HSRP ನಂಬರ್ ಪ್ಲೇಟ್ ಹಾಕಲು ಈ ದಿನವೇ ಕೊನೆ ದಿನಾಂಕ- ಇಲ್ಲಾಂದ್ರೆ ಬೀಳಲಿದೆ ಭಾರೀ ಮೊತ್ತದ ದಂಡ

Karnataka vehicle rules high security registration plate rules hsrp number plate implementation quickly

HSRP Number Plate: ವಾಹನ ಮಾಲಿಕರೇ ಗಮನಿಸಿ- HSRP ನಂಬರ್ ಪ್ಲೇಟ್ (HSRP Number Plate)ಅಳವಡಿಸಲು ಸರ್ಕಾರದಿಂದ ಮಹತ್ವದ ಘೋಷಣೆ ಮಾಡಲಾಗಿದೆ. 2019ರ ಏಪ್ರಿಲ್ ತಿಂಗಳಿಗಿಂತಲೂ ಮೊದಲು ನೋಂದಾಯಿಸಲಾಗಿರುವ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ಗಳ(HSRP Number Plate)ಅಳವಡಿಕೆಯ ಗಡುವು ನವೆಂಬರ್ 17ರಂದು ಮುಗಿಯಲಿದೆ.

ರಾಜ್ಯದಲ್ಲಿ ಎಲ್ಲ ಹಳೆಯ ವಾಹನಗಳಿಗೆ (Old Vehicles) ಅತಿ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್ ನಂಬರ್ ಪ್ಲೇಟ್(High Security Registration Number Plate- HSRP) ಕಡ್ಡಾಯವಾಗಿ ಅಳವಡಿಸಬೇಕೆಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗಾಗಿ (HSRP Number Plate) ಅರ್ಜಿ ಸಲ್ಲಿಸಲು ಕೇವಲ ನಾಲ್ಕು ದಿನಗಳು ಬಾಕಿ ಉಳಿದಿದೆ. ಹೀಗಾಗಿ ಈ ಗಡುವಿನೊಳಗೆ ವಾಹನ ಮಾಲೀಕರು ಹೊಸ ಮಾದರಿಯ ನಂಬರ್ ಪ್ಲೇಟ್ ಅಳವಡಿಸದೆ ಹೋದರೆ 500ರಿಂದ 1000 ರೂ. ದಂಡವನ್ನು ಕಟ್ಟಬೇಕಾಗುವುದು ಹುಷಾರ್!!

ಎಚ್ಎಸ್ಆರ್ಪಿ ಯಾಕೆ ಮತ್ತು ವಿಶೇಷತೆ ಏನು?
* HSRP ನೋಂದಣಿ ಫಲಕಗಳು ಅತ್ಯಂತ ಸುರಕ್ಷಿತವಾಗಿದ್ದು ಇವುಗಳನ್ನು ಬದಲಿಸಲು ಇಲ್ಲವೇ ವಿರೂಪಗೊಳಿಸುವುದಕ್ಕೆ ಸಾಧ್ಯವಿಲ್ಲ.
*ರಸ್ತೆಗಳಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ಗುರುತಿಸಲು ಸಹಕರಿಸುತ್ತದೆ.
* ನೋಂದಣಿ ಫಲಕಗಳಲ್ಲಿ ಏಕರೂಪತೆ ಖಚಿತಪಡಿಸಿಕೊಳ್ಳಲು ಸಹಕರಿಸುತ್ತದೆ.
* ನಂಬರ್ ಪ್ಲೇಟ್ನ ಒಂದು ಬದಿಯಲ್ಲಿ ನೀಲಿ ಬಣ್ಣದ ಚಕ್ರವನ್ನು ಹೋಲುವ ಹಾಲೋಗ್ರಾಮ್ ಇರಲಿದ್ದು, ಇದರ ಕೆಳಗಡೆ 10 ನಂಬರಿನ ವಿಶಿಷ್ಟ ಗುರುತಿನ ಸಂಖ್ಯೆ ಇರುತ್ತದೆ. ಅಂಕಿಗಳ ಮೇಲೆ ಆಂಗ್ಲಭಾಷೆಯಲ್ಲಿ ‘ಇಂಡಿಯಾ’ ಎಂಬ ಪದ ಬಳಕೆ ಮಾಡಲಾಗುತ್ತದೆ.
* ಸುರಕ್ಷಿತ ನಂಬರ್ ಪ್ಲೇಟ್ನಲ್ಲಿ ನಂಬರ್ ಪ್ಲೇಟ್ ನಕಲು ಮಾಡುವುದು ಸಾಧ್ಯವಿಲ್ಲ.
* ವಾಹನಗಳ ಕಳವು, ಅವುಗಳನ್ನು ಬಳಸಿ ಅಪರಾಧ ಚಟುವಟಿಕೆ ಮಾಡಿದ ಸಂದರ್ಭ ಎಚ್ಎಸ್ಆರ್ಪಿ ಮೂಲಕ ಸುಲಭವಾಗಿ ಪತ್ತೆ ಹಚ್ಚಬಹುದು.

HSRP ಮುಖ್ಯ ಅಂಶಗಳು:
* ಕರ್ನಾಟಕ ಸಾರಿಗೆ ಇಲಾಖೆ ವೆಬ್ಸೈಟ್ ಅಥವಾ ಎಸ್ಐಎಎಂ ವೆಬ್ಸೈಟ್ ಮೂಲಕ HSRP ಅಳವಡಿಕೆಗೆ ಕಾಯ್ದಿರಿಸಿ.
* ಯಾವುದೇ ತೆರೆದ ಮಾರುಕಟ್ಟೆಯ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹೊಲೊಗ್ರಾಮ್ / IND ಮಾರ್ಕ್ ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ HSRP, ಒಂದೇ ರೀತಿಯ ಪ್ಲೇಟ್ಗಳು, ಸ್ಮಾರ್ಟ್ ನಂಬರ್ ಪ್ಲೇಟ್ಗಳನ್ನು ಅಳವಡಿಸುವುದಕ್ಕೆ ಅವಕಾಶವಿಲ್ಲ.
* HSRP ಅಳವಡಿಸದೆ ಇದ್ದಲ್ಲಿ ವಾಹನ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು, ನಮೂದು, ರದ್ದತಿ, ಅರ್ಹತಾಪತ್ರ ನವೀಕರಣ ಇತ್ಯಾದಿ ಯಾವುದೇ ಸೇವೆಗಳಿಗೆ ಅವಕಾಶವಿರದು.
* ಶುಲ್ಕ ಪಾವತಿಸಿರುವ ಪ್ರಕರಣದಲ್ಲಿ HSRP ಅಳವಡಿಕೆಗೆ ನಿಗದಿತ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾದ ಎಚ್ಎಸ್ಆರ್ಪಿ (HSRP)ರಸೀದಿಯನ್ನು ಪ್ರಸ್ತುತಪಡಿಸುವ ವಾಹನಗಳಿಗೆ ಯಾವುದೇ ದಂಡವಿರುವುದಿಲ್ಲ.

ಇದನ್ನೂ ಓದಿ: Varthur Santhosh: ಅರೇ… ವರ್ತೂರು ಸಂತೋಷ್ ಗೆ ಮದ್ವೆ ಆಗಿದ್ಯಾ ?! ವೈರಲ್ ಆಗ್ತಿದೆ ನೋಡಿ ಫೋಟೋಸ್

Leave A Reply

Your email address will not be published.