UP News: ರಾತ್ರಿ ಬೆಳಗಾಗುವಷ್ಟರಲ್ಲಿ ಒಂದೇ ಕುಟುಂಬದ ಐವರ ಸಾವು!!! ಕಾರಣವೇನು ಗೊತ್ತೇ?

Share the Article

UP News: ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿರುವ ಘಟನೆಯೊಂದು ಉತ್ತರ ಪ್ರದೇಶದ ಆಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಐವರು ಮಕ್ಕಳು ಉಸಿರುಗಟ್ಟಿ ಸಾವು ಕಂಡಿದ್ದಾರೆ. ಮನೆಯೊಳಗೆ ಕಲ್ಲಿದ್ದಲ್ಲನ್ನು ಸುಟ್ಟಿದ್ದು, ಅದರ ಹೊಗೆ ದಟ್ಟವಾಗಿ ತುಂಬಿತ್ತು. ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿದೆಯೇ ಎನ್ನುವುದರ ಕುರಿತು ತನಿಖೆ ನಡೆಯುತ್ತಿದೆ.

ಒಂದೇ ಕುಟುಂಬದ ಏಳು ಮಂದಿ ಮಲಗಲು ಹೋಗಿದ್ದು, ಮಂಗಳವಾರ ಸಂಜೆಯಾದರೂ ಬಾಗಿಲು ತೆರೆಯದೇ ಇದ್ದುದ್ದನ್ನು ಕಂಡು ಅಕ್ಕಪಕ್ಕದ ಮನೆಯವರಿಗೆ ಅನುಮಾನ ಉಂಟಾಗಿತ್ತು. ಅನಂತರ ಬಾಗಿಲು ಮುರಿದು ಮನೆಗೆ ನುಗ್ಗಿದಾಗ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Mangaluru: ಎದೆಹಾಲು ಗಂಟಲಲ್ಲಿ ಸಿಲುಕಿ ಎರಡೂವರೆ ತಿಂಗಳ ಮಗು ಸಾವು!!!

ರಹೀಜುದ್ದೀನ್‌ ಎಂಬುವವರಿಗೆ ಸೇರಿದ ಕುಟುಂಬ ಇದಾಗಿದ್ದು, ಅವರ ಮೂವರು ಮಕ್ಕಳು, ಸಂಬಂಧಿಕರ ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ. ಪತ್ನಿ ಹಾಗೂ ಸಹೋದರನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.

Leave A Reply