Orange Peel Benefits: ಇನ್ನು ಎಸೆಯಬೇಡಿ ಕಿತ್ತಲೆ ಸಿಪ್ಪೆ – ಹೀಗೆ ಬಳಸಿದ್ರೆ ನಿಮ್ಮ ಸೌಂದರ್ಯ ಹೆಚ್ಚಿಸುವಲ್ಲಿ ಇದರದ್ದೇ ಪ್ರಮುಖ ಪಾತ್ರ !!

beauty tips skin care Benefits of orange peel for your skin glow

Orange Peel Benefits: ಪೋಷಕಾಂಶಗಳಿಂದ (Nutrients) ಸಮೃದ್ಧವಾಗಿರುವ, ವಿಟಮಿನ್‌ ಸಿ (Vitamin C) ಒಳಗೊಂಡ ಕಿತ್ತಳೆ ಹಣ್ಣು (Orange fruit) ರೋಗ ನಿರೋಧಕ (immunity) ಶಕ್ತಿಯನ್ನೂ ಹೆಚ್ಚು ಮಾಡುತ್ತದೆ. ಜೊತೆಗೆ ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳನ್ನು (winter health problems) ನಿವಾರಿಸುವ ಶಕ್ತಿಯೂ ಈ ಕಿತ್ತಳೆಯಲ್ಲಿದೆ. ಇಂತಹ ಕಿತ್ತಳೆ ಹಣ್ಣನ್ನು ತಿಂದು ಸಿಪ್ಪೆಯನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದೀರಾ? ಹಾಗಾದರೆ, ಎಸೆಯುವ ಮೊದಲು ಒಮ್ಮೆ ಯೋಚಿಸಿ. ಹೌದು, ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಸೌಂದರ್ಯವರ್ಧಕಗಳಿಗಿಂತಲೂ (Cosmetics) ಕಿತ್ತಳೆ ಸಿಪ್ಪೆಯೇ (Orange Peel Benefits) ನಿಮ್ಮ ಕೈಯಲ್ಲಿರುವಾಗ ನಿಮ್ಮ ಸೌಂದರ್ಯವರ್ಧಕವನ್ನು ನೀವೇ ತಯಾರಿ ಮಾಡಿಕೊಳ್ಳಬಹುದು!

ಮೊದಲು ಕಿತ್ತಳೆಯ ಸಿಪ್ಪೆಯನ್ನು ಒಣಗಿಸಿ ಇಟ್ಟುಕೊಂಡರೆ, ಸ್ಕ್ರಬ್‌ಗೆ ದುಡ್ಡು ಕೊಡಬೇಕಾಗಿಲ್ಲ. ಒಣಗಿಸಿಟ್ಟುಕೊಂಡ ಕಿತ್ತಳೆಯ ಸಿಪ್ಪೆಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಪುಡಿ ಮಾಡಿಕೊಂಡು ಒಂದು ಡಬ್ಬಿಯಲ್ಲಿ ಶೇಕರಿಸಿಟ್ಟು, ವಾರಕ್ಕೊಮ್ಮೆ ಒಂದು ಬೌಲ್ ನಲ್ಲಿ ಅಗತ್ಯವಿದ್ದಷ್ಟು ಕಿತ್ತಳೆ ಸಿಪ್ಪೆಯ ಪುಡಿಗೆ ನೀರು ಹಾಗೂ ಮೊಸರು ಸೇರಿ ಮುಖಕ್ಕೆ ಸ್ಕ್ರಬ್‌ ಮಾಡಿಕೊಳ್ಳಬಹುದು. ನೈಸರ್ಗಿಕವಾದ ಈ ಸ್ಕ್ರಬ್‌ ಮಾರುಕಟ್ಟೆಯ ರಾಸಾಯನಿಕಯುಕ್ತ ಸ್ಕ್ರಬ್‌ಗಳಿಗಿಂತಲೂ ಚೆನ್ನಾಗಿ ಕೆಲ್ಸ ಮಾಡುತ್ತೆ.

ಇನ್ನು ಕಣ್ಣಿನ ಅಡಿಭಾಗದಲ್ಲಿ ಕಪ್ಪಾಗಿಬಿಡುವುದು ಹಾಗೂ ಊದಿಕೊಳ್ಳುವುದು ಇತ್ಯಾದಿ ಸಮಸ್ಯೆ ನಿವಾರಣೆಗೆ ಕಿತ್ತಳೆ ಸಿಪ್ಪೆಯನ್ನು ಫ್ರಿಡ್ಜ್‌ನಲ್ಲಿಟ್ಟು ನಂತರ ತಣ್ಣಗಿನ ಸಿಪ್ಪೆಯನ್ನು ಕಣ್ಣ ಕೆಳಗಿನ ವರ್ತುಲದ ಮೇಲೆ ಸ್ವಲ್ಪ ಹೊತ್ತು ಇಡಬೇಕು.

