Heart attack: ಹೃದಯದ ಬಗ್ಗೆ ಇರಲಿ ಎಚ್ಚರ!! ಆಸಿಡಿಟಿಯಿಂದ ಸಿಗಲಿದೆಯೇ ಹೃದಯಾಘಾತದ ಮುನ್ಸೂಚನೆ ??

Heart Attack: ಇತ್ತೀಚಿನ ದಿನಗಳಲ್ಲಿ (Now A Days) ಹೃದಯಾಘಾತ (Heart Attack) ಮತ್ತು ಹೃದಯ ಸ್ತಂಭನ (Cardiac Arrest) ಕಾಯಿಲೆ ಜನರನ್ನು ಹೆಚ್ಚು ಕಾಡುತ್ತಿದೆ. ವಯಸ್ಕರಲ್ಲಿ ಮಾತ್ರ ಹೃದಯ ಸ್ತಂಭನ ಸಂಭವಿಸುತ್ತಿಲ್ಲ ಬದಲಾಗಿ ಚಿಕ್ಕ ಚಿಕ್ಕ ಮಕ್ಕಳು(Childerns)ಹೃದಯ ಸ್ತಂಭನದಿಂದಾಗಿ ಸಾವನ್ನಪ್ಪುತ್ತಿರುವವರ (Death)ಸಂಖ್ಯೆ ಹೆಚ್ಚಾಗುತ್ತಿದೆ.

 

ಹೃದಯಾಘಾತಕ್ಕೆ ಜೀವನಶೈಲಿ ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ಅನಾರೋಗ್ಯಕರ ಆಹಾರ ಕ್ರಮ, ಕೆಲಸದ ಒತ್ತಡದಿಂದ ಕೆಲವರು ಧೂಮಪಾನ ಅಥವಾ ಮದ್ಯಪಾನ ಮಾಡುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಇದು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

 

ಹೃದಯಾಘಾತದ ಎಚ್ಚರಿಕೆ ಸಂಕೇತಗಳು ಯಾವುದೆಲ್ಲ ಗೊತ್ತಾ??

# ಆಹಾರ ಸೇವಿಸಿದ ನಂತರ ಹೊಟ್ಟೆಯಲ್ಲಿ ಅಸಿಡಿಟಿ ಕಾಣಿಸಿಕೊಳ್ಳುವುದು.

# ಹೆಚ್ಚು ನಡೆಯುವಾಗ ಅಥವಾ ಮೆಟ್ಟಿಲುಗಳನ್ನು ಹತ್ತುವಾಗ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು.

#ಸುಲಭದ ಕೆಲಸಗಳನ್ನೂ ಮಾಡಲು ತೊಂದರೆ ಉಂಟಾಗುವುದು.

# ದವಡೆಯಿಂದ ಸೊಂಟದವರೆಗೆ ಭಾರವಾದ ಭಾವನೆ ಉಂಟಾಗಬಹುದು.

# ಹಠಾತ್ ಹೆದರಿಕೆಯ ಭಾವನೆ ಉಂಟಾಗಬಹುದು.

 

ಆಹಾರದಲ್ಲಿ ಪ್ರೋಟೀನ್ ಅನ್ನು ಹೆಚ್ಚಿಸಿಕೊಂಡು ಕಾರ್ಬೋಹೈಡೇಟ್ಗಳನ್ನು ಕಡಿಮೆ ಮಾಡಿಕೊಳ್ಳಿ. ಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಉಪ್ಪು, ಸಕ್ಕರೆ, ಅಕ್ಕಿ ಮತ್ತು ಮೈದಾವನ್ನು ಹೆಚ್ಚು ಸೇವಿಸಬಾರದು. ನಿದ್ರಾಹೀನತೆ ಕೂಡ ಅಪಾಯಕಾರಿ ಎಂಬುದನ್ನು ಗಮನಿಸಬೇಕು.ನಿಯಮಿತ ವ್ಯಾಯಾಮ ಮತ್ತು ಸರಿಯಾದ ಆಹಾರಸೇವನೆಯಿಂದ ಹೃದಯದ ತೊಂದರೆಗಳನ್ನು ತಪ್ಪಿಸಬಹುದು.

 

ವ್ಯಾಯಾಮ, ಉತ್ತಮ ಆಹಾರ, ನಿದ್ರೆ, ಧ್ಯಾನ-ಯೋಗವನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಂಡರೆ ಒಳಿತು. ನಿದ್ರೆಯ ಕೊರತೆ, ಒತ್ತಡ, ಬಿಪಿ, ಶುಗರ್ ಕೂಡ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಿದ್ದೆ, ಬಿಪಿ, ಶುಗ‌ರ್, ಒತ್ತಡ ಇವೆಲ್ಲವೂ ಸರಿಯಾಗಿರುವಂತೆ ನೋಡಿಕೊಳ್ಳಬೇಕು.

Leave A Reply

Your email address will not be published.