Trekker Death: ಚಾರಣಕ್ಕೆ ತೆರಳಿದ್ದ ಚಾರಣಿಗನಿಗೆ ಬೆಟ್ಟದಲ್ಲೇ ಹೃದಯಾಘಾತ! ಸ್ಥಳದಲ್ಲೇ ಸಾವು!!!

Heart Attack: ಕೊಡಗಿನ ಚಾರಣಕ್ಕೆಂದು ಹೋದ ಯುವಕನೊಬ್ಬ ಹೃದಯಾಘಾತದಿಂದ (Heart Attack) ನಿಂದ ಮೃತಪಟ್ಟಿರುವ ಘಟನೆಯೊಂದು ನಡೆದಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲು ಬಳಿಯ ಕಕ್ಕಬ್ಬೆ ತಡಿಯಂಡಮೋಳು ಬೆಟ್ಟದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಜತಿನ್ ಕುಮಾರ್ (25) ಮೃತ ವ್ಯಕ್ತಿ. ಇವರು ಹರಿಯಾಣ ಮೂಲದವರು.

ಬೆಂಗಳೂರಿನ ಜೆಪಿ ನಗರದ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜತಿನ್ ಕುಮಾರ್ ಚಾರಣ ಪ್ರಿಯರಾಗಿದ್ದು, ರಾಜ್ಯದ ಮೂರನೇ ಅತಿ ಎತ್ತರದ ಬೆಟ್ಟವಾದ ತಡಿಯಂಡಮೋಳ್‌ಗೆ ಚಾರಣ ಮಾಡಲು 5 ಜನ ಸಹೋದ್ಯೋಗಿಗಳ ಜೊತೆ ಆಗಮಿಸಿದ್ದರು.
ದುರ್ಗಮ ಹಾದಿಯಲ್ಲಿ ಚಾರಣಿಗನ ಮೃತದೇಹವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹೊತ್ತುಕೊಂಡು ತಂದಿದ್ದಾರೆ.
ಇದನ್ನು ಓದಿ: Rajasthan: ರೂಮ್ ಹೀಟರ್‌ನಲ್ಲಿ ಕಾಣಿಸಿಕೊಂಡ ಹಠಾತ್ ಬೆಂಕಿ, ಕೋಣೆಯಲ್ಲಿ ಮಲಗಿದ್ದ ದಂಪತಿ, ಪುಟ್ಟ ಮಗು ಸಜೀವ ದಹನ!!