HSRP Number plate: HSRP ನಂಬರ್ ಪ್ಲೇಟ್ ಅಳವಡಿಕೆ ಕುರಿತು ಬಂತು ಮೆಗಾ ಅಪ್ಡೇಟ್ – ಸಾರಿಗೆ ಇಲಾಖೆಯಿಂದ ಮಹತ್ವದ ನಿರ್ಧಾರ !!

Harp number plate latest news transport department gave big update latest news

HSRP Number plate: ಹಳೆಯ ವಾಹನಗಳಿಗೆ ಕಡ್ಡಾಯಗೊಳಿಸಿರುವ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಹಾಕಿಸಿಕೊಳ್ಳಲು ಸರ್ಕಾರ 2024 ಫೆಬ್ರವರಿ 17ರ ವರೆಗೂ ಅವಕಾಶ ನೀಡಿ ಆದೇಶ ಹೊರಡಿಸಿತ್ತು. ಇದೀಗ ಈ ಬೆನ್ನಲ್ಲೇ ಸಾರಿಗೆ ಇಲಾಖೆಯು ಮತ್ತೊಂದು ಹೊಸ ಘೋಷಣೆ ಹೊರಡಿಸಿದೆ.

ಹೌದು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಎಲ್ಲಾ ಹಳೆಯ ವಾಹನಗಳಲ್ಲಿ HSRP ನಂಬರ್ ಪ್ಲೇಟ್‌ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಸರ್ಕಾರ ಈ ಮೊದಲು ಅನೇಕ ಸಲ 2019ರ ಮೊದಲು ಖರೀದಿಸಿದ ವಾಹನಗಳಿಗೆ HSRP ನಂಬರ್ ಪ್ಲೇಟ್(HSRP Number plate) ಅಳವಡಿಕೆ ಮಾಡಲು ಸೂಚನೆ ನೀಡುತ್ತಿತ್ತು. ಅಲ್ಲದೆ ನವೆಂಬರ್ 17 ಡೆಡ್ ಲೈನ್ ಎಂದೂ ಹೇಳಿತ್ತು. ಆದರೆ ಮತ್ತೆ ಇದನ್ನು 2024ರ ಫೆಬ್ರವರಿ 17ರ ವರೆಗೆ ಮುಂದೂಡಲಾಗಿದೆ. ಇದೀಗ ಈ ಕುರಿತು ಸಾರಿಗೆ ಇಲಾಖೆಯು ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು ನಿವಾಸಿಗಳಲ್ಲಿ ಎಚ್‌ಎಸ್‌ಆರ್‌ಪಿ ಬಗ್ಗೆ ಪ್ರಚಾರ ಮತ್ತು ಜಾಗೃತಿ ಮೂಡಿಸಲು ಮುಂದಾಗಿದೆ.

ಅಂದಹಾಗೆ ಏಪ್ರಿಲ್ 2019 ಕ್ಕಿಂತ ಮೊದಲು ನೋಂದಾಯಿಸಲಾದ ಎಲ್ಲಾ ವಾಹನಗಳು ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಬೇಕು. ನಂಬರ್ ಪ್ಲೇಟ್‌ಗಳನ್ನು ಸುಲಭವಾಗಿ ತೆಗೆಯುವ ಮೂಲಕ ವಾಹನಗಳ ದುರುಪಯೋಗವನ್ನು ತಡೆಯುವುದು ಪ್ರಾಥಮಿಕ ಕಾರಣಗಳಲ್ಲಿ ಒಂದಾಗಿದೆ. ಆದಾಗ್ಯೂ, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ರಿವೆಟ್‌ಗಳನ್ನು ಬಳಸಿ ಅಂಟಿಸಿದ ನಂತರ ಅವುಗಳನ್ನು ತೆಗೆದುಹಾಕಲಾಗುವುದಿಲ್ಲ.

ಎಚ್‌ಎಸ್‌ಆರ್‌ಪಿ’ ವೈಶಿಷ್ಟ್ಯ
ಇದು ಸಾಮಾನ್ಯ ನಂಬರ್‌ ಪ್ಲೇಟ್‌ಗಳಂತಲ್ಲ. ಇವುಗಳನ್ನು ಬದಲಿಸುವುದು, ವಿರೂಪಗೊಳಿಸುವುದು ಸುಲಭವಲ್ಲ. ಕ್ರೋಮಿಯಂ ಆಧಾರಿತ ಹಾಲೋಗ್ರಾಮ್‌ ಸೇರಿದಂತೆ ಹಲವು ವಿಶಿಷ್ಟತೆಗಳನ್ನು ಇವು ಒಳಗೊಂಡಿರುತ್ತವೆ. ಒಂದು ಬದಿಯಲ್ಲಿನೀಲಿ ಬಣ್ಣದ ಚಕ್ರ ಹೋಲುವ ಹಾಲೋಗ್ರಾಮ್‌ ಇರುತ್ತದೆ. ಇದರ ಕೆಳಗಡೆ 10 ನಂಬರಿನ ಶಾಶ್ವತ ಗುರುತಿನ ಸಂಖ್ಯೆ ಇರುತ್ತದೆ. ಅಂಕಿಗಳ ಮೇಲೆ ಆಂಗ್ಲಭಾಷೆಯಲ್ಲಿ’ಇಂಡಿಯಾ’ ಎಂಬ ಪದ ಹಲವೆಡೆ ನಮೂದಾಗಿರುತ್ತದೆ. ಇವು ನೋಂದಣಿ ಫಲಕಗಳಲ್ಲಿಏಕರೂಪತೆ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ. ಅಲ್ಲದೆ ಅಪರಾಧ ಕೃತ್ಯಗಳ ಪರಿಶೀಲನೆಗೆ ಸಹಕಾರಿಯಾಗಿದೆ.

ಇದನ್ನೂ ಓದಿ: JDS: ಜೆಡಿಎಸ್ ನಿಂದ ರಾಷ್ಟ್ರಾಧ್ಯಕ್ಷ ದೇವೇಗೌಡರ ಉಚ್ಚಾಟನೆ !! ಇವರೇ ನೋಡಿ ಮುಂದಿನ ಅಧ್ಯಕ್ಷ

Leave A Reply

Your email address will not be published.