SBI Recruitment: SBI ಬ್ಯಾಂಕಿನಲ್ಲಿ ಭರ್ಜರಿ ಉದ್ಯೋಗಾವಕಾಶ – ಮಿಸ್ ಮಾಡ್ಲೇಬೇಡಿ ಕೈತುಂಬಾ ಸಂಬಳ ಸಿಗೋ ಈ ಕೆಲ್ಸ!!

State Bank Of India CBO recruitment latest news

SBI Recruitment: ಉದ್ಯೋಗಾಂಕ್ಷಿಗಳೇ ಗಮನಿಸಿ, ನೀವೇನಾದರೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿದ್ದರೆ ಇಲ್ಲಿದೆ ಮುಖ್ಯ ಮಾಹಿತಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಖಾಲಿ ಇರುವ 5280 ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಯ( SBI Recruitment)ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು 12-12-2023 ಹಾಗೂ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನವಾಗಿದೆ. ಆನ್‌ಲೈನ್ ಪರೀಕ್ಷೆಗಾಗಿ ಕರೆ ಪತ್ರವನ್ನು ಡೌನ್‌ಲೋಡ್ ಮಾಡಬಹುದು.

ಹುದ್ದೆಯ ವಿವರ:
ಸರ್ಕಲ್ ಬೇಸ್ಡ್ ಆಫೀಸರ್ – 5280 ಹುದ್ದೆಗಳು
ಖಾಲಿ ಹುದ್ದೆಗಳು:
ಅಹಮದಾಬಾದ್- 430
ಅಮರಾವತಿ- 400
ಬೆಂಗಳೂರು- 280
ಭೋಪಾಲ್- 450
ಭುವನೇಶ್ವರ- 250
ಚಂಡೀಗಢ- 300
ಚೆನ್ನೈ-125
ಈಶಾನ್ಯ-250
ಹೈದರಾಬಾದ್- 425
ಜೈಪುರ-500
ಲಕ್ನೋ-600
ಕೋಲ್ಕತ್ತಾ-230
ಮಹಾರಾಷ್ಟ್ರ-300

ಮುಂಬೈ ಮೆಟ್ರೋ -90
ನವದೆಹಲಿ- 300
ತಿರುವನಂತಪುರಂ-250

ಶೈಕ್ಷಣಿಕ ಅರ್ಹತೆಗಳು
* ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಇಲ್ಲವೇ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.
* ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟ ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ ಸೇರಿದಂತೆ ವೈದ್ಯಕೀಯ, ಇಂಜಿನಿಯರಿಂಗ್, ಚಾರ್ಟರ್ಡ್ ಅಕೌಂಟೆಂಟ್, ಮುಂತಾದ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.
* ನಿರ್ದಿಷ್ಟ ವೃತ್ತದ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಲ್ಲಿಯ ಸ್ಥಳೀಯ ಭಾಷೆಯನ್ನು ಓದಲು ಬರೆಯಲು ಅರ್ಥಮಾಡಿಕೊಳ್ಳಲು ಅರಿತಿರಬೇಕು.
ಹುದ್ದೆಯ ನೇಮಕಾತಿಗಾಗಿ ಅಭ್ಯರ್ಥಿಗಳು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ವಯೋಮಿತಿ:
ವಯೋಮಿತಿ 31-10-2023 ರ ಅನುದಾರ, ಕನಿಷ್ಠ ವಯೋಮಿತಿ 21 ವರ್ಷವಾಗಿದ್ದು, ಗರಿಷ್ಠ ವಯೋಮಿತಿ 30 ವರ್ಷವಾಗಿದೆ.
ಅರ್ಜಿ ಶುಲ್ಕ:
ಸಾಮಾನ್ಯ/ ಓಬಿಸಿ/ಇಡ್ಬ್ಲೂಎಸ್‌ ಅಭ್ಯರ್ಥಿಗಳಿಗೆ ರೂ. 750ಆಗಿದ್ದು, ಎಸ್‌ ಸಿ/ ಎಸ್‌ ಟಿ/ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.

ಇದನ್ನು ಓದಿ: Uttar Pradesh: ಉರ್ದು ಭಾಷೆ ಮೇಲೂ ಕಣ್ಣಿಟ್ಟ ಹಿಂದೂ ಹುಲಿ – ಹೊಸ ಕಾನೂನು ತಂದು ಮಹತ್ವದ ಬದಲಾವಣೆ ಘೋಷಿಸಿದ ಯೋಗಿ ಸರ್ಕಾರ!!

ಎಸ್‌ ಸಿ/ ಎಸ್‌ ಟಿ/ ಓಬಿಸಿ/ ಧಾರ್ಮಿಕ ಅಲ್ಪಸಂಖ್ಯಾತ ವರ್ಗದವರಿಗೆ ಬ್ಯಾಂಕ್‌ ಪರೀಕ್ಷೆ ಪೂರ್ವ ತರಬೇತಿಯನ್ನು ಹಮ್ಮಿಕೊಂಡಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಅಪ್ಲಿಕೇಶನ್‌ನಲ್ಲಿ ಸಂಬಂಧಿತ ಕಾಲಂ ಭರ್ತಿ ಮಾಡಬಹುದು. ಇದಾದ ಬಳಿಕ, ತರಬೇತಿಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳನ್ನು ಬ್ಯಾಂಕಿನ ವೆಬ್‌ಸೈಟ್‌ ನಲ್ಲಿ ಪ್ರಕಟಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನ ವೆಬ್‌ಸೈಟ್‌ https://www.onlinesbi.sbi/ ವೀಕ್ಷಿಸಬಹುದು.

ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ, ಸ್ಕ್ರೀನಿಂಗ್ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಗಳು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಅನುಕ್ರಮವಾಗಿ 75:25 ಪ್ರತಿಶತ ಅಂಕಗಳೊಂದಿಗೆ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ದ ಮಾಡಲಾಗುತ್ತದೆ.

ಇದನ್ನು ಓದಿ: UPI Transaction Limit: ʻUPIʼ ವಹಿವಾಟಿನ ಮಿತಿ 5 ಲಕ್ಷಕ್ಕೆ ಹೆಚ್ಚಿಸಿದ RBI – ಆದ್ರೆ ಈ ಕೆಲಸಗಳಿಗೇ ಮಾತ್ರ!!

 

Leave A Reply

Your email address will not be published.