KC Cariappa: ಪ್ರೀತಿ ಹೆಸರೇಳಿ, ದೈಹಿಕ ಸಂಪರ್ಕ ಬೆಳೆಸಿ ಖ್ಯಾತ ಕ್ರಿಕೆಟಿಗನಿಂದ ಯುವತಿಗೆ ವಂಚನೆ?!

KC Cariappa: ರಾಜ್ಯದ ಕ್ರಿಕೆಟಿಗ ಕೆ.ಸಿ.ಕಾರ್ಯಪ್ಪ (KC Cariappa)ಕುರಿತ ಸುದ್ದಿಯೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಕ್ರಿಕೆಟಿಗ ಕೆ.ಸಿ.ಕಾರ್ಯಪ್ಪ ಅವರ ಪ್ರೇಮ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ತಮ್ಮ ಮನೆಗೆ ಮಾಜಿ ಪ್ರೇಯಸಿ ಭೇಟಿ ನೀಡಿ ಅವಾಚ್ಯಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೆ.ಸಿ.ಕಾರ್ಯಪ್ಪ ಬಾಗಲಗುಂಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

 

ಇನ್ನೊಂದೆಡೆ, ಕೆ.ಸಿ.ಕಾರ್ಯಪ್ಪ ಅವರು ಮದುವೆಯಾಗುವ(Marriage)ಭರವಸೆ ನೀಡಿ ದೈಹಿಕ ಸಂಪರ್ಕ(Physical Relationship)ಬೆಳೆಸಿಕೊಂಡು ಇದಾದ ಬಳಿಕ ಗರ್ಭಪಾತ ಮಾಡಿಸಿ ಇದೀಗ ಮದುವೆಯಾಗದೆ ವಂಚನೆ ಮಾಡಿದ್ದಾರೆ. ಇದರ ಜೊತೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಮಾಜಿ ಪ್ರೇಯಸಿ ಆರೋಪ ಮಾಡಿ ಆರ್‌.ಟಿ.ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸದ್ಯ, ಈ ಎರಡೂ ಪ್ರತ್ಯೇಕ ಪ್ರಕರಣಗಳ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

‘ನಾನು ಕ್ರಿಕೆಟ್‌ ವೃತ್ತಿಜೀವನ ಮುಂದುವರೆಸುತ್ತಿದ್ದು, ಒಂದೂವರೆ ವರ್ಷದ ಹಿಂದೆ ಯುವತಿಯ ಪರಿಚಯವಾಗಿ ಸ್ನೇಹ ಬೆಳೆದು ಪ್ರೀತಿ ಬೆಳೆದಿತ್ತು. ಆಕೆಯ ಗುಣ ನಡತೆ ಸರಿಯಿಲ್ಲದ ಹಿನ್ನೆಲೆ ಅಷ್ಟೆ ಅಲ್ಲದೇ ಆಕೆ ಡ್ರಗ್ಸ್, ಮದ್ಯದ ವ್ಯಸನಿ ಆಗಿರುವುದರಿಂದ ಹಲವು ಬಾರಿ ಬುದ್ಧಿವಾದ ಹೇಳಿದೆ. ಆದಾಗ್ಯೂ, ಆಕೆ ಕೇಳದೆ ಇದ್ದಾಗ ಪ್ರೀತಿಯಿಂದ ಹಿಂದೆ ಸರಿದೆ. ಇದರಿಂದ ಕೋಪಗೊಂಡ ಯುವತಿ ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಕಳೆದ ವರ್ಷದ ಬಾಗಲಗುಂಟೆ ಠಾಣೆಗೆ ದೂರು ನೀಡಿದ್ದಳು. ಈ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಲಾಗಿದೆ. ಆದರೂ ಆಕೆ ಪದೇ ಪದೇ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕ್ರಿಕೆಟಿಗ ಕಾರ್ಯಪ್ಪ ಆರೋಪ ಮಾಡಿದ್ದಾರೆ.

ಇದನ್ನು ಓದಿ: Ullal ಅನ್ಯಮತೀಯ ಯುವಕನೊಂದಿಗೆ ವಿದ್ಯಾರ್ಥಿಗಳ ಸುತ್ತಾಟ; ತಪ್ಪಿತು ನೈತಿಕ ಪೊಲೀಸ್‌ಗಿರಿ!!

ಯುವತಿಯ ಆರೋಪ:
ಕಳೆದ ಒಂದೂವರೆ ವರ್ಷದ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಕೆ.ಸಿ.ಕಾರ್ಯಪ್ಪ ಪರಿಚಯವಾಗಿ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ದೈಹಿಕ ಸಂಪರ್ಕ ಬೆಳೆಸಿದ್ದರಿಂದ ನಾನು ಗರ್ಭವತಿಯಾಗಿದ್ದು, ಕಾರ್ಯಪ್ಪ ಗರ್ಭಪಾತ ಮಾಡಿಸಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ನೀಡಿದ್ದೆ. ಆನಂತರ ಕಾರ್ಯಪ್ಪ ಮನವಿ ಮೇರೆಗೆ ಆ ದೂರು ವಾಪಸ್‌ ಪಡೆದಿದ್ದೆ’ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ.

Leave A Reply

Your email address will not be published.