Amith Sha: CAA ಜಾರಿ ಬಗ್ಗೆ ಬಿಗ್ ಅಪ್ಡೇಟ್ ನೀಡಿ ಹೊಸ ಸವಾಲೆಸೆದ ಅಮಿತ್ ಶಾ !!

Amith Sha: ಪೌರತ್ವ ತಿದ್ದುಪಡಿ ಕಾಯ್ದೆಯು(CAA) ದೇಶದಲ್ಲಿ ಮತ್ತೆ ಸದ್ದುಮಾಡಲು ಶುರುಮಾಡಿದ್ದು, ಇದು ದೇಶದ ಕಾನೂನು ಇದರ ಜಾರಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಾವು ಅದನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amith Sha) ಅವರು ಹೇಳಿದ್ದಾರೆ.

ಹೌದು, ಮೋದಿ ಆಡಳಿತಾವಧಿಯಲ್ಲಿ ಕೆಲವು ಕಾನುನು ಜಾರಿ ವಿಚಾರಗಳು ಬಹಳ ದೊಡ್ಡ ಮಟ್ಟದಲ್ಲಿ ಸದ್ದುಮಾಡಿವೆ. ಅದರಲ್ಲಿ ಪೌರತ್ವ ತಿದ್ದುಪಡಿಕಾಯಿದೆಯೂ ಒಂದು. ಇದು ಬಾರೀ ದೊಡ್ಡ ಕಠಿಣವಾದ ವಿವಾದವನ್ನು ಹುಟ್ಟುಹಾಕಿತ್ತು. ಒಂದು ಸಮಯದಲ್ಲಿ ಈ ಕಾನೂನು ಜಾರಿ ಕುರಿತು ಸಾಕಷ್ಟು ಪರ-ವಿರೋಧಗಳು ನಡೆದಿದ್ದುವು. ನಡುವೆ ಕೊಂಚ ಮಟ್ಟಿಗೆ ತಣ್ಣಗಿಗಿದ್ದು ಈ ವಿಚಾರ ಇದೀಗ ಮತ್ತೆ ಸದ್ದು ಮಾಡಲು ಶುರುಮಾಡಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇದರ ಜಾರಿ ಕುರಿತು ಹೊಸ ಅಪ್ಡೇಟ್ ನೀಡಿದ್ದು CAA ಜಾರಿಯನ್ನು ಯಾರಿಂದಲೂ ತಡೆಯಲು ಸಾಧವಿಲ್ಲ ಎಂದು ಹೊಸ ಸವಾಲೆಸೆದಿದ್ದಾರೆ.

ಅಂದಹಾಗೆ ನಿನ್ನೆ ದಿನ ಪಶ್ಚಿಮ ಬಂಗಾಳದ(West bengal) ರಾಜಧಾನಿ ಕೋಲ್ಕತಾದಲ್ಲಿ ನಡೆದ ಬಿಜೆಪಿ(BJP) ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೌರತ್ವ (ತಿದ್ದುಪಡಿ) ಕಾಯ್ದೆಯು ದೇಶದ ಕಾನೂನು. ಇದರ ಜಾರಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಅದನ್ನು ಜಾರಿಗೊಳಿಸುವುದು ಅಕ್ಷರಶಹ ಸತ್ಯ ಎಂದು ಗುಡುಗಿದ್ದಾರೆ.

ಇದನ್ನು ಓದಿ: Varanasi Crime News: ಒಂದು ವರ್ಷದಿಂದ ತಾಯಿಯ ಮೃತದೇಹದ ಬಳಿಯೇ ಇದ್ದ ಹೆಣ್ಣುಮಕ್ಕಳು; ಮನೆಗೆ ಬಂದ ಪೊಲೀಸರಿಗೆ ಶಾಕ್‌!!!

Leave A Reply

Your email address will not be published.