ಇದನ್ನು ಓದಿ: ಈ ದಿನದಿಂದ ಮಂಗಳೂರು-ಗೋವಾ ನಡುವೆ ಸಂಚರಿಸಲಿದೆ ವಂದೇ ಭಾರತ್ ರೈಲು

ಕಿತ್ತಳೆ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಕುದಿಸಿ. ಚೆನ್ನಾಗಿ ಕುದಿದ ಮೇಲೆ ನೀರನ್ನು ಸೋಸಿಕೊಂಡು ತಣಿಸಿ ಒಂದು ಸ್ಪ್ರೇ ಬಾಟಲಿಯಲ್ಲಿ ಹಾಕಿಡಿ. ಆಗಾಗ ಮುಖಕ್ಕೆ ಇದನ್ನು ಟೋನರ್‌ನಂತೆ ಬಳಸಿಕೊಳ್ಳಬಹುದು. ಇದು ಮುಖದ ರಂಧ್ರಗಳನ್ನು ಬಿಗಿಗೊಳಿಸಿ ಯೌವನವನ್ನು ನೀಡುತ್ತದೆ . ಈ ನೀರನ್ನು 10ರಿಂದ 15 ದಿನಗಳ ಕಾಲ ಫ್ರಿಡ್ಜ್‌ನಲ್ಲಿ ಇಟ್ಟುಕೊಂಡು ನಿತ್ಯವೂ ಬಳಸಬಹುದು.

ಒಣಗಿಸಿ ಪುಡಿ ಮಾಡಿಟ್ಟುಕೊಂಡ ಕಿತ್ತಳೆ ಪುಡಿಯನ್ನು ಜೇನಿನ ಜೊತೆಗೆ ಮಿಕ್ಸ್‌ ಮಾಡಿ ಮುಖಕ್ಕೆ ಪ್ಯಾಕ್‌ ಹಚ್ಚಿಕೊಳ್ಳಬಹುದು. ಈ ಫೇಸ್‌ ಪ್ಯಾಕ್‌ ಮುಖವನ್ನು ಇನ್ನಷ್ಟು ಹೊಳಪಾಗಿಸುತ್ತದೆ.

ಇನ್ನು ಕಿತ್ತಳೆ ಸಿಪ್ಪೆಯ ಪುಡಿಯನ್ನು ತೆಂಗಿನೆಣ್ಣೆಯ ಜೊತೆಗೆ ಬೆರೆಸಿದರೆ ಅದನ್ನು ಲಿಪ್‌ ಬಾಮ್‌ವಂತೆಯೂ ಬಳಸಬಹುದು.

ಕಿತ್ತಳೆಯ ಸಿಪ್ಪೆಯ ಒಳಭಾಗವನ್ನು ಅಂದರೆ ಬಿಳಿಯ ಭಾಗವನ್ನು ಚರ್ಮಕ್ಕೆ ಉಜ್ಜಿ. ಇದು ಹೆಚ್ಚುವರಿ ಎಣ್ಣೆಯಂಶ ಉತ್ಪತ್ತಿಯಾಗದಂತೆ ತಡೆಯುವ ಮೂಲಕ ಮೊಡವೆಯನ್ನು ತಡೆಯುತ್ತದೆ.

ಕಿತ್ತಳೆ ಸಿಪ್ಪೆಯನ್ನು ಎಸೆಯದೆ, ಅದನ್ನು ಸ್ನಾನ ಮಾಡುವ ನೀರಿನಲ್ಲಿ ಹಾಕಿಡಿ. ಈ ನೀರು ಕೇವಲ ಒಳ್ಳೆಯ ಪರಿಮಳವನ್ನಷ್ಟೇ ಅಲ್ಲ, ನೀರಿಗೆ ಸಿಟ್ರಸ್‌ ತೈಲದಂಶವನ್ನೂ ಸೇರಿಸುವ ಮೂಲಕ ಚರ್ಮವನ್ನು ಹೊಳಪಾಗಿಸುತ್ತದೆ.

ಕಿತ್ತಳೆ ಸಿಪ್ಪೆಗೆ ಸಕ್ಕರೆ ಹಾಕಿ ರುಬ್ಬಿಕೊಳ್ಳಿ. ಅದಕ್ಕೆ ಕೊಂಚ ಆಲಿವ್‌ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣದಿಂದ ದೇಹದ ಚರ್ಮಕ್ಕೆ ಮಸಾಜ್‌ ಮಾಡಿ. ಬಾಡಿ ಸ್ಕ್ರಬ್‌ ಆಗಿ ಬಳಸಿ. ಇದು ಒಣ, ಸತ್ತ ಚರ್ಮವನ್ನು ತೆಗೆದು ಚರ್ಮಕ್ಕೆ ಹೊಳಪು ನೀಡುತ್ತದೆ.

 

Leave A Reply

Your email address will not be published.