Darshan Pet Dog Attack: ಮಹಿಳೆಗೆ ನಾಯಿ ಕಚ್ಚಿದ ಕೇಸ್ – ನಟ ದರ್ಶನ್ ಗೆ ಬಿಗ್ ರಿಲೀಫ್
Darshan Pet Dog Attack: ಅಕ್ಟೊಬರ್ 28 ರಂದು ಅಮಿತಾ ಜಿಂದಾಲ್ (Amita Jindal) ಅನ್ನೋರ ಮೇಲೆ ದರ್ಶನ್ ಅವರ ಸಾಕು ನಾಯಿ ಅಟ್ಯಾಕ್ ( Darshan Pet Dog Attack) ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಮಹಿಳೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಮಹಿಳೆಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ದೋಷಾರೋಪ ಪಟ್ಟಿಯಿಂದ ನಟ ದರ್ಶನ್ ಹೆಸರು ಕೈ ಬಿಟ್ಟಿದ್ದಾರೆ.
ಹೌದು, ದರ್ಶನ್ ಮನೆ ಬಳಿ ಮಹಿಳೆಗೆ ಅವರ ನಾಯಿ ಕಚ್ಚಿತ್ತು. ಈ ಸಂಬಂಧ ದರ್ಶನ್ ಮನೆ ಸಿಬ್ಬಂದಿ ಮತ್ತು ಮಹಿಳೆ ನಡುವೆ ವಾಗ್ವಾದವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮಹಿಳೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿದ ಪೊಲೀಸರು ನಟ ದರ್ಶನ್ ರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಮಹಿಳೆ ದೂರಿನಲ್ಲಿ ದರ್ಶನ್ ರನ್ನು ಎರಡನೇ ಆರೋಪಿಯಾಗಿ ಮಾಡಿ ದೂರು ನೀಡಿದ್ದರು.
ಆದರೆ ಇದೀಗ ಪ್ರಕರಣದಲ್ಲಿ ದರ್ಶನ್ ಕೈವಾಡವಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿದ್ದರಿಂದ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ನಟನ ಹೆಸರು ಕೈ ಬಿಟ್ಟಿದ್ದಾರೆ. ಪ್ರಕರಣ ನಡೆಯುವ ಸಂದರ್ಭದಲ್ಲಿ ದರ್ಶನ್ ಮನೆಯಲ್ಲಿರಲಿಲ್ಲ. ಇದರಲ್ಲಿ ನನ್ನ ಕೈವಾಡವಿಲ್ಲ ಎಂದು ದರ್ಶನ್ ಕೂಡಾ ವಿಚಾರಣೆ ವೇಳೆ ಹೇಳಿದ್ದರು. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದೂ ಭರವಸೆ ನೀಡಿದ್ದರು.