Killer Mother: ತಾಯಿಯೇ ಮಗುವನ್ನು ಕೊಂದ ಪ್ರಕರಣ – 12 ಗಂಟೆ ಜರ್ಮನಿಯ ರೋಚಕ ಅನುಭವ ಬಿಚ್ಚಿಟ್ಟ ಕ್ಯಾಬ್ ಡ್ರೈವರ್!!
Killer Mother: ಕಂಪನಿಯೊಂದರ ಸಿಇಓ ಸುಚನಾ ಸೇಠ್ (Suchana Seth) ತನ್ನದೇ ಮಗುವನ್ನು ಗೋವಾದ ಹೋಟೆಲ್‍ನಲ್ಲಿ ಹತ್ಯೆಗೈದು ಸೂಟ್‍ಕೇಸ್‍ನಲ್ಲಿ ತರುವಾಗ ಚಿತ್ರದುರ್ಗ (Chitradurga) ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು. ಈಕೆಯನ್ನು ಸುಲಭವಾಗಿ ಪೊಲೀಸರ ಕೈಗೊಪ್ಪಿಸಲು ಸಹಾಯ ಮಾಡಿದ್ದು ಕ್ಯಾಬ್ ಡ್ರೈವರ್ ರೇಜಾನ್ ಡಿಸೋಜಾ. ಇದೀಗ ಈ ಡ್ರೈವರ್ ಸುಚನಾ ಸೇಠ್ ಬಗ್ಗೆ ಮಾತನಾಡಿದ್ದಾರೆ.
ಹೌದು, ಖಾಸಗಿ ಟಿವಿಯೊಂದಿಗೆ ಮಾತನಾಡಿರುವ ರೇಜಾನ್ ಡಿಸೋಜಾ ಉತ್ತರ ಗೋವಾದ ಕಾಂಡೋಲಿಮ್‌ನಲ್ಲಿರುವ ಸೋನ್ ಬನ್ಯನ್ ಗ್ರಾಂಡೆ ಸರ್ವೀಸ್ ಅಪಾರ್ಟ್‌ಮೆಂಟ್‌ನಿಂದ ಜನವರಿ 7 ರಂದು ನನಗೆ ಕರೆ ಬಂದಿತ್ತು. ಮಹಿಳೆಯೊಬ್ಬರು ಬೆಂಗಳೂರಿಗೆ ಪ್ರಯಾಣ ಮಾಡಬೇಕಿದೆ ಎಂದು ಅವರು ತಿಳಿಸಿದ್ದರು. ಮಧ್ಯರಾತ್ರಿ 12.30ಕ್ಕೆ ನಾನು ಹಾಗೂ ಇನ್ನೊಬ್ಬ ಡ್ರೈವರ್ ಅಪಾರ್ಟ್‌ಮೆಂಟ್ ಬಳಿ ಬಂದಿದ್ದೆವು ಎಂದು ಡಿಸೋಜಾ ತಿಳಿಸಿದ್ದಾರೆ.
ಸುಚನಾ ಸೇಠ್ ಹಾಗೂ ಆಕೆಯ ಪುತ್ರನ ಮೃತದೇಹವಿದ್ದ ಸೂಟ್‌ಕೇಸ್‌ಅನ್ನು ಹೊತ್ತ ಕಾರ್‌ಅನ್ನು ರೇಜಾನ್ ಡಿಸೋಜಾ 12 ಗಂಟೆಗಳ ಕಾಲ ಡ್ರೈವ್ ಮಾಡಿದ್ದಾಗಿ ಹೇಳಿದ್ದಾನೆ. ಅಲ್ಲದೆ ಕಾರ್‌ನಲ್ಲಿ ಕುಳಿತ ಕ್ಷಣದಿಂದಲೂ ಸುಚನಾ ಸೇಠ್ ನಡವಳಿಕೆ ಅನುಮಾನಾಸ್ಪದವಾಗಿತ್ತು. ಗೋವಾದಲ್ಲಿ ಅವರು ಸೂಟ್‌ಕೇಸ್‌ಅನ್ನು ಕಾರ್‌ಗೆ ಹಾಕುವ ವೇಳೆ, ನಿಮ್ಮ ಸೂಟ್‌ಕೇಸ್ ಯಾಕೆ ಇಷ್ಟು ಭಾರವಿದೆ ಎಂದೂ ನಾನು ಅವರಿಗೆ ಕೇಳಿದ್ದೆ. ಕೆಲವು ಲಿಕ್ಕರ್ ಬಾಟಲಿಗಳು ಅದರಲ್ಲಿವೆ ಎಂದು ಹೇಳಿದಳು ಎಂದು ತಿಳಿಸಿದ್ದಾರೆ.
