Parliment sessions: ಜಮ್ಮು ಕಾಶ್ಮೀರದ ಕುರಿತು ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡ ಮೋದಿ ಗೌರ್ಮೆಂಟ್ !!

political news Parliament Session government took an important decision on Jammu and Kashmir

Parliament Session: ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಜಮ್ಮ ಮತ್ತು ಕಾಶ್ಮೀರದ ಕುರಿತು ಬಹಳಷ್ಟು ವಿಶೇಷ ಕಾಳಜಿಯನ್ನು ವಹಿಸುತ್ತಿದೆ. ಅದರಲ್ಲೂ ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಅದು ಕೂಡ ಭಾರತದ ಉಳಿದೆಲ್ಲಾ ರಾಜ್ಯಗಳಂತೆ ಮಾಡಿದೆ. ಅಂತೆಯೇ ಇದೀಗ ಜಮ್ಮು ಕಾಶ್ಮೀರದ ಕುರಿತು ಮೋದಿ ಸರ್ಕಾರವು ಇಂದು ಲೋಕಸಭೆಯಲ್ಲಿ(Parliment Session)ಮತ್ತೊಂದು ಮಹತ್ವ ನಿರ್ಧಾರವನ್ನು ಕೈಗೊಂಡಿದೆ.

 

ಹೌದು, ಜಮ್ಮು ಮತ್ತು ಕಾಶ್ಮೀರಕ್ಕೆ(Jammu and Khashmir) ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ಯನ್ನು ರದ್ದು ಮಾಡಿ ಮೋದಿ ನೇತೃತ್ವದ ಬಿಜೆಪಿ(BJP) ಸರ್ಕಾರವು ಹೊಸ ಸಾಧನೆ ಮಾಡಿತ್ತು. ಇದೀಗ ಈ ಕುರಿತು ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರವು ಈ ಹಿನ್ನೆಲೆಯಲ್ಲಿ ಇಂದು ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ, 2023 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ, 2023 ಎಂಬ ಎರಡು ಮಸೂದೆಗಳನ್ನು ಮಂಡಿಸಿದೆ.

• ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ:
ಇದು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಕಾಶ್ಮೀರ ಪಂಡಿತರು ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿರಾಶ್ರಿತರಿಗೆ ಸ್ಥಾನ ಕಾಯ್ದಿರಿಸುವ ಮಸೂದೆ. ಈ ಪೈಕಿ ಮೀಸಲಾತಿ ಮಸೂದೆಯಡಿಯಲ್ಲಿ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಘೋಷಿಸಿದೆ. ಜಮ್ಮು ಮತ್ತು ಕಾಶ್ಮಿರ ವಿಧಾನಸಭೆಯಲ್ಲಿ ಕಾಶ್ಮೀರಿ ಪಂಡಿತರು ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿರಾಶ್ರಿತರಿಗೆ ಸೀಟು ಕಾಯ್ದಿರಿಸಿದ್ದು ಈ ಮಸೂಧೆಯನ್ನು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಮಂಡಿಸಿದ್ದಾರೆ.
• ಯಾರು ಯಾರಿಗೆ ಎಷ್ಟು ಮೀಸಲಾತಿ?
ಜಮ್ಮ ಕಾಶ್ಮೀರ ವಿಧಾನಸಭೆಗೆ ಇಬ್ಬರು ಕಾಶ್ಮೀರ ಪಂಡಿತರ ಮಹಿಳೆ ಸೇರಿ ಹಾಗೂ ಒಂದು ಸ್ಥಾನವನ್ನು ಪಾಕಿಸ್ತಾನ ಆಕ್ರಮಿತಿ ಕಾಶ್ಮೀರದ ನಿರಾಶ್ರಿತರಿಗೆ ನೀಡಲಾಗಿದೆ. ಈ ಎರಡು ಸಮುದಾಯದಿಂದ ಒಟ್ಟು ಮೂವರು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಆಯ್ಕೆಯಾಗಲಿದ್ದಾರೆ.

ಇದನ್ನು ಓದಿ: Kim Jong Un: ದೇಶದ ಜನರಲ್ಲಿ ವಿಚಿತ್ರ ಮನವಿ ಮಾಡಿ ಜೋರಾಗಿ ಕಣ್ಣೀರಿಟ್ಟ ಉತ್ತರ ಕೊರಿಯಾ ಅಧ್ಯಕ್ಷ !! ಅರೆ ಏನಿದು ಅಚ್ಚರಿ ಸುದ್ದಿ.. ಯಾಕಾಗಿ ?!

• ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ, 2023
ಕಾಶ್ಮೀರಿ ಪಂಡಿತರು ಸ್ಥಳಾಂತರಗೊಂಡಾಗ, ಅವರು ತಮ್ಮ ಸ್ವಂತ ದೇಶದಲ್ಲಿ ನಿರಾಶ್ರಿತರಾಗಿ ವಾಸಿಸಲು ಒತ್ತಾಯಿಸಲಾಯಿತು. ಸುಮಾರು 46,631 ಕುಟುಂಬಗಳು ತಮ್ಮ ದೇಶದಲ್ಲಿ ಸ್ಥಳಾಂತರಗೊಂಡಿವೆ. ಈ ಮಸೂದೆಯು ಅವರಿಗೆ ಹಕ್ಕುಗಳನ್ನ ಪಡೆಯಲು, ಅವರಿಗೆ ಪ್ರಾತಿನಿಧ್ಯವನ್ನು ನೀಡುತ್ತದೆ.

ಅಂದಹಾಗೆ ಈ ಎರಡೂ ಮಸೂದೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ(Home minister Amith Sha)ಅವರು ಲೋಕಸಭೆಯಲ್ಲಿ ಮಂಡಿಸಿದ್ದು, ಈ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ, 2023 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ, 2023 ಬಗ್ಗೆ ತೀವ್ರ ಚರ್ಚೆ ನಡೆದು, ಅಂಗೀಕಾರ ಮಾಡಲಾಗಿದೆ.

https://x.com/CTRavi_BJP/status/1732344610461225459?t=bvDBDR3U3nXyY9tf5ZKJJA&s=08

Leave A Reply

Your email address will not be published.