LPG Gas Cylinder: LPG ಬಳಕೆದಾರರೇ ಗಮನಿಸಿ, E-KYC ಬಗ್ಗೆ ಬಿಗ್ ಅಪ್ಡೇಟ್ ಇಲ್ಲಿದೆ ನೋಡಿ!!

LPG Gas Cylinder: LPG ಗ್ರಾಹಕರಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ. LPG ಅಡುಗೆ ಅನಿಲ ಸಂಪರ್ಕ(LPG Gas Cylinder)ಹೊಂದಿರುವ ಗ್ರಾಹಕರು ದಿನಾಂಕ 31-12-2023ರೊಳಗೆ ಅಡುಗೆ ಅನಿಲ ಗ್ರಾಹಕರ ಸಂಖ್ಯೆಗೆ ಇ-ಕೆವೈಸಿಯನ್ನು( E- KYC)ಮತ್ತು ಬ್ಯಾಂಕ್ ಖಾತೆ ಮಾಹಿತಿಯನ್ನು ಗ್ಯಾಸ್ ಏಜೆನ್ಸಿಯಲ್ಲಿ ಸಲ್ಲಿಸಬೇಕು. ಒಂದು ವೇಳೆ ಇದನ್ನು ಮಾಡದೇ ಹೋದರೆ ಗ್ರಾಹಕರಿಗೆ ಸಹಾಯಧನ ಸ್ಥಗಿತಗೊಳ್ಳುತ್ತದೆ ಎಂಬ ಸುದ್ದಿ ಹರಡಿತ್ತು. ಇದರಿಂದಾಗಿ ಸಹಜವಾಗಿ ಗ್ರಾಹಕರಿಗೆ ಆತಂಕ ಮನೆ ಮಾಡಿತ್ತು. ಇದರ ಜೊತೆಗೆ, ಗೃಹ ಬಳಕೆ ಅಡುಗೆ ಅನಿಲ ವಾಣಿಜ್ಯ ಬಳಕೆಯಾಗಿ ಪರಿವರ್ತನೆಯಾಗಿ, ಅನಿಲ ಸಂಪರ್ಕ ಕಡಿತವಾಗುತ್ತದೆ ಹಾಗೂ ಇ-ಕೆವೈಸಿ ಕಾರ್ಯಕ್ಕೆ ಹಣ ನೀಡಬೇಕು ಎಂದೆಲ್ಲ ಗಾಳಿ ಸುದ್ದಿಗಳು ಹರಿದಾಡಿತ್ತು. ಅಡುಗೆ ಅನಿಲ ಗ್ರಾಹಕರಿಗೆ ಈ ಕುರಿತು ಸ್ಪಷ್ಟನೆ ನೀಡಿದೆ.

ಇದನ್ನು ಓದಿ: Kiccha Sudeep: ಸುದೀಪ್ ನಟನೆಯ ಮ್ಯಾಕ್ಸ್ ಶೂಟಿಂಗ್ ಪುನರಾರಂಭ!

ಗ್ರಾಹಕರು ಇ-ಕೆವೈಸಿ ಮಾಡಿಸಲು ಕೇಂದ್ರ ಸರ್ಕಾರವು/ ಅನಿಲ ಕಂಪನಿಗಳು ಯಾವುದೇ ಕೊನೆಯ ದಿನಾಂಕವನ್ನು ನಿಗದಿ ಮಾಡಿಲ್ಲ. ಇದರ ಇ-ಕೆವೈಸಿ ಮಾಡಿಸುವುದಕ್ಕೆ ಯಾವುದೇ ಶುಲ್ಕ ಕೂಡ ವಿಧಿಸಿಲ್ಲ. ಇಕೆವೈಸಿ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದ್ದು, ಇ-ಕೆವೈಸಿ ಮಾಡಿಸುವುದು ನಿರಂತರ ಪ್ರಕ್ರಿಯೆಯಾಗಿದೆ. ಈಗ ಹರಡಿರುವ ಸುದ್ದಿ ಸುಳ್ಳು ಸುದ್ದಿಯಾಗಿದೆ ಎಂದು ಸ್ಪಷ್ಟಪಡಿಸಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದಿರುವವರು ಹಾಗೂ ಸಹಾಯಧನ ಪಡೆಯುವ ಗ್ರಾಹಕರು ಮಾತ್ರ ಇ-ಕೆವೈಸಿಗೆ ಹೆಚ್ಚಿನ ಮಹತ್ವ ನೀಡಲು ಸೂಚಿಸಲಾಗಿದೆ

Leave A Reply

Your email address will not be published.