Congress: ಲೋಕಸಭಾ ಚುನಾವಣೆ ಬಳಿಕ ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಹೇಗಿರುತ್ತೆ ?!

Share the Article

Congress: ಮುಂಬರುವ 2024ರ ಲೋಕಸಭಾ ಚುನಾವಣೆಗೆ ಪಕ್ಷಗಳು ಸಕಲ ಸಿದ್ಧತೆ ನಡೆಸಿವೆ. ಚುನಾವಣೆ ದೇಶಕ್ಕಾಗದರೂ ಪ್ರಮುಖವಾಗಿ ಹಣಾಹಣಿ ನಡೆಸುವ ಪಾರ್ಟಿಗಳೆಂದರೆ ಅದು BJP ಮತ್ತು ಕಾಂಗ್ರೆಸ್(Congress). ಯಾಕೆಂದರೆ ಈ ಪಕ್ಷಗಳು ದೇಶದ ಪ್ರತಿಯೊಂದು ರಾಜ್ಯದಲ್ಲೂ ಏಕಕಾಲಕ್ಕೆ ಎದುರುಬದುರಾಗಲಿವೆ. ಅಲ್ಲದೆ ದೇಶದ ಅಧಾಕಾರ ಹಿಡಿಯುವ ಬಯಕೆ ಬೇರೆ. ಹೀಗಾಗಿ ಎರಡೂ ಪಕ್ಷಗಳಿಗೂ ಈ ಚುನಾವಣೆ ಪ್ರೆಸ್ಟೀಜ್ ಪ್ರಶ್ನೆ.

ಈಗಾಗಲೇ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳೂ ಕೂಡ ಈ ಸಲವೂ ಬಿಜೆಪಿಯದ್ದೇ ಮೇಲುಗೈ ಎಂದು ಹೇಳುತ್ತಿವೆ. ಅಂದರೆ ನರೇಂದ್ರ ಮೋದಿಯವರು(Narendra modi) ಮತ್ತೆ ಹ್ಯಾಟ್ರಿಕ್ ಬಾರಿಸಿ ಮೂರನೇ ಸಲಕ್ಕೆ ಪ್ರಧಾನಿಯಾಗುವುದು ಪಕ್ಕಾ ಎಂದಾಗಿದೆ. ಯಾಕೆಂದರೆ ಮೋದಿ ಅಲೆ ದೇಶಾದ್ಯಂತ ಆ ಮಟ್ಟಿಗೆ ಇದೆ. ಇದು ವಿಪಕ್ಷಗಳಿಗೂ ತಿಳಿದ ಸಂಗತಿ. ಹೀಗಾಗಿ ಮುಂದಿನ ಪ್ರಧಾನಿ ಆಗುವುದು ಮೋದಿಯೇ ಎಂದು ವಿಪಕ್ಷಗಳಿಗೂ ತಿಳಿದಿದೆ. ಇದರಿಂದಾಗಿಯೇ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರೂ ಅದನ್ನು ಅವರು ನಯವಾಗಿ ತಿರಸ್ಕರಿಸಿದ್ದಾರೆ. ಇದೇನೆ ಇರಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರುವುದು ಫಿಕ್ಸ್!! ಹೀಗೆ ಬಿಜೆಪಿ ಭರ್ಜರಿಯಾಗಿ ಗೆದ್ದು ಕಾಂಗ್ರೆಸ್ ಹೀನಾಯವಾಗಿ ಸೋತರೆ ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೇಗಿರುತ್ತದೆ ಗೊತ್ತಾ?! ಈ ಕುರಿತಂತೆ ಬಿಜೆಪಿ ಮಾಡಿದ ಟ್ವೀಟ್ ಭಾರೀ ವೈರಲ್ ಆಗುತ್ತಿದೆ.

ಇದನ್ನು ಓದಿ: Karnataka Forest Guard Notification: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇಮಕಾತಿ; 540 ಹುದ್ದೆಗಳು, ಈ ಕೂಡಲೇ ಅರ್ಜಿ ಸಲ್ಲಿಸಿ!!!

ಹೌದು, 2024 ರ ಲೋಕಸಭಾ ಚುನಾವಣೆ(Parliament election)ಫಲಿತಾಂಶದ ನಂತರ ಕಾಂಗ್ರೆಸ್ಸಿನ ಪರಿಸ್ಥಿತಿ ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿಯು ಚುನಾವಣಾ ಪೂರ್ವದಲ್ಲಿಯೇ ಕಾಂಗ್ರೆಸ್ ನ ಭವಿಷ್ಯ ನುಡಿದಿದೆ. ಅದು ಇಂತಿದೆ.
▪️ಹೀನಾಯ ಸೋಲಿಗೆ ಮಲ್ಲಿಕಾರ್ಜುನ್‌ ಖರ್ಗೆ ಹೊಣೆ
▪️ರಾಹುಲ್‌ ಗಾಂಧಿ‌ ಗೌಪ್ಯವಾಗಿ ಥೈಲ್ಯಾಂಡ್ ಪ್ರವಾಸ
▪️ಸೋನಿಯಾ ಗಾಂಧಿ ವೃದ್ಧಾಪ್ಯ ಕಳೆಯಲು ಇಟಲಿಗೆ
▪️ಪ್ರಿಯಾಂಕಾ ವಾದ್ರಾ ಪತಿ ಜತೆ ರಿಯಲ್‌ ಎಸ್ಟೇಟ್ ವ್ಯವಹಾರಕ್ಕೆ
▪️ದೇಶಾದ್ಯಂತ ಕಾಂಗ್ರೆಸ್‌ ಪಕ್ಷದ ವಿಸರ್ಜನೆ
ಇಷ್ಟೇ ಅಲ್ಲದೆ ‘ದೇಶದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಾಖಲೆಯ ಬಹುಮತದೊಂದಿಗೆ ಮಗದೊಮ್ಮೆ ವಿರಾಜಮಾನರಾಗಿ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುವುದು ಶತಸಿದ್ಧ. ಕಮಲ ಅರಳಲಿದೆ, ಕಾಂಗ್ರೆಸ್‌ ಮುಳಗಲಿದೆ’ ಎಂದೂ ಬರೆದುಕೊಂಡಿದೆ.

https://x.com/BJP4Karnataka/status/1737688761822241016?t=HERmH–lGRHsj3BUY0Xdlw&s=08

Leave A Reply