Hair care: ಮಹಿಳೆಯರೇ.. ಹೆಚ್ಚಾಗಿ ತುರುಬು ಕಟ್ಟುತ್ತೀರಾ?! ಇದು ಏನೆಲ್ಲಾ ಸಮಸ್ಯೆ ತಂದೊಡ್ಡುತ್ತೆ ಗೊತ್ತಾ ?!

Hair care: ಮಹಿಳೆಯರಿಗೆ ತಮ್ಮ ಕೇಶದ ಬಗ್ಗೆ ಬಲು ಪ್ರೀತಿ, ಎಲ್ಲಿಲ್ಲದ ಕಾಳಜಿ. ಇದರ ಆರೈಕೆಗೆ ಸಾಕಷ್ಟು ಕಸರತ್ತು ನಡೆಸುತ್ತಾರೆ. ಹೊರ ಹೋಗುವ ಸಮಯದಲ್ಲಿ ಕೂದಲಿಂದಲೇ ವಿವಿಧ ಅಲಂಕಾರ ಮಾಡಿ, ಹೊಸ ರೀತಿಯ ಫ್ಯಾಷನ್ ಮಾಡಿಕೊಂಡು ಭಾರೀ ಸ್ಟೈಲ್ ಮಾಡುತ್ತಾರೆ. ಕೂದಲ ಬಗ್ಗೆ ಇಷ್ಟೆಲ್ಲಾ ಕಾಳಜಿ(Hair care) ಮಾಡುವ ಮಹಿಳೆಯರು ಮನೆಯಲ್ಲಿರುವಾಗ ತುರುಬು ಹಾಕುವುದು ಸಾಮಾನ್ಯ. ಸೆಕೆಯಿಂದ, ಪದೇ ಪದೇ ಜಡೆ ಹಾಕುವುದರಿಂದ ಇದು ಮುಕ್ತಿ ನೀಡುತ್ತದೆ. ಒಂದ ರೀತಿಯಲ್ಲಿ ಸುಲಭ ಕೂಡ. ಆದರೆ ತುರುಬು ಹಾಕೋಂದ್ರಿ ಡೇಂಜರ್ ಕೂಡ !!

ಹೌದು, ಕೂದಲು ಉದ್ದವಿರುವವರು ಈ ಹೇರ್ ಸ್ಟೈಲ್ ಮಾಡೋದು ಹೆಚ್ಚು. ಕೂದಲು ಬೇಗ ಧೂಳಾಗುವುದಿಲ್ಲ ಹಾಗೆ ಕೂದಲು ಹಾಳಾಗುವುದಿಲ್ಲ ಎನ್ನುವ ಕಾರಣಕ್ಕೆ ತುರುಬು ಕಟ್ತಾರೆ. ಇಂದು ಮನೆಯಲ್ಲಿ ಮಾತ್ರ ತುರುಬು ಹಾಕುವುದಲ್ಲದೇ ಅದೊಂದು ಹೊಸ ಫ್ಯಾಷನ್ ಕೂಡ ಆಗಿದೆ. ಆದರೆ ಯಾವಾಗಲೂ ಈ ತುರುಬು ಹಾಕುವುದರಿಂದ ಈ ಎಲ್ಲಾ ಸಮಸ್ಯೆಗಳು ಎದುರಾಗಲಿವೆ.

ಇದನ್ನೂ ಓದಿ: BMTC ಯಿಂದ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್!! ಮದುವೆ, ಪ್ರವಾಸಕ್ಕೆ ಬಿಎಂಟಿಸಿಯಿಂದ ಬಸ್ ವ್ಯವಸ್ಥೆ : ಯಾವ ಬಸ್ ಗೆ ಎಷ್ಟು ಬಾಡಿಗೆ ??

ತುರುಬು ಹಾಕುವುದುರಿಂದ ಏನೇನು ಸಮಸ್ಯೆ ಎದುರಾಗುತ್ತದೆ?

ಹೆಚ್ಚು ತುರುಬು ಕಟ್ಟಿಕೊಳ್ಳುವವರಿಗೆ ಕೂದಲು ಸಮಸ್ಯೆ ಜಾಸ್ತಿಯಂತೆ. 

• ಹೆಚ್ಚಿನ ಪ್ರಮಾಣದಲ್ಲಿ ಕೂದಲು ಉದುರುತ್ತದೆಯಂತೆ.

• ತುರುಬು ಯಾವಾಗಲೂ ಕಟ್ಟುವುದರಿಂದ ಕೂದಲು ಬೇಗ ಆಯ್ಲಿಯಾಗುತ್ತೆ. ಇದ್ರಿಂದ ಮರುದಿನ ತಲೆ ಸ್ನಾನ ಮಾಡುವ ಅನಿವಾರ್ಯತೆ ಎದುರಾಗುತ್ತದೆ. 

• ತಲೆ ಹೊಟ್ಟು, ತುರಿಕೆ, ಕೂದಲು ಉದುರುವ ಸಮಸ್ಯೆ ಕಾಡುತ್ತದೆ.

• ಕೂದಲು ದುರ್ಬಲವಾಗುತ್ತದೆ. 

• ಹಿಂದಕ್ಕೆ ಎಳೆದು ಕಟ್ಟುವುದರಿಂದ ರಕ್ತ ಸಂಚಾರ ಕಡಿಮೆಯಾಗುತ್ತದೆ. ಇದ್ರಿಂದ ಕೂದಲು ಉದುರುತ್ತದೆ.

• ಸದಾ ತುರುಬು ಕಟ್ಟುವುದರಿಂದ ಕೂದಲಿನ ಬೆವರು ಗಾಳಿಗೆ ಒಣಗುವುದಿಲ್ಲ. 

• ಕೂದಲಿಗೆ ಬಿಡಿ ಬಿಡಿಯಾಗಿರಲು ಜಾಗ ಸಿಗುವುದಿಲ್ಲ. ಇದ್ರಿಂದ ಕೂದಲು ವಾಸನೆ ಬರಲು ಶುರುವಾಗುತ್ತದೆ. ಜೊತೆಗೆ ಜಿಗುಟಾಗುತ್ತದೆ. 

• ಕೂದಲು ಹೊಳಪು ಕಳೆದುಕೊಳ್ಳುತ್ತದೆ.

Leave A Reply

Your email address will not be published.