Bengaluru News: ಮೆಟ್ರೋನಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾತ್ರ ಮಾಡಬೇಡಿ, ಎಚ್ಚರ!
ದಿನಕ್ಕೆ ಸಾವಿರಾರು ಮಂದಿ ಪ್ರಯಾಣ ಮಾಡಲು ಮೆಟ್ರೋ ಯೂಸ್ ಮಾಡ್ತಾರೆ. ಅದೆಷ್ಟೋ ದೂರ ದೂರ ಉದ್ಯೋಗ ಇದ್ದರು ಆರಾಮಾಗಿ ಮೆಟ್ರೋ ಸೇವೆಯಿಂದ ಓಡಾಡುತ್ತಾರೆ. ಅದೆಷ್ಟೇ ಜನರು ಬಂದರು, ಹೋದರು ಕೂಡ ಮೆಟ್ರೋ ಸೇವೆ ಮತ್ತು ಸ್ವಚ್ಛತೆ ಮಾತ್ರ ಕೊಂಚವು ಅದಲು ಬದಲಾಗೊದಿಲ್ಲ.
ಎಸ್, ಆದರೆ ಮೆಟ್ರೋ ಪ್ರಯಾಣಿಕರಿಗೆ ಕಿವಿ ಮಾತು. ಈ ರೀತಿಯಾಗಿ ಯಾವತ್ತು ಮಾಡಬೇಡಿ ಅಷ್ಟೇ. ಸೋಮವಾರ (ಜನವರಿ 1) ಸಂಜೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರು ತಮ್ಮ ಮೊಬೈಲ್ ಫೋನ್ ಅನ್ನು ಹಳಿಗಳ ಮೇಲೆ ಬೀಳಿಸಿಕೊಂಡಿದ್ದಾರೆ. ಇದು ಮೆಟ್ರೋ ಸೇವೆಯ ನೇರಳೆ ಮಾರ್ಗದ ಸೇವೆಯಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ.
ನಮ್ಮ ಮೆಟ್ರೋ ಭದ್ರತಾ ತಂಡವು ಪ್ರಯಾಣಿಕರ ಸುರಕ್ಷತೆಗಾಗಿ ಹಳಿಗಳಿಗೆ ವಿದ್ಯುತ್ ಸರಬರಾಜನ್ನು ತಕ್ಷಣವೇ ಕಡಿತಗೊಳಿಸಿದೆ. ಇದರಿಂದ ಮೆಟ್ರೋ ರೈಲನ್ನು ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ. ಎಲ್ಲಾ ಸುರಕ್ಷತಾ ಕಾರ್ಯವಿಧಾನಗಳನ್ನು ಅನುಸರಿಸಿದ ನಂತರ, 6.56 ಕ್ಕೆ ನಮ್ಮ ಮೆಟ್ರೋ ಸೇವೆಯನ್ನು ಪುನಃಸ್ಥಾಪಿಸಲಾಯಿತು ಎಂದು ಬಿಎಂಆರ್ಸಿಎಲ್ನ ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚವಾನ್ ಹೇಳಿದ್ದಾಗಿ ದಿ ಹಿಂದೂ ವರದಿ ಮಾಡಿದೆ.
ಮೆಟ್ರೋದಲ್ಲಿ ಪ್ರಯಾಣಿಸುವಾಗ ಹಳಿಗಳ ಮೇಲೆ ಮೊಬೈಲ್ ಅಥವಾ ಇನ್ಯಾವುದೇ ವಸ್ತು ಬಿದ್ದರೆ ಹಳಿಗಳ ಮೇಲೆ ಇಳಿಯಲು ಮುಂದಾಗಬೇಡಿ. ತಕ್ಷಣ ಅಲ್ಲೇ ಇರುವ ಸುರಕ್ಷತಾ ಸಿಬ್ಬಂದಿಗೆ ವಿಷಯ ತಿಳಿಸಿ. ಅನಾಹುತ ಮಾಡಿಕೊಳ್ಳಬೇಡಿ.