Gruhalakshmi scheme : ರಾಜ್ಯದ ಎಲ್ಲಾ ‘ಗೃಹಲಕ್ಷ್ಮೀ’ಯರಿಗೆ ಬಂತು ಹೊಸ ರೂಲ್ಸ್ ‘ – ಇನ್ಮಂದೆ ಹಣ ಪಡೆಯಲು ಈ ಪಿಂಕ್ ಕಾರ್ಡ್ ಕಡ್ಡಾಯ, ಎಲ್ಲಿ ಸಿಗುತ್ತೆ ಈ ಕಾರ್ಡ್?!

Gruhalakshmi scheme : ರಾಜ್ಯ ಸರ್ಕಾರದಪ್ರಮುಖ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ (Gruhalakshmi scheme) ಈಗಾಗಲೇ ರಾಜ್ಯದ ಎಲ್ಲಾ ಯಜಮಾನರಿಗೆ ಮೂರು ಕಂತಿನ ಹಣ ಸಂದಾಯವಾಗಿದ್ದು ಇದೀಗ 4ನೇ ಕಂತಿನ ಹಣ ಕೂಡ ಜಮಾ ಆಗಿದೆ. ಕೆಲವರಿಗೆ ಇನ್ನೂ ಬರಬೇಕಿದೆ. ಆದರೆ ಈ ನಡುವೆ ಗೃಹಲಕ್ಷ್ಮೀ ಯೋಜನೆಯಡಿ ದುಡ್ಡು ಪಡೆಯುವ ಎಲ್ಲಾ ಯಜಮಾನಿಯರಿಗೆ ಸರ್ಕಾರ ಹೊಸ ರೂಲ್ಸ್ ತಂದಿದೆ.

 

 

ಹೌದು, ಗೃಹಲಕ್ಷ್ಮಿ ಹಣವು ಎಲ್ಲಾ ಫಲಾನುಭವಿಗಳಿಗೂ ದೊರೆಯಬೇಕು ಎಂಬ ಉದ್ದೇಶದಿಂದ ಸರ್ಕಾರವು ಹೊಸ ಆದೇಶವನ್ನು ಹೊರಡಿಸಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹೊಸ ರೂಲ್ಸ್ ಅನ್ನು ಕೂಡ ಜಾರಿಗೊಳಿಸಿದೆ. ಅದೇನೆಂದರೆ ಈ ಹಿಂದೆ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನಗೊಳ್ಳುವ ಸಮಯದಲ್ಲಿ Gruha Lakshmi Pink Smart Card ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಈವರೆಗೆ ಸರ್ಕಾರ ಯಾವುದೇ ಫಲಾನುಭವಿಗೆ ಪಿಂಕ್ ಸ್ಮಾರ್ಟ್ ಕಾರ್ಡ್ ಅನ್ನು ವಿತರಿಸಿಲ್ಲ. ಪ್ರಸ್ತುತ ರಾಜ್ಯ ಸರ್ಕಾರ Pink Smart Card ವಿತರಣೆ ಮುಂದಾಗಿದೆ.

 

ಪಿಂಕ್ ಕಾರ್ಡ್ ಉಪಯೋಗ ಏನು?

ಖಾತೆಗೆ ಹಣ ಬಂದಿದೆಯೋ ಬಂದಿಲ್ಲವೋ ಎಂದು ಕೂಡ ಖಚಿತಗೊಳಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಗೃಹ ಲಕ್ಷ್ಮಿ ಅರ್ಹ ಮಹಿಳೆಯರು ಈ ಪಿಂಕ್ ಸ್ಮಾರ್ಟ್ ಕಾರ್ಡ್ ನ ಮೂಲಕ ಸುಲಭವಾಗಿ ಖಾತೆಗೆ ಹಣ ಬಂದಿದೆಯಾ ಅಥವಾ ಇಲ್ಲವ ಎನ್ನುವುದನ್ನು ಪರಿಶೀಲಿಸಿಕೊಳ್ಳಬಹುದು.

 

ಪಿಂಕ್ ಕಾರ್ಡಿನಲ್ಲಿ ಏನೆಲ್ಲಾ ಇರಲಿದೆ ?

ಈ ಪಿಂಕ್ ಕಾರ್ಡಿನಲ್ಲಿ ಏನೆಲ್ಲಾ ಇರುತ್ತದೆ ಎಂದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ರವರ ಭಾವಚಿತ್ರಗಳು, ಈ ಮೂರು ಭಾವಚಿತ್ರಗಳು ಪಿಂಕ್ ಕಾರ್ಡಿನಲ್ಲಿ ಇರುತ್ತದೆ.

 

ಎಲ್ಲಿ, ಯಾವಾಗ ಈ ಕಾರ್ಡ್ ಪಡೆಯಬಹುದು?

ಪಿಂಕ್ ಕಾರ್ಡ್ಗಳ ವಿತರಣೆ ಬಗ್ಗೆ ಮಾಹಿತಿ ದೊರೆತಿದೆಯೇ ಹೊರತು, ಯಾವಾಗ ಎಲ್ಲಿ, ಗೃಹಲಕ್ಷ್ಮಿ ಮಹಿಳೆಯರಿಗೆ ನೀಡುತ್ತದೆ ಎಂದು ಸರ್ಕಾರ ಇದುವರೆಗೂ ಘೋಷಣೆ ಮಾಡಿಲ್ಲ. ಆದರೆ ಸದ್ಯದಲ್ಲೇ ಈ ಬಗ್ಗೆ ಪ್ರಕಟಣೆ ಹೊರಡಬಹುದು ಎಂದು ಹೇಳಲಾಗಿದೆ.

Leave A Reply

Your email address will not be published.