Aadhaar card lost: ಸಾರ್ವಜನಿಕರೇ ಎಚ್ಚರ.. !! ಆಧಾರ್ ಕಾರ್ಡ್ ಕಳೆದುಹೋದರೆ ಯಾವುದೇ ಕಾರಣಕ್ಕೂ ಈ ಕೆಲಸ ಮಾಡ್ಬೇಡಿ !!

Aadhar Card update news if you lost your Aadhar Card don't do this work

Aadhaar card lost: ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಪಡೆಯುವಲ್ಲಿ ಆಧಾರ್ ಕಾರ್ಡ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೇಶಾದ್ಯಂತ ಪ್ರತಿಯೊಬ್ಬ ನಾಗರೀಕರಿಗೂ ಕೂಡ ಇದೊಂದು ಪ್ರಮುಖ ದಾಖಲೆಯಾಗಿದೆ. ಹೀಗಿರುವಾಗ ಎಷ್ಟೇ ಜಾಗರೂಕರಾಗಿದ್ರೂ ಆಧಾರ್ ಕಾರ್ಡ್ ಕಳೆದುಹೋಗುತ್ತದೆ(Aadhaar card lost). ಇಂತಹ ಸಮಯದಲ್ಲಿ ಯಾರೂ ಕೂಡ ತಪ್ಪಿಯೂ ಈ ಒಂದ ಕೆಲಸವನ್ನು ಮಾಡಬೇಡಿ.

ಹೌದು, ಎಲ್ಲಾ ಸರ್ಕಾರಿ ಕೆಲಸಗಳಿಗೂ ಪ್ರಮುಖ ದಾಖಲೆಯಾಗಿರುವ ಆಧಾರ್ ಕಾರ್ಡ್ ಕುರಿತು ಎಷ್ಟೇ ಎಚ್ಚರ ವಹಿಸಿದ್ರೂ, ಎಷ್ಟೇ ಜಾಗರೂಕರಾಗಿದ್ರೂ ಒಮ್ಮೊಮ್ಮೆ ಕಳೆದುಹೋಗುವುದುಂಟು. ಆವೇಳೆ ದಯವಿಟ್ಟು ತಪ್ಪಿಯೂ ಈ ಒಂದು ಕೆಲಸವನ್ನು ಮಾಡಬೇಡಿ. ಹಾಗಿದ್ರೆ ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ನಾವಿಲ್ಲಿ ಹೇಳಿದ್ದೇವೆ ನೋಡಿ.

ಏನು ಮಾಡಬೇಕು?
ಆಧಾರ್ ಕಾರ್ಡ್ ಕಳೆದುಹೋದಾಗ ವೇಳೆ ಗಲಿಬಿಗೊಳ್ಳದೆ ನೀವು ಮೊದಲು ಅದರ ಬಗ್ಗೆ ದೂರು ನೀಡಬೇಕಾಗುತ್ತದೆ. ನೀವು ಇದನ್ನು 1947 ಸಂಖ್ಯೆಗೆ ವರದಿ ಮಾಡಬಹುದು. ಇದಲ್ಲದೆ, ನೀವು ಆಧಾರ್ನ ಆನ್ಲೈನ್ ಪೋರ್ಟಲ್ನಲ್ಲಿ ಕಾರ್ಡ್ ಕಳೆದುಕೊಂಡ ಬಗ್ಗೆ ಮಾಹಿತಿಯನ್ನು ನೀಡಬಹುದು. ಹೀಗೆ ಮಾಡುವುದರಿಂದ ನಿಮ್ಮ ಆಧಾರ್ ಕಾರ್ಡ್ ಯಾವುದೇ ಕಾರಣಕ್ಕೂ ಮಿಸ್ ಯೂಸ್ ಆಗುವುದಿಲ್ಲ.

ಏನು ಮಾಡಬಾರದು?
• ಆಧಾರ್ ಕಾರ್ಡ್ ಕಳೆದುಹೋದರೆ ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
• ಆಧಾರ್ ಗೆ ಸಂಬಂಧಿಸಿದ ಮಾಹಿತಿಯನ್ನು ಯಾವುದೇ ಸಾರ್ವಜನಿಕ ಕಂಪ್ಯೂಟರ್ ನಲ್ಲಿ ಹಾಕಬೇಡಿ.
• ಯಾವುದೇ ಅಪರಿಚಿತ ವ್ಯಕ್ತಿಗೆ ಆಧಾರ್ ಗೆ ಸಂಬಂಧಿಸಿದ ಮಾಹಿತಿಯನ್ನು ನೀಡಬೇಡಿ.
ಈ ಮಾಹಿತಿಯನ್ನು ನಿಮಗೆ ಮೋಸ ಮಾಡಲು ಬಳಸಬಹುದು. ಹಾಗಾಗಿ ಸದಾ ಈ ವಿಚಾರದ ಕುರಿತು ಸದಾ ಎಚ್ಚರದಿಂದಿರಿ.

