Home Interesting Hubballi: ಟೀಚರ್ ಕೆಲಸ ಕೊಡಿಸುವುದಾಗಿ ಯುವತಿಯನ್ನು ಮನೆಗೆ ಕರೆದೊಯ್ದು ನಿರಂತರವಾಗಿ 2 ವರ್ಷ ಅತ್ಯಾಚಾರ ಎಸಗಿದ...

Hubballi: ಟೀಚರ್ ಕೆಲಸ ಕೊಡಿಸುವುದಾಗಿ ಯುವತಿಯನ್ನು ಮನೆಗೆ ಕರೆದೊಯ್ದು ನಿರಂತರವಾಗಿ 2 ವರ್ಷ ಅತ್ಯಾಚಾರ ಎಸಗಿದ ಖ್ಯಾತ ಮೌಲ್ವಿ !!

Hubballi

Hindu neighbor gifts plot of land

Hindu neighbour gifts land to Muslim journalist

Hubballi: ಯುವತಿ ಒಬ್ಬಳಿಗೆ ಟೀಚರ್ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಮಧ್ಯಪ್ರದೇಶಕ್ಕೆ ಕರೆದುಕೊಂಡು ಹೋಗಿ ನಿರಂತರವಾಗಿ ಎರಡು ವರ್ಷಗಳ ಕಾಲ ಮೌಲ್ವಿ ಒಬ್ಬ ಅತ್ಯಾಚಾರ ಎಸಗಿದ್ದು ಇದೀಗ ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಈ ಕಾಮುಕನನ್ನು ಹುಬ್ಬಳ್ಳಿ ಪೋಲೀಸರು ಬಂದಿಸಿದ್ದಾರೆ.

ಹೌದು, ದೇಶದಲ್ಲಿ ತುಂಬಾ ಹೆಸರು ಗಳಿಸಿರುವ ಗುಲಾಮ ಜಿಲಾನಿ ಅಜಹರಿ ಎಂಬ ಮೌಲ್ವಿ ತನ್ನ ಮದರಸಾದಲ್ಲಿ ಶಿಕ್ಷಕಿಯಾಗಿದ್ದ ಹುಬ್ಬಳ್ಳಿ (Hubballi) ಮೂಲದ ಯುವತಿಗೆ ಚಿತ್ರ ಹಿಂಸೆ ನೀಡಿದ್ದಾನೆ. ಈತ ಯುವತಿಯ ತಂದೆಯ ಪರಿಚಯಸ್ಥನಾಗಿದ್ದು, ನಿಮ್ಮ ಮಗಳಿಗೆ ನಮ್ಮಲ್ಲಿ ಕೆಲಸ ಇದೆ ಎಂದು ಹೇಳಿ ಮಧ್ಯಪ್ರದೇಶಕ್ಕೆ ಕರೆದೊಯ್ದಿದ್ದ. ಬಳಿಕ ನನಗೆ ಮೊದಲ ಹೆಂಡತಿಯಿಂದ ಡಿವೋರ್ಸ್ ಆಗಿದ್ದು, ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿ ನಿರಂತರ ಅತ್ಯಾಚಾರ ಎಸಗಿದ್ದಾನೆ.

ಇದನ್ನು ಓದಿ: Discomfort: ಮಹಿಳೆಯ ಕಿವಿಯೊಳಗೆ ಜೇಡ !! ಟೆಸ್ಟ್ ಮಾಡಿ ತೆಗೆಯುವಾಗ ವೈದ್ಯರಿಗೂ ಕಾದಿತ್ತು ಮತ್ತೊಂದು ಬಿಗ್ ಶಾಕ್

ಅಲ್ಲದೆ ಮತ್ತು ಬರುವ ಔಷಧಿ ಕೊಟ್ಟು ಬಲಾತ್ಕಾರ ಮಾಡಿದ್ದಾನೆ. ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಎರಡು ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದಲ್ಲದೆ ಒಟ್ಟು ನಾಲ್ಕು ಬಾರಿ ಆಕೆಗೆ ಗರ್ಭಪಾತ ಮಾಡಿಸಿದ್ದಾನೆ ಎನ್ನಲಾಗಿದೆ. ಆಕೆ ಮತ್ತೆ ಐದನೇ ಬಾರಿಗೆ ಗರ್ಭಿಣಿಯಾದ ಬಳಿಕ ಆಕೆಯನ್ನು ಹುಬ್ಬಳ್ಳಿಯಲ್ಲಿರುವ ಯುವತಿಯ ಮನೆಯಲ್ಲಿ ಬಿಟ್ಟು, ನನ್ನ ನಿನ್ನ ನಡುವೆ ಯಾವ ಸಂಬಂಧ ಉಳಿದಿಲ್ಲ. ಈ ವಿಷಯ ಬಹಿರಂಗಪಡಿಸಿದರೆ ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ಸುಮ್ಮನೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.

ಸದ್ಯ ಹೇಗೋ ತಪ್ಪಿಸಿಕೊಂಡ ಯುವತಿಯು ಹುಬ್ಬಳ್ಳಿ ಪೋಲೀಸರಿಗೆ ದೂರು ನೀಡಿದ್ದಾಳೆ. ಸದ್ಯ ಆರೋಪಿಯನ್ನು ಮಧ್ಯಪ್ರದೇಶದ ಖಂಡ್ವಾ ಎಂಬಲ್ಲಿ ಬಂಧಿಸಲಾಗಿದ್ದು, ಪೊಲೀಸರು ಹುಬ್ಬಳ್ಳಿಗೆ ಕರೆದುಕೊಂಡು ಬರುತ್ತಿದ್ದಾರೆ. ಅಲ್ಲದೆ ಮೌಲ್ವಿ, ಆಸೀಫ್, ಶಕೀಲ್, ವೈದ್ಯ ಸೇರಿ ಒಟ್ಟು ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.