Railway Passengers Special Rights: ರೈಲು ಪ್ರಯಾಣಿಕರಿಗೆ ಭರ್ಜರಿ ಸುದ್ದಿ- ಇನ್ನು ರೈಲಿನಲ್ಲಿ ಪ್ರಯಾಣಿಸುವಾಗ ಊಟ ತಿಂಡಿ, ಬೆಡ್ ಶೀಟ್, ದಿಂಬು ಎಲ್ಲವೂ ಸಿಗುತ್ತೆ ಉಚಿತ !! ಹೀಗೆ ಮಾಡಿದ್ರೆ ಮಾತ್ರ

National news Indian railway passengers special rights here is complete detail

Railway Passengers Special Rights : ರೈಲ್ವೇ ಪ್ರಯಾಣಿಕರೇ (Railway Passengers)ಗಮನಿಸಿ, ರೈಲಿನಲ್ಲಿ ಪ್ರಯಾಣಿಸುವ ಸಂದರ್ಭ ಕೆಲ ವಿಚಾರಗಳನ್ನು ತಿಳಿದುಕೊಳ್ಳಿ. ರೈಲ್ವೇ ತನ್ನ ಪ್ರಯಾಣಿಕರಿಗೆ ಅನೇಕ ಸೌಲಭ್ಯಗಳನ್ನು (Railway Passengers Special Rights)ಕಲ್ಪಿಸುತ್ತಿದೆ. ರೈಲು ಟಿಕೆಟ್ ಖರೀದಿಸುವಾಗ ಪ್ರಯಾಣಿಕರು ಟಿಕೆಟ್ ಖರೀದಿ ಮಾಡುವಾಗ ಉಚಿತ ಬೆಡ್‌ರೋಲ್‌ಗಳಿಂದ ಹಿಡಿದು ರೈಲಿನಲ್ಲಿ ಉಚಿತ ಆಹಾರದವರೆಗಿನ ಹಕ್ಕುಗಳನ್ನು ಒಳಗೊಂಡಿದೆ. ರೈಲ್ವೇ ಈ ಎಲ್ಲಾ ಸೌಲಭ್ಯಗಳನ್ನು ಪ್ರಯಾಣಿಕರಿಗೆ ಯಾವಾಗ ಮತ್ತು ಹೇಗೆ ಒದಗಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ?

*ಉಚಿತ ಆಹಾರ :
ನೀವು ರಾಜಧಾನಿ, ದುರಂತೋ ಮತ್ತು ಶತಾಬ್ದಿಯಂತಹ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದರೆ, ಒಂದು ವೇಳೆ, ನಿಮ್ಮ ರೈಲು 2 ಗಂಟೆಗಳಿಗಿಂತ ಹೆಚ್ಚು ತಡವಾಗಿದ್ದಲ್ಲಿ, ರೈಲ್ವೆ ನಿಮಗೆ ಉಚಿತ ಆಹಾರವನ್ನು ಒದಗಿಸುತ್ತವೆ. ಇದಲ್ಲದೆ ನಿಮ್ಮ ರೈಲು ತಡವಾಗಿದ್ದು, ನಿಮಗೆ ತಿನ್ನುವುದಕ್ಕೆ ಆಹಾರ ಪದಾರ್ಥ ಬೇಕಾದಲ್ಲಿ ರೈಲಿನಲ್ಲಿ ಆರ್ ಇ -ಕ್ಯಾಟರಿಂಗ್ ಸರ್ವಿಸ್ ಮೂಲಕ ಆಹಾರವನ್ನು ಆರ್ಡರ್ ಮಾಡಲು ಅವಕಾಶವಿದೆ.

* ಉಚಿತ ಬೆಡ್ ರೋಲ್ :
ಕೆಲವು ರೈಲುಗಳಲ್ಲಿ, ಪ್ರಯಾಣಿಕರು ಸ್ಲೀಪರ್ ಕ್ಲಾಸ್‌ನಲ್ಲಿ ಬೆಡ್‌ರೋಲ್‌ಗಳನ್ನು ಪಡೆಯಬಹುದು. ರೈಲು ಪ್ರಯಾಣದ ಸಮಯದಲ್ಲಿ ನಿಮಗೆ ಬೆಡ್‌ರೋಲ್ ಸಿಗದೇ ಇದ್ದರೆ ಈ ಕುರಿತು ದೂರು ನೀಡಬಹುದು ಮಾತ್ರವಲ್ಲದೆ ರಿಫಂಡ್ ಕೂಡಾ ಪಡೆಯಬಹುದು. ಭಾರತೀಯ ರೈಲ್ವೇ ತನ್ನ ಎಲ್ಲಾ AC1, AC2, AC3 ಕೋಚ್‌ಗಳಲ್ಲಿ ತನ್ನ ಪ್ರಯಾಣಿಕರಿಗೆ ಒಂದು ಹೊದಿಕೆ, ಒಂದು ದಿಂಬು, ಎರಡು ಬೆಡ್‌ಶೀಟ್‌ಗಳು ಮತ್ತು ಒಂದು ಕೈ ಟವೆಲ್ ಅನ್ನು ಒದಗಿಸುತ್ತದೆ. ಆದರೆ, ಗರೀಬ್ ರಥ ಎಕ್ಸ್‌ಪ್ರೆಸ್‌ನಲ್ಲಿ ಇದಕ್ಕಾಗಿ 25 ರೂ. ಪಾವತಿ ಮಾಡಬೇಕಾಗುತ್ತದೆ.

