Lovers rule: ಗರ್ಲ್ ಫ್ರೆಂಡ್ ಮಾಡಿಕೊಳ್ಳಲು ಇನ್ಮುಂದೆ ಬೇಕು ಸರ್ಕಾರದ ಪರ್ಮಿಷನ್ – ಬಂದೇ ಬಿಡ್ತು ನೋಡಿ ಹೊಸ ಕಾನೂನು
Lovers rule: ನಮ್ಮ ಮನಸ್ಸಿಗೆ ಯಾರು ಹತ್ತಿರಾಗುತ್ತಾರೋ, ಯಾವ ಹುಡುಗಿಯ ಸ್ವಭಾವ ಇಷ್ಟ ಆಗುತ್ತದೆಯೋ, ಆಕೆಯ ಒಪ್ಪಿದರೆ ಆಕೆಯನ್ನು ಗರ್ಲ್ ಫ್ರೆಂಡ್ ಅಥವಾ ಪ್ರೇಯಸಿಯನ್ನಾಗಿ ಮಾಡಿಕೊಳ್ಳುತ್ತೇವೆ. ಅದೃಷ್ಟ ಚೆನ್ನಾಗಿದ್ರೆ ಮನೆಯವರೆಲ್ಲಾ ಒಪ್ಪಿ ಮದುವೆಯೂ ಆಗುತ್ತೇವೆ. ಆದರಿನ್ನು ಹಾಗಿಲ್ಲ. ಏಕೆಂದರೆ ಇನ್ಮುಂದೆ ಗರ್ಲ್ ಫ್ರೆಂಡ್ ಮಾಡಿಕೊಳ್ಳಲು ಸರ್ಕಾರ ಕೂಡ ಒಪ್ಪಬೇಕು.
ಇನ್ಮುಂದೆ ಗರ್ಲ್ ಫ್ರೆಂಡ್(girlfriend)ಮಾಡಿಕೊಳ್ಳಲು ಹುಡುಗಿ ಒಪ್ಪಿದ್ರೆ ಸಾಲದು. ಸರ್ಕಾರ ಕೂಡ ಒಪ್ಪಬೇಕು. ಅರೆ ಏನಪ್ಪಾ ಇದು ಹೊಸ ಸಮಸ್ಯೆ? ಹುಡುಗಿ ಸಿಗೋದೇ ಕಷ್ಟ, ಸಿಕ್ಕಿದರೂ ಅವಳ ಒಪ್ಪುವುದು ಕಷ್ಟ. ಅಂತದ್ರಲ್ಲಿ ಅವಳು ಒಪ್ಪಿದ್ರೂ ಸರ್ಕಾರದ ಅನುಮತಿ ಬೇರೆ ಪಡೀಬೇಕಾ? ಎಂದು ಚಿಂತಿಸ್ತಿದ್ದೀರಾ? ಹಾಗಿದ್ರೆ ಚಿಂತೆ ಬಿಡಿ. ಯಾಕೆಂದರೆ ಈ ಕಾನೂನು ಜಾರಿಯಾಗಲು ಹೊರಟಿರುವುದು ನಮ್ಮ ಭಾರತದಲ್ಲಿ ಅಲ್ಲ. ಬದಲಿಗೆ ನಮ್ಮ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿ.
ಹೌದು, ಪಾಕಿಸ್ತಾನದ(Pakisthana) 2024 ರ ಚುನಾವಣೆಯ 7 ವಿಚಿತ್ರ ಕಾನೂನುಗಳನ್ನು ಜಾರಿಗೊಳಿಸಿದೆ. ಅವುಗಳೆಲ್ಲವೂ ಕಾನೂನು ಮಾನ್ಯತೆಯನ್ನೂ ಪಡೆದಿವೆ. ಅವುಗಳಲ್ಲಿ ಈ ಪ್ರೇಯಸಿ ಅಥವಾ ಪ್ರಿಯತಮನನ್ನು ಪಡೆಯಲು ಸರ್ಕಾರದ ಅನುಮತಿ ಪಡೆಯುವುದು ಕೂಡ ಒಂದಾಗಿದೆ.
ಭಾರತದಲ್ಲಿ, ನ್ಯಾಯಾಲಯವು ವಯಸ್ಕ ಹುಡುಗರು ಮತ್ತು ಹುಡುಗಿಯರಿಗೆ ತಮ್ಮ ಆಯ್ಕೆಯ ಸ್ವತಂತ್ರ್ಯ ನೀಡಿದೆ. ಹೆಚ್ಚಿನ ಎಲ್ಲಾ ದೇಶಗಳಲ್ಲೂ ಯುವಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿರುತ್ತೆ. ಆದರೆ, ಪಾಕಿಸ್ತಾನದಲ್ಲಿ ಹಾಗಿಲ್ಲ. ಗರ್ಲ್ ಫ್ರೆಂಡ್ (girlfriend) ಅಥವಾ ಬಾಯ್ ಫ್ರೆಂಡ್ ಹೊಂದಲು ಅನುಮತಿ ಪಡೆಯಬೇಕು. ಲಿವ್ ಇನ್ ರಿಲೇಶನ್ ಶಿಪ್ ಗಂತೂ ಕಾನೂನು ಒಪ್ಪೋದೆ ಇಲ್ಲ. ಒಟ್ಟಿನಲ್ಲಿ ವಿಚಿತ್ರ ಕಾನೂನನ್ನು ಈ ದೇಶ ಜಾರಿಗೊಳಿಸಿದೆ.