Home latest Rajasthan: ರೂಮ್‌ ಹೀಟರ್‌ನಲ್ಲಿ ಕಾಣಿಸಿಕೊಂಡ ಹಠಾತ್‌ ಬೆಂಕಿ, ಕೋಣೆಯಲ್ಲಿ ಮಲಗಿದ್ದ ದಂಪತಿ, ಪುಟ್ಟ ಮಗು ಸಜೀವ...

Rajasthan: ರೂಮ್‌ ಹೀಟರ್‌ನಲ್ಲಿ ಕಾಣಿಸಿಕೊಂಡ ಹಠಾತ್‌ ಬೆಂಕಿ, ಕೋಣೆಯಲ್ಲಿ ಮಲಗಿದ್ದ ದಂಪತಿ, ಪುಟ್ಟ ಮಗು ಸಜೀವ ದಹನ!!

Rajasthan
Image source: udayavani.com

Hindu neighbor gifts plot of land

Hindu neighbour gifts land to Muslim journalist

ಹೀಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ದಂಪತಿ ಹಾಗೂ ಅವರ ಪುಟ್ಟ ಮಗುವೊಂದು ಸೇರಿ ಒಂದೇ ಕುಟುಂಬದ ಮೂವರು ಸಜೀವ ದಹನವಾಗಿರುವ ಘಟನೆಯೊಂದು ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ಮಧ್ಯರಾತ್ರಿ 1.30ರ ಸಮಯದಲ್ಲಿ ಮೂವರು ಮಲಗಿದ್ದ ಕೋಣೆಯಲ್ಲಿ ಅತಿಯಾದ ಶಾಖದಿಂದ ಹೀಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರ ಪರಿಣಾಮ ಕೆಲವೇ ಕೆಲವು ನಿಮಿಷದಲ್ಲಿ ಬೆಂಕಿ ಮನೆಯಿಡೀ ಆವರಿಸಿದೆ. ಸದಸ್ಯರ ಬಟ್ಟೆಗೆ ತಗುಲಿದೆ. ಸಹಾಯಕ್ಕಾಗಿ ಕೂಗಿದಾಗ ಅಕ್ಕಪಕ್ಕದವರು ರಕ್ಷಣೆಗೆ ಬಂದಿದ್ದಾರೆ.

ಆದರೆ ಎಷ್ಟೇ ಪ್ರಯತ್ನಪಟ್ಟರೂ ದೀಪಕ್‌ ಯಾದವ್‌ ಮತ್ತು ಅವರ ಮಗಳು ಸ್ಥಳದಲ್ಲೇ ಬೆಂಕಿಯ ಕೆನ್ನಾಲಿಗೆಗೆ ಸಾವು ಕಂಡಿದ್ದಾರೆ. ಕೊಠಡಿಯಲ್ಲಿದ್ದ ಯಾದವ್‌ ಅವರ ಪತ್ನಿ ಸಂಜು ಅವರಿಗೆ ತೀವ್ರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಭಾನುವಾರ (ಡಿ.24) ಮೃತಪಟ್ಟಿದ್ದಾರೆಂದು ವರದಿಯಾಗಿದೆ.

ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ: Bigg Boss 10: ಮೈಕಲ್​ ಮತ್ತೆ ವಾಪಾಸ್​ ಬಂದ್ರಾ? ಡಬಲ್​ ಎಲಿಮಿನೇಶನ್ ಆಗಿಲ್ವಾ ಹಾಗಾದ್ರೆ?