ಜರ್ಮನಿ ಮಾಠುವಾಗ ಆಕೆ ಸುಮ್ಮನೇ ಇದ್ದರು. ಏನನ್ನೂ ಮಾತನಾಡಲಿಲ್ಲ. ಒಂದೆಡೆ ನೀರಿನ ಬಾಟಲಿಗಾಗಿ ಮಾತ್ರ ಕಾರ್ ನಿಲ್ಲಿಸಲು ಹೇಳಿದ್ದಳು. ಗೋವಾ-ಕರ್ನಾಟಕ ಗಡಿಯಲ್ಲಿ ನಮಗೆ ರೋಡ್‌ಬ್ಲಾಕ್ ಎದುರಾಗಿತ್ತು. ಇದರಿಂದ ಪ್ರಯಾಣ ನಾಲ್ಕು ಗಂಟೆ ತಡವಾಗಿತ್ತು. ಅಷ್ಟು ತಡವಾಗಿದ್ದರೂ ಕೂಡ ಸುಚನಾ ತಾಳ್ಮೆಗೆಡಲಿಲ್ಲ. ನಿಮಗೆ ಅರ್ಜೆಂಟ್ ಆಗಿ ಹೋಗಬೇಕಿದ್ದಲ್ಲಿ ಇಲ್ಲಿಂದಲೇ ಯೂ ಟರ್ನ್ ಮಾಡಿ ನಿಮಗೆ ಏರ್‌ಪೋರ್ಟ್‌ಗೆ ಡ್ರಾಪ್ ಮಾಡುತ್ತೇನೆ ಎಂದು ನಾನು ಹೇಳಿದೆ. ಆದರೆ, ಸುಚನಾ ಸೇಠ್ ಇದನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ, ಟ್ರಾಫಿಕ್ ಕ್ಲಿಯರ್ ಆಗುವವರೆಗೂ ಕಾಯುವುದಾಗಿ ತಿಳಿಸಿದ್ದರು ಎಂದಿದ್ದಾರೆ.
ಇನ್ನು ನಾವು ಕರ್ನಾಟಕ ಗಡಿ ಪ್ರವೇಶಿಸಿದ ಬಳಿಕ ಗೋವಾ ಪೊಲೀಸ್ ನನ್ನನ್ನು ಸಂಪರ್ಕಿಸಿದ್ದರು. ಅದಲ್ಲದೆ, ಹೋಟೆಲ್ ರೂಮ್‌ನಲ್ಲಿ ಮಗುವಿನ ದೇಹ ಪತ್ತೆಯಾಗಿದೆ ಎಂದು ತಿಳಿಸಿದ್ದರು. ಕೊನೆಗೆ ಏನೂ ತಿಳಿಯದಂತೆ ನಾನು ಅವರನ್ಶು ಹತ್ತಿರದ ಪೊಲೀಸ್ ಠಾಣೆಗೆ ಅತ್ಯಂತ ಗೌಪ್ತವಾಗಿ ಕರೆತಂದೆ. ಪೊಲೀಸ್ ಠಾಣೆಗೆ ಬಂದ ಬೆನ್ನಲ್ಲಿಯೇ ಸುಚನಾ ಅವರನ್ನು ಕರ್ನಾಟಕ ಪೊಲೀಸ್‌ಗೆ ಒಪ್ಪಿಸಿದ್ದಾರೆ. ಈ ವೇಳೆ ಕಾರ್ ಹಾಗೂ ಸೂಟ್‌ಕೇಸ್‌ನ ಪರಿಶೀಲನೆ ಮಾಡಿದಾಗ, ಮಗುವಿನ ಶವ ದೇಹ ಪತ್ತೆಯಾಗಿತ್ತು ಎಂದಿದ್ದಾರೆ.
ಏನಿದು ಪ್ರಕರಣ?
ಸುಚನಾ ಸೇಠ್ ಗೋವಾದ ಹೋಟೆಲ್ ಒಂದರಲ್ಲಿ ತನ್ನ ಮಗುವನ್ನು ಹತ್ಯೆಗೈದು ಸೂಟ್‍ಕೇಸ್‍ನಲ್ಲಿ ತರುವಾಗ ಹೊಟೇಲ್ ಸಿಬ್ಬಂದಿ ಹಾಗೂ ಕಾರು ಚಾಲಕನ ಸಮಯ ಪ್ರಜ್ಞೆಯಿಂದ ಚಿತ್ರದುರ್ಗ (Chitradurga) ಪೊಲೀಸರಿಗೆ (Police) ಒಪ್ಪಿಸಲಾಗಿತ್ತು. ಮಹಿಳೆಯ ಸೂಟ್‍ಕೇಸ್ ಪರಿಶೀಲಿಸಿದಾಗ ಮಗುವಿನ ಮೃತದೇಹ ಪತ್ತೆಯಾಗಿತ್ತು. ಬಳಿಕ ಪೊಲೀಸರು ಆಕೆಯನ್ನು ಬಂಧಿಸಿ ಗೋವಾ ಪೊಲೀಸರಿಗೆ ಒಪ್ಪಿಸಿದ್ದರು.