* ಫ್ರೀ ವೈಟಿಂಗ್ ಹಾಲ್ :
ಯಾವುದೇ ನಿಲ್ದಾಣದಲ್ಲಿ ಇಳಿದ ಬಳಿಕ ಮುಂದಿನ ರೈಲನ್ನು ಹಿಡಿಯಲು ನೀವು ನಿಲ್ದಾಣದಲ್ಲಿ ಕಾಯಬೇಕಾದರೆ , ಎಸಿ ಅಥವಾ ನಾನ್ ಎಸಿ ವೇಟಿಂಗ್ ಹಾಲ್‌ನಲ್ಲಿ ಆರಾಮವಾಗಿ ಕಾಯಲು ಅವಕಾಶವಿದ್ದು, ಇದಕ್ಕಾಗಿ ನೀವು ನಿಮ್ಮ ರೈಲು ಟಿಕೆಟ್ ತೋರಿಸಬೇಕಾಗುತ್ತದೆ.

* ಉಚಿತ ವೈದ್ಯಕೀಯ ಸಹಾಯ :
ರೈಲಿನಲ್ಲಿ ಪ್ರಯಾಣಿಸುವಾಗ ಆರೋಗ್ಯ ಸಮಸ್ಯೆ ಉದ್ಭವಿಸಿದರೆ, ನಿಮಗೆ ರೈಲ್ವೇಯು ಉಚಿತವಾಗಿ ಪ್ರಥಮ ಚಿಕಿತ್ಸೆ ನೀಡುತ್ತದೆ. ಒಂದು ವೇಳೆ, ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದರೆ, ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿ ನೀವು ಫ್ರಂಟ್ ಲೈನ್ ನೌಕರರು, ಟಿಕೆಟ್ ಕಲೆಕ್ಟರ್‌ಗಳು, ರೈಲು ಅಧೀಕ್ಷಕರನ್ನು ಸಂಪರ್ಕಿಸಲು ಅವಕಾಶವಿದೆ.

* ನಿಮ್ಮ ಸಾಮಾನು ಸರಂಜಾಮುಗಳನ್ನು ಒಂದು ತಿಂಗಳು ನಿಲ್ದಾಣದಲ್ಲಿ ಇರಿಸಬಹುದು :
ದೇಶದ ಎಲ್ಲಾ ಪ್ರಮುಖ ರೈಲು ನಿಲ್ದಾಣಗಳಲ್ಲಿ ಕ್ಲೋಕ್‌ರೂಮ್‌ಗಳು ಮತ್ತು ಲಾಕರ್ ರೂಮ್‌ಗಳು ಇರಲಿದ್ದು, ಈ ಲಾಕರ್ ಕೊಠಡಿಗಳು ಮತ್ತು ಕ್ಲೋಕ್‌ರೂಮ್‌ಗಳಲ್ಲಿ ನಿಮ್ಮ ವಸ್ತುಗಳನ್ನು ನೀವು ಗರಿಷ್ಠ 1 ತಿಂಗಳವರೆಗೆ ಇರಿಸಲು ಅವಕಾಶವಿದೆ. ಆದರೆ ಇದಕ್ಕೆ ಶುಲ್ಕಗಳನ್ನು ಪಾವತಿ ಮಾಡಬೇಕಾಗುತ್ತದೆ.

ಇದನ್ನೂ ಓದಿ: Ration Card: ಕೊನೆಗೂ ಕ್ಯಾನ್ಸಲ್ ಆದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ ಮಾಡಿದ ಸರ್ಕಾರ – ನಿಮ್ಮ ಹೆಸರುಂಟಾ ಎಂದು ಹೀಗೆ ಚೆಕ್ ಮಾಡಿ !!

Leave A Reply

Your email address will not be published.