Home latest Suchana Seth Arrest: ಗೋವಾ ಹೋಟೆಲ್‌ನಲ್ಲಿ ಮಗು ಹತ್ಯೆ ಮಾಡಿದ ಸ್ಟಾರ್ಟ್‌ ಅಪ್‌ ಫೌಂಡರ್ &‌...

Suchana Seth Arrest: ಗೋವಾ ಹೋಟೆಲ್‌ನಲ್ಲಿ ಮಗು ಹತ್ಯೆ ಮಾಡಿದ ಸ್ಟಾರ್ಟ್‌ ಅಪ್‌ ಫೌಂಡರ್ &‌ ಸಿಇಒ!! ಸೂಟ್‌ಕೇಸ್‌ನಲ್ಲಿ ಶವ ಸಾಗಿಸುವಾಗ ಸುಚನಾ ಅರೆಸ್ಟ್‌!!!

Suchana Seth Arrest

Hindu neighbor gifts plot of land

Hindu neighbour gifts land to Muslim journalist

Murder: ಗೋವಾದ ಹೋಟೆಲೊಂದರಲ್ಲಿ ತನ್ನ ಮಗುವಿನ ಹತ್ಯೆ ಮಾಡಿ ಸೂಟ್‌ಕೇಸ್‌ನಲ್ಲಿ ಸಾಗಿಸಿದ ಆರೋಪದ ಮೇಲೆ ಸ್ಟಾರ್ಟ್‌ ಅಪ್‌ ಫೌಂಡರ್‌ & ಸಿಇಓ ಆಗಿರುವ ಸುಚನಾ ಸೇಠ್‌ (Suchana Seth) ಅವರನ್ನು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಠಾಣೆ ಪೊಲೀಸರು ಬಂಧಿಸಿರುವ ಘಟನೆಯೊಂದು ನಡೆದಿದೆ.

ತಮ್ಮ ಮಗನ ಜೊತೆ ಗೋವಾದ ಹೋಟೆಲ್‌ನಲ್ಲಿ ತಂಗಿದ್ದ ಸುಚನಾ ಸೇಠ್‌ ತಮ್ಮ ಮಗನ ಹತ್ಯೆ ಮಾಡಿರುವ ಕುರಿತು ಆರೋಪ ಕೇಳಿ ಬಂದಿದೆ.

ಗೋವಾದ ಹೋಟೆಲ್‌ನಲ್ಲಿ ತಮ್ಮ ಮಗನೊಂದಿಗೆ ಉಳಿದುಕೊಳ್ಳಲು ಬಂದಿದ್ದ ಸುಚನಾ ಅವರು ಬೆಂಗಳೂರಿಗೆ ಹೊರಡಲೆಂದು ಸೂಟ್‌ಕೇಸ್‌ ಹಿಡಿದು ಟ್ಯಾಕ್ಸಿಯತ್ತ ಹೊರಟಾದ ಹೋಟೆಲ್‌ ಸಿಬ್ಬಂದಿ ನಿಮ್ಮ ಜೊತೆ ಬಂದಿದ್ದ ಮಗು ಎಲ್ಲಿ ಎಂದು ಕೇಳಿದಾಗ, ಅವನನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದೇನೆಂದು ಸುಳ್ಳು ಹೇಳಿ ಕೂಡಲೇ ಟ್ಯಾಕ್ಸಿ ಹತ್ತಿ ಬೆಂಗಳೂರಿನತ್ತ ತೆರಳಿದ್ದಾರೆ.

ಇದನ್ನೂ ಓದಿ: Ration Card ನಲ್ಲಿ ನಿಮ್ಮ ಮಕ್ಕಳ ಹೆಸರು ಸೇರಿಸಬೇಕಾ?? ಬಂದಿದೆ ಹೊಸ ನಿಯಮ; ಈಗಲೇ ತಿಳಿದುಕೊಳ್ಳಿ!

ಆದರೆ ಹೋಟೆಲ್‌ನವರಿಗೆ ಅನುಮಾನ ಬಂದಿದ್ದು, ರೂಂ ಸ್ವಚ್ಛಗೊಳಿಸಲು ಹೋಗಿದ್ದು ಅಲ್ಲಿ ರಕ್ತದ ಕಲೆಗಳು ಕಂಡು ಬಂದಿದೆ. ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಹೈವೇ ಬಳಿ ಪೊಲೀಸ್‌ ಠಾಣೆ ಯ ಸಮೀಪ ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದು, ಪೊಲೀಸರು ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ 4 ರ ಐಮಂಗಲ ಠಾಣೆ ಬಳಿ ಟ್ಯಾಕ್ಸಿ ನಿಲ್ಲಿಸಿದ್ದು ಐಮಂಗಲ ಪೊಲೀಸರಿಗೆ ಆರೋಪಿ ಸುಚನಾಳನ್ನು ಒಪ್ಪಿಸಿದ್ದಾರೆ.

ಈ ಘಟನೆ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.