲಾಯಿಸುತ್ತಿದ್ದ ಮಾಜಿ ಯೋಧರಾದ ಬಸವನಹಳ್ಳಿ ನಿವಾಸಿ ರಾಜೇಶ್ ದೇವಯ್ಯ (38) ಮತ್ತು ಅವರ ಪುತ್ರಿ ನ್ಯಾನ್ಸಿ ಬೊಳ್ಳಮ್ಮ (3) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: Adhar card: ಆಧಾರ್ ಕಾರ್ಡ್ ವಿಚಾರದಲ್ಲಿ ಮಹತ್ವದ ಬದಲಾವಣೆ ತಂದ ಸರ್ಕಾರ- ಇನ್ಮುಂದೆ ಈ ಕೆಲಸಕ್ಕೆ ಆಧಾರ್ ದಾಖಲೆಯಲ್ಲ !!
ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ನ್ಯಾನ್ಸಿ ಮಡಿಕೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಅವಘಡದ ಪರಿಣಾಮ ಡಿಕ್ಕಿಯ ರಭಸಕ್ಕೆ ಓಮ್ಮಿ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ತಿಳಿದು ಬಂದಿದೆ.ಬೊಲೆರೋ ಚಾಲಕ ಅರುಣ್, ಕಾರ್ಮಿಕ ಮಹಿಳೆಯರಾದ ಜಯಲಕ್ಷ್ಮೀ ಹಾಗೂ ನೀಲಮ್ಮ ಅವರಿಗೂ ಗಂಭೀರ ಗಾಯಗಳಾಗಿದ್ದು, ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