Dharmasthala: ಸಿ.ಎಂ.ಸಿದ್ದರಾಮಯ್ಯ ಅಶ್ಲೀಲ ಆಡಿಯೋ ವೈರಲ್ !: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Dharmasthala: ಸಿ.ಎಂ ಸಿದ್ದರಾಮಯ್ಯ(CM Siddaramaiah) ಅವರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ ಆಡಿಯೋ ವೈರಲ್ ಆಗಿ ಸಂಚಲನ ಮೂಡಿಸಿದೆ. ಈ ಕುರಿತಂತೆ ಕಾಂಗ್ರೆಸ್ ಕಾರ್ಯಕರ್ತರು ಧರ್ಮಸ್ಥಳ (Dharmasthala)ಪೊಲೀಸ್‌ ಠಾಣೆಯಲ್ಲಿ ನ.19 ರಂದು ಸಂಜೆ ದೂರು ದಾಖಲಿಸಿದ್ದಾರೆ. ಈ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಕೋರಿಗದ್ದೆ ನಿವಾಸಿಯಾಗಿರುವ ವೃತ್ತಿಯಲ್ಲಿ ಸೆಲೂನ್ ಅಂಗಡಿಯಲ್ಲಿ ಕೆಲಸ ಮಾಡುವ ರಜಿತ್ ಕೊಕ್ಕಡ (ರಜಿತ್ ಭಂಡಾರಿ)ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯನವರ ಅಶ್ಲೀಲವಾಗಿ ಮಾತಾನಾಡಿರುವ ಆಡಿಯೋ ಹರಿದಾಡುತ್ತಿದೆ. ಈ ಕುರಿತಂತೆ ಬೆಳ್ತಂಗಡಿ ಕಾಂಗ್ರೆಸ್ ಕಾರ್ಯಕರ್ತ ಹಕಿಮ್ ಕೊಕ್ಕಡ ಧರ್ಮಸ್ಥಳ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಧರ್ಮಸ್ಥಳ ಪೊಲೀಸರು ಆರೋಪಿ ಕೊಕ್ಕಡ ಗ್ರಾಮದ ಕೋರಿಗದ್ದೆ ನಿವಾಸಿ ರಜಿತ್ ಕೊಕ್ಕಡ ರಜಿತ್ ಭಂಡಾರಿ ಮೇಲೆ ಐಪಿಸಿ 1860 (u/s 153A,504,505(2)) ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

 

ಇದನ್ನು ಓದಿ: Udupi 4 Murder Case: ಉಡುಪಿಯಲ್ಲಿ ನಾಲ್ವರ ಹತ್ಯೆ ಪ್ರಕರಣ; ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಪೋಸ್ಟ್‌; ಸುಮೋಟೋ ಕೇಸ್‌ ದಾಖಲು!!!

1 Comment
  1. […] ಇದನ್ನು ಓದಿ: Dharmasthala: ಸಿ.ಎಂ.ಸಿದ್ದರಾಮಯ್ಯ ಅಶ್ಲೀಲ ಆಡಿಯೋ ವ… […]

Leave A Reply

Your email address will not be published.