plane crash: ಸಮುದ್ರಕ್ಕೆ ಉರುಳಿದ ವಿಮಾನ- ಖ್ಯಾತ ನಟ, ಇಬ್ಬರು ಪುತ್ರಿಯರ ದುರ್ಮರಣ !!

Share the Article

plane crash: ಖ್ಯಾತ ಹಾಲಿವುಡ್ ನಟ ಕ್ರಿಶ್ಚಿಯನ್ ಆಲಿವರ್ ಮತ್ತು ಅವರ ಇಬ್ಬರು ಪುತ್ರಿಯರಿದ್ದ ವಿಮಾನವೊಂದು ಸಮುದ್ರದಲ್ಲಿ ಪತನವಾಗಿದ್ದು, ಈ ಅಪಘಾತದಲ್ಲಿ ಅವರೆಲ್ಲರೂ ಸಾವನ್ನಪ್ಪಿದ್ದಾರೆ.

ಹೌದು, ಜರ್ಮನ್ ಸಂಜಾತ ಹಾಲಿವುಡ್ ನಟ ಕ್ರಿಶ್ಚಿಯ ಆಲಿವರ್ (51), ಅವರ ಪುತ್ರಿಯರಾದ ಮಡಿತಾ (10), ಅನ್ನಿಕ್ (12) ಮತ್ತು ಪೈಲಟ್ ರಾಬರ್ಟ್ ಸ್ಯಾಚ್ಸ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇವರು ಪ್ರಯಾಣಿಸುತ್ತಿದ್ದ ಸಣ್ಣ ವಿಮಾನವು ಟೇಕ್ ಆಫ್ ಆದ ನಂತರ ಕೆರಿಬಿಯನ್ ಸಮುದ್ರಕ್ಕೆ ಅಪ್ಪಳಿಸಿತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಆಲಿವರ್ ಅವರ ಕುಟುಂಬ ಪ್ರವಾಸಕ್ಕೆ ಹೋಗುತ್ತಿದ್ದಾಗ ವಿಮಾನ ಅಪಘಾತ(plane crash) ಸಂಭವಿಸಿದೆ. ಇನ್ನು ಕೆರಿಬಿಯನ್ ಸಮುದ್ರದಲ್ಲಿ ಮೀನುಗಾರರು ಮತ್ತು ಕೋಸ್ಟ್ ಗಾರ್ಡ್ ತಕ್ಷಣ ಸ್ಥಳಕ್ಕೆ ತೆರಳಿ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಯಿತು.

Leave A Reply