Gruhalakshmi yojana: ಈ 15 ಜಿಲ್ಲೆಗಳ ಯಜಮಾನಿಯರಿಗೆ ಮಾತ್ರ ‘ಗೃಹಲಕ್ಷ್ಮೀ’ 4ನೇ ಕಂತಿನ ಹಣ ಬಿಡುಗಡೆ !! ಲಿಸ್ಟ್ ನಲ್ಲಿ ನಿಮ್ಮ ಜಿಲ್ಲೆಯೂ ಉಂಟಾ?

Karnataka news Congress guarantee gruhalakshmi Yojana 4th installment released for these district check list

Gruhalakshmi Yojana: ಕಾಂಗ್ರೆಸ್ ಸರ್ಕಾರದ ಐದು ಭರವಸೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ರೂ.ಹಣ ಜಮಾ ಮಾಡಲಾಗುತ್ತಿದೆ. ಹೌದು, ಮಹಿಳೆಯರಿಗೆ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯ (Gruhalakshmi yojana) ಅಡಿಯಲ್ಲಿ 3 ಕಂತಿನ ಹಣ ಮನೆಯ ಯಜಮಾನಿಯರ ಖಾತೆಗೆ ಜಮೆ ಆಗಿದೆ. ಇದೀಗ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ವರ್ಗಾವಣೆಯಾಗುತ್ತಿದ್ದು, ಹಣವು ಮೊದಲ ಹಂತದಲ್ಲಿ 15 ಜಿಲ್ಲೆಗಳ ಫಲಾನುಭವಿಗಳು ಮೊದಲಿಗೆ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣವನ್ನು ಪಡೆಯುತ್ತಿದ್ದಾರೆ.

ಆ 15 ಜಿಲ್ಲೆಗಳ ಪಟ್ಟಿ ಇಲ್ಲಿದೆ.
* ಕಲ್ಬುರ್ಗಿ
* ಮೈಸೂರು
* ಬಿಜಾಪುರ
*ರಾಯಚೂರು
*ಕೋಲಾರ
* ಮಂಡ್ಯ
* ದಾವಣಗೆರೆ
* ಚಿತ್ರದುರ್ಗ
* ಬಾಗಲಕೋಟೆ
* ಹಾಸನ
* ಉತ್ತರ ಕನ್ನಡ
* ಬೆಂಗಳೂರು
* ಬೆಳಗಾವಿ
* ಗದಗ
* ಧಾರವಾಡ

ಆಗಸ್ಟ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ ಯಶಸ್ವಿಯಾಗಿ ಈವರೆಗೆ ಮೂರು ಕಂತಿನ ಹಣಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ, ಆದರೆ ಪೂರ್ತಿಯಾಗಿ ಎಲ್ಲಾ ಮಹಿಳೆಯರಿಗೂ ಕೂಡ ಗೃಹಲಕ್ಷ್ಮಿ ಯೋಜನೆ (Gruhalakshmi scheme) ಹಣ ತಲುಪಿಲ್ಲ. ಆಧಾ‌ರ್ ಕಾರ್ಡ್ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗದೆ ಇರುವುದು, ಬ್ಯಾಂಕ್ ಖಾತೆಗಳು ಆಕ್ಟಿವ್ ಆಗಿಲ್ಲದೇ ಇರುವುದು ಹಣ ಬಾರದೇ ಇರಲು ಕಾರಣವಾಗಿದೆ. ಆದ್ದರಿಂದ ಗೃಹಲಕ್ಷ್ಮಿ ಯೋಜನೆಯಡಿ (Gruhalakshmi scheme) ಇನ್ನೂ ಹಣ ಸಿಗದವರು ಅದಾಲತ್ ನಲ್ಲಿ ದೂರು ಕೊಡಬಹುದು.

ಇದನ್ನೂ ಓದಿ: ಪ್ರಪಂಚದಲ್ಲೇ ಅತೀ ಹೆಚ್ಚು ಕೃಷಿ ಭೂಮಿ ಹೊಂದಿದ ದೇಶಗಳಿವು – ಭಾರತಕ್ಕೆ ಟಾಪ್ 10 ಒಳಗೂ ಇಲ್ಲ ಸ್ಥಾನ !! ಹಾಗಿದ್ರೆ ಎಷ್ಟನೇ ಪ್ಲೇಸ್?

Leave A Reply

Your email address will not be published.