Crime News: ಮತ್ತೊಂದು ಸೂಟ್‌ಕೇಸ್‌ ಕೃತ್ಯ ಬಯಲು ! ಬೀದಿ ಬದಿ ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ !

Crime News: ಮಹಾರಾಷ್ಟ್ರ ರಾಜಧಾನಿ ಮುಂಬೈನ ಕುರ್ಲಾದಲ್ಲಿ (Kurla) ಸೂಟ್‌ಕೇಸ್ ಒಂದರಲ್ಲಿ ಮಹಿಳೆಯೊಬ್ಬರ ಶವ (Woman Body) ಪತ್ತೆಯಾಗಿದೆ. ಪ್ರಸ್ತುತ ಶಾಂತಿ ನಗರದ ಸಿಎಸ್‌ಟಿ ರೋಡ್‌ ಬಳಿ ಮೆಟ್ರೋ ರೈಲು ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಿರ್ಮಾಣದ ಸ್ಥಳದಲ್ಲಿ ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಸೂಟ್‌ಕೇಸ್‌ ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಸೂಟ್‌ಕೇಸ್‌ನಲ್ಲಿ (Suitcase) ಮಹಿಳೆಯೊಬ್ಬರ ಶವ ಇರುವುದು ಬೆಳಕಿಗೆ (Crime News) ಬಂದಿದೆ.

ಸದ್ಯ ಟಿ ಶರ್ಟ್‌ ಹಾಗೂ ಟ್ರ್ಯಾಕ್‌ ಪ್ಯಾಂಟ್‌ ಧರಿಸಿದ್ದ ಮಹಿಳೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆಕೆ ಯಾರು, ಯಾವ ಊರಿನವರು, ಆಕೆಯ ಹೆಸರೇನು ಎಂಬುದು ಕೂಡ ಗೊತ್ತಾಗಿಲ್ಲ. ಇವರು ಸುಮಾರು 25 ರಿಂದ 35 ವರ್ಷದವರು ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ ವರದಿ ಬಳಿಕವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.

ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್‌ 302 (ಕೊಲೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಸುತ್ತಮುತ್ತ ಅಳವಡಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸುತ್ತಿದ್ದಾರೆ. ಮುಂಬೈ ಕ್ರೈಂ ಬ್ರ್ಯಾಂಚ್‌ ಕೂಡ ಪೊಲೀಸರ ತನಿಖೆಗೆ ಜೈಜೋಡಿಸಿದ್ದಾರೆ. ಹಂತಕನ ಬಂಧನಕ್ಕೆ ಬಲವಾದ ಬಲೆ ಬೀಸಿದ್ದಾರೆ.

 

ಇದನ್ನು ಓದಿ: Dharmasthala: ಸಿ.ಎಂ.ಸಿದ್ದರಾಮಯ್ಯ ಅಶ್ಲೀಲ ಆಡಿಯೋ ವೈರಲ್ !: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Leave A Reply

Your email address will not be published.