Lokasabha: ಲೋಕಸಭೆಯಲ್ಲಿ ಭದ್ರತಾ ಲೋಪ – ಕೇಂದ್ರಕ್ಕೆ ಬಿಗ್ ಶಾಕ್ ಕೊಟ್ಟ ಸ್ಪೀಕರ್!!
Lokasabha: ಲೋಕಸಭೆಯಲ್ಲಿ(Lokasabha) ಭದ್ರತಾ ಲೋಪ ಉಂಟಾಗಿರುವುದು ದೇಶದಲ್ಲಿ ತಲ್ಲಣ್ಣ ಸೃಷ್ಟಿ ಮಾಡಿದೆ. ಈ ಬೆನ್ನಲ್ಲೇ ತನಿಖೆಗಳು ಕೂಡ ಆರಂಭವಾಗಿದೆ. ಆದರೆ ಈ ತನಿಖೆ ವಿಚಾರವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕೇಂದ್ರಕ್ಕೆ ಬಿಗ್ ಶಾಕ್ ನೀಡಿದ್ದಾರೆ.
ಹೌದು, ಇಂದು ಸದನದಲ್ಲಿ ಭದ್ರತಾ ಲೋಪದ ಕುರಿತು ಚರ್ಚೆಗಳಾಗುತ್ತಿದ್ದು ವಿಪಕ್ಷಗಳು ತನಿಖೆಗೆ ಆಗ್ರಹಿಸುತ್ತಿವೆ. ಇದಕ್ಕೆ ಸ್ಪೀಕರ್ ಅವರು ನಾವು ನಿಮ್ಮೆಲ್ಲರೊಂದಿಗೆ ಈ ಬಗ್ಗೆ ಚರ್ಚಿಸುತ್ತೇವೆ. ಭದ್ರತಾ ವ್ಯವಸ್ಥೆಗಳ ಜವಾಬ್ದಾರಿ ಮತ್ತು ಅಧಿಕಾರ ವ್ಯಾಪ್ತಿ ಲೋಕಸಭೆಯ ಸಚಿವಾಲಯದ ಮೇಲಿದೆ. ಅದಕ್ಕಾಗಿಯೇ ಸೆಕ್ರೆಟರಿಯೇಟ್ ನಿಮ್ಮೊಂದಿಗೆ ಮಾತನಾಡುತ್ತದೆ. ಸರ್ಕಾರವು ಲೋಕಸಭೆಯ ಕಾರ್ಯದರ್ಶಿಯ ಜವಾಬ್ದಾರಿಗಳಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ನಾವು ಅದಕ್ಕೂ ಅವಕಾಶ ನೀಡುವುದಿಲ್ಲ ಎಂದು ನುಡಿದಿದ್ದಾರೆ.
ಇದನ್ನು ಓದಿ: KSE Exam 2023: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಸ್ಥಳಾಂತರ – ಎಲ್ಲಿಂದ ಎಲ್ಲಿಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ದೇಶದಲ್ಲಿ ಕಂಡು ಕೇಳರಿಯದ ಭದ್ರತಾ ಲೋಪವಾಗಿದೆ. ಭಾರತೀಯ ಸಂಸತ್ತಿನ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ಸಂಸತ್ತಿನ ಒಳಗೆ ನುಸುಳಲಾಗಿದೆ. ಹೀಗಾಗಿ ಭದ್ರತಾ ಲೋಪದ ಹೊಣೆಯನ್ನು ಹೊತ್ತು ದೇಶದ ಗೃಹ ಸಚಿವರಾಗಿರುವ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸುತ್ತೇವೆ. ಪ್ರತಿಪಕ್ಷಗಳ ಬೇಡಿಕೆಗೆ ಪ್ರತಿಕ್ರಿಯಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸದನದ ಒಳಗಿನ ಭದ್ರತೆಯು ಸೆಕ್ರೆಟರಿಯೇಟ್ ವ್ಯಾಪ್ತಿಗೆ ಒಳಪಟ್ಟಿದೆ ಮತ್ತು ಕೇಂದ್ರವು ಮಧ್ಯಪ್ರವೇಶಿಸಲು ಬಿಡುವುದಿಲ್ಲ ಎಂದು ಹೇಳಿದರು.
ಅಂದಹಾಗೆ ಸಂಸತ್ತಿನ ಭದ್ರತೆಯ ಲೋಪಕ್ಕೆ ಸಂಬಂಧಿಸಿದಂತೆ ಪ್ರಮುಖ ಕ್ರಮ ತೆಗೆದುಕೊಳ್ಳಲಾಗಿದೆ. ಲೋಕಸಭೆ ಸೆಕ್ರೆಟರಿಯೇಟ್ ಎಂಟು ನೌಕರರನ್ನು ಅಮಾನತುಗೊಳಿಸಿದೆ. ಮುಂದಿನ ತನಿಖೆ ಕೂಡ ನಡೆಯುತ್ತಿದೆ.