ಆಧಾರ್ ನಂಬರ್ ಲಾಕ್ ಮಾಡಿ:
ಆಧಾರ್ ಕಾರ್ಡ್ ಕಳೆದು ಹೋದರೆ ಮೊದಲು ಆಧಾರ್ ಸಂಖ್ಯೆಯನ್ನ ಲಾಕ್ ಮಾಡಬೇಕು. ನಂತರ ಅನ್​ಲಾಕ್ ಮಾಡುವ ಮೂಲಕ ಬಳಸಬಹುದಾಗಿದೆ. ಈ ಬಗ್ಗೆ ಯುಐಡಿಐಡಿ ಅಧಿಕೃತ ವೆಬ್​ಸೈಟ್​ನಲ್ಲಿ ಮಾಹಿತಿ ನೀಡಲಾಗಿದೆ
• ಮೊದಲಿಗೆ https://resident.uidai.in/ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.
• ನಂತರ ‘ನನ್ನ ಆಧಾರ್’ ಆಯ್ಕೆಯಲ್ಲಿ ‘ಆಧಾರ್ ಸರ್ವೀಸ್’ ಸೆಲೆಕ್ಟ್ ಮಾಡಿ.
• ಇಲ್ಲಿ ಲಾಕ್​ ಅನ್​ಬಯೋಮೆಟ್ರಿಕ್ ಆಧಾರ್ ಸರ್ವೀಸ್ ಆಯ್ಕೆ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ.
• 12 ಅಂಕಿಯ ಆಧಾರ್ ಸಂಖ್ಯೆಯನ್ನ ನಮೂದಿಸುವ ಮೂಲಕ ಲಾಗ್ ಇನ್ ಆಗಿ.
• ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಸೆಂಡ್ ಓಟಿಪಿ ಆಯ್ಕೆ ಮೇಲೆ ಕ್ಲಿಕ್ ಮಾಡಿ.
• ಒಟಿಪಿ ಹಾಕಿದ ನಂತರ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡುವ ಆಯ್ಕೆ ಕಾಣಿಸುತ್ತದೆ.
• ಈಗ ಬಯೋಮೆಟ್ರಿಕ್ ಡೇಟಾವನ್ನು ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಲಾಕ್ ಆಗುತ್ತದೆ.

ಆಧಾರ್ ಸಂಖ್ಯೆ ಪಡೆಯಲು ಹೀಗೆ ಮಾಡಿ:
ಹೀಗೆ ಮಾಡಿ
ಯುಐಡಿಎಐ ಪೋರ್ಟಲ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ನಿಮ್ಮ ಆಧಾರ್ ಕಾರ್ಡ್ ಅನ್ನು ಕಳೆದುಕೊಂಡಿದ್ದರೆ ಅದನ್ನು ಹಿಂಪಡೆಯಲು ಅಥವಾ ಹೊಸದನ್ನು ಪಡೆಯಲು ಈ ವಿಧಾನವನ್ನು ಅನುಸರಿಸಬೇಕು.
• ಆಧಾರ್ ಸೇವೆಯನ್ನು ಬಳಸಿಕೊಂಡು ತನ್ನ ಆಧಾರ್ ಸಂಖ್ಯೆಯನ್ನು ಕಂಡುಹಿಡಿಯಬಹುದು ಮತ್ತು ಕಳೆದುಹೋದ ಯುಐಡಿ / ಇಐಡಿ (Enrolment ID)ಯನ್ನು ಮರಳಿ ಪಡೆಯಬಹುದು. ಅದಕ್ಕಾಗಿ ವೆಬ್‌ಸೈಟ್‌ https://myaadhaar.uidai.gov.in/ಗೆ ಭೇಟಿ ನೀಡಿ
• ಸಹಾಯವಾಣಿ 1947ಕ್ಕೆ ಕರೆ ಮಾಡಿದರೆ ಸಂಪರ್ಕ ಕೇಂದ್ರದ ಏಜೆಂಟ್ ಇಐಡಿ ಸಂಖ್ಯೆಯನ್ನು ಪಡೆಯಲು ಸಹಾಯ ಮಾಡುತ್ತಾರೆ. ಈ ಇಐಡಿ ಸಂಖ್ಯೆಯ ಸಹಾಯದಿಂದ ಇ-ಆಧಾರ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.
• 1947 ನಂಬರ್‌ಗೆ ಕರೆ ಮಾಡುವ ಮೂಲಕ ಐವಿಆರ್‌ಎಸ್‌ (IVRS) ವ್ಯವಸ್ಥೆಯಲ್ಲಿ ಇಐಡಿ ಸಂಖ್ಯೆಯಿಂದ ಆಧಾರ್ ಸಂಖ್ಯೆಯನ್ನು ಪಡೆಯಬಹುದು

ಇದನ್ನೂ ಓದಿ: Bengaluru: ರಾತ್ರಿ ವೇಳೆ ಮೂತ್ರ ಮಾಡಿಲು ಕಾರ್ ನಿಲ್ಲಿಸಿದ ವ್ಯಕ್ತಿ- ಮಂಗಳಮುಖಿಯರಿಂದ ನಡೆದೇ ಬಿಡ್ತು ಘೋರ ಕೃತ್ಯ!!

Leave A Reply

Your email address will not be published.