Mohith panday : ಅಯೋಧ್ಯೆ ರಾಮ ಮಂದಿರದ ಅರ್ಚಕನಾಗಿ ಆಯ್ಕೆಯೋ ವಿದ್ಯಾರ್ಥಿಯ ಅಶ್ಲೀಲ ವಿಡಿಯೋ ವೈರಲ್ !!

Obscene video of student selected as priest of Ayodhya Ram Mandir goes viral

Mohith panday: ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಮಹಾಹಸ್ತಾಕಾಭಿಷೇಕ ನೆರವೇರಲಿದ್ದು ಈಗಿಂದಲೇ ಭರದ ಸಿದ್ದತೆಗಳು ನಡೆಯುತ್ತಿವೆ. ರಾಮನ ಪ್ರತಿಷ್ಠೆ ಆದ ಬಳಿಕ ನಿತ್ಯವೂ ಪೂಜೆ, ಪುನಸ್ಕಾರಗಳು ನೆರವೇರಲಿದ್ದು ಇದಕ್ಕಾಗಿ ರಾಮಮಂದಿರದ ಅರ್ಚಕರನ್ನೂ ಆಯ್ಕೆ ಮಾಡಲಾಗಿದೆ. ರಾಮಮಂದಿರದ ಅರ್ಚಕನಾಗಿ(Rama mandir worshiper) ರಾಮನ ಆರಾಧಕನಾಗಿ ವಿದ್ಯಾರ್ಥಿಯೊಬ್ಬ ಆಯ್ಕೆಯಾಗಿದ್ದು ದೇಶಾದ್ಯಂತ ಸುದ್ದಿಯಾಗುತ್ತಿರುವಾಗಲೇ ರಾಮ ಭಕ್ತರಿಗೆ ಅಘಾತಕಾರಿ ವಿಚಾರವೊಂದು ಬಂದೊದಗಿದೆ.

ಹೌದು, ಬರೋಬ್ಬರಿ 3,000 ಅರ್ಚಕರ ಪೈಕಿ ಗಾಜಿಯಾಬಾದ್ ವಿದ್ಯಾರ್ಥಿ ಮೋಹಿತ್ ಪಾಂಡೆ(Mohith Panday) ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಇದೀಗ ಮೋಹಿತ್​ ಪಾಂಡೆ ಅವರು ಹೊಸದೊಂದು ವಿಚಾರದಿಂದ ಚರ್ಚೆಯಾಗುತ್ತಿದ್ದಾರೆ. ಅದೇನೆಂದರೆ ಮೋಹಿತ್ ಅವರನ್ನು ಹೋಲುವ ವ್ಯಕ್ತಿಯೋರ್ವ ಮಹಿಳೆಯೊಂದಿಗಿರುವ ಖಾಸಗಿ ಕ್ಷಣಗಳ ನಕಲಿ ಪೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಆದರೆ ಇದು ನಕಲಿಯಾಗಿದೆ ಎಂದು ತಿಳಿದುಬಂದಿದೆ.

ಅಂದಹಾಗೆ ವೈರಲ್ ಆದ ಫೋಟೋ, ವಿಡಿಯೋದಲ್ಲಿ ಅರ್ಚಕ ವ್ಯಕ್ತಿಯೊಬ್ಬ ಅರೆಬೆತ್ತಲಾಗಿ ಮಹಿಳೆಯೊಂದಿಗೆ ಖಾಸಗಿ ಕ್ಷಣಗಳನ್ನು ಕಳೆಯುತ್ತಿದ್ದಾನೆ. ಇದನ್ನು ಗುಜರಾತ್​ ಮೂಲದ ಕಾಂಗ್ರೆಸ್​ ಮುಖಂಡ ಹಿತೇಂದ್ರ ಪಿತಾಡಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಸಖತ್ ವೈರಲ್​ ಆದ ಬೆನ್ನಲ್ಲೇ ಪೊಲೀಸರು ಆ ಕಾಂಗ್ರೆಸ್ ಮುಖಂಡನನ್ನು ಬಂಧಿಸಿದ್ದು, ಆತನ ವಿರುದ್ಧ ಭಾರತ ದಂಡ ಸಂಹಿತೆ (IPC Section) 469, 509, 295A ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ ಇದು ನಕಲಿ ವಿಡಿಯೋ ಎಂದು ಪೋಲೀಸರು ಸ್ಪಷ್ಟೀಕರಣ ನೀಡಿದ್ದಾರೆ.

ಇದನ್ನು ಓದಿ: Darshan Pet Dog Attack: ಮಹಿಳೆಗೆ ನಾಯಿ ಕಚ್ಚಿದ ಕೇಸ್ – ನಟ ದರ್ಶನ್ ಗೆ ಬಿಗ್ ರಿಲೀಫ್

ಯಾರು ಈ ಮೋಹಿತ್ ಪಾಂಡೆ?
ಮೋಹಿತ್ ಪಾಂಡೆ ವೆಂಕಟೇಶ್ವರ ವೈದಿಕ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ತಮ್ಮ ಆಚಾರ್ಯ ಪದವಿಯನ್ನು ಗಳಿಸಿದ ನಂತರ, ಮೋಹಿತ್ ಪಾಂಡೆ ತಮ್ಮ ಪಿಎಚ್‌ಡಿಗೆ ಸಿದ್ಧರಾಗುತ್ತಿದ್ದಾರೆ.
ಮೋಹಿತ್ ಅವರು ದೂಧೇಶ್ವರ ವೇದ ವಿದ್ಯಾಪೀಠದಲ್ಲಿ ಏಳು ವರ್ಷಗಳ ಅಧ್ಯಯನದ ನಂತರ, ಹೆಚ್ಚಿನ ಅಧ್ಯಯನಕ್ಕಾಗಿ ತಿರುಪತಿಗೆ ಹೋಗಿದ್ದಾರೆ. ಬಳಿಕ ನೇಮಕಾತಿಗೆ ಮುನ್ನ ಅವರು ಆರು ತಿಂಗಳ ತರಬೇತಿಗೆ ಒಳಗಾಗಬೇಕಾಗುತ್ತದೆ. ಇನ್ನು ಮೋಹಿತ್ ಅವರು ಅಧ್ಯಯನ ನಡೆಸಿದ ದೂಧೇಶ್ವರನಾಥ ಮಠವು ಉತ್ತರ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಪ್ರಪಂಚದೆಲ್ಲೆಡೆಯಿಂದ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ವೇದಾಧ್ಯಯನ ಪೀಠದಲ್ಲಿ ಸುಮಾರು 70 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ದೇಶದ ಮಾತ್ರವಲ್ಲದೇ ವಿದೇಶಗಳಲ್ಲಿರುವ ಹಿಂದೂ ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಾರೆ ಎಂಬುದು ಇಲ್ಲಿನ ವಿಶೇಷ.

https://x.com/dintentdata/status/1734287461793386740?t=V_TSP73qJtWY8xGlqTp_Bw&s=08

https://x.com/sank80551/status/1734384419350450230?t=__DeaoOIwRJbpfpz0BMP3g&s=08

Leave A Reply

Your email address will not be published.