UGC ಸ್ಕೇಲ್ ನಲ್ಲಿ ಪೆನ್ಶನ್ ಪಡೆಯೋರಿಗೆ ಭರ್ಜರಿ ಗುಡ್ ನ್ಯೂಸ್- ದೀಪಾವಳಿ ದಿನವೇ ಸರ್ಕಾರದಿಂದ ಹೊಸ ಘೋಷಣೆ

Karnataka government order revision of pension for retired workers drawing Pension in ugc pay scale

UGC Pay Scale: ರಾಜ್ಯ ಸರ್ಕಾರ( State Government)ಯುಜಿಸಿ ವೇತನ ಶ್ರೇಣಿಯಲ್ಲಿ(UGC Pay Scale)ಪಿಂಚಣಿ ಪಡೆಯತ್ತಿರುವ ನಿವೃತ್ತ ಸಿಬ್ಬಂದಿಗಳಿಗೆ (Retired Workers)ಪಿಂಚಣಿ ಪರಿಷ್ಕರಣೆಗೊಳಿಸಿ ಆದೇಶ ಹೊರಡಿಸಿದೆ.

ಕಾಲೇಜು ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕರು ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಸರ್ಕಾರಿ ಆದೇಶದನ್ವಯ 0:01/04/2012 31/12/2015ರ ಅವಧಿಯಲ್ಲಿ ನಿವೃತ್ತಿ ಹೊಂದಿದ್ದು ಯುಜಿಸಿ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿದ್ದ ಸಿಬ್ಬಂದಿಗಳಿಗೆ ಪಿಂಚಣಿ ಸೌಲಭ್ಯಗಳ ಲೆಕ್ಕಾಚಾರಕ್ಕೆ Corrective Factor ಅನ್ನು 1.839 ಗೆ ಬದಲಿಗೆ 1.6 ಎಂದು ಪರಿಗಣಿಸಿ ಪಿಂಚಣಿ ಪರಿಷ್ಕರಣೆ ಕುರಿತು ಕ್ರಮ ಕೈಗೊಳ್ಳುವ ಸೂಚನೆ ನೀಡಲಾಗಿದೆ.

ಪ್ರಾದೇಶಿಕ ಜಂಟಿ ನಿರ್ದೇಶಕರುಗಳಿಗೆ ಸೂಚನೆ ನೀಡಲಾಗಿದ್ದು, ತಮ್ಮ ಕಛೇರಿ ವ್ಯಾಪ್ತಿಯಲ್ಲಿ ಬರುವ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ, ಯುಜಿಸಿ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿದ್ದು, ದಿನಾಂಕ:01/04/2012 ರಿಂದ 31/12/2015ರ ಅವಧಿಯಲ್ಲಿ ನಿವೃತ್ತಿ ಹೊಂದಿರುವ ಸಿಬ್ಬಂದಿಗಳ ಮಾಹಿತಿಗಳನ್ನು ಈ ಸುತ್ತೋಲೆಯ ಜೊತೆಗೆ ಲಗತ್ತಿಸಿರುವ ನಮೂನೆಯಲ್ಲಿ MS Excel ತಂತ್ರಾಂಶದಲ್ಲಿ (ಆಂಗ್ಲಭಾಷೆಯಲ್ಲಿ) ಭರ್ತಿ ಮಾಡಿ ಸದರಿ ಸಿಬ್ಬಂದಿಗಳ ಸೇವಾಪುಸ್ತಕ ಹಾಗೂ ಮಹಾಲೇಖಪಾಲರ ಪಿಂಚಣಿ ಮಂಜೂರಾತಿ ಆದೇಶದ ಪ್ರತಿಗಳೊಂದಿಗೆ ಈ ಕಛೇರಿಗೆ 27/11/2023ರೊಳಗಾಗಿ ಸಲ್ಲಿಸಲು ಸೂಚಿಸಲಾಗಿದೆ. MS Excel ತಂತ್ರಾಂಶದಲ್ಲಿ ನಮೂದಿಸಿರುವ ಮಾಹಿತಿಗಳ ತಂತ್ರಾಂಶದಲ್ಲಿ ನಮೂದಿಸಲಾಗಿರುವ ಮಾಹಿತಿಗಳ ಸಾಫ್ಟ್ ಪ್ರತಿಯನ್ನು dce.pension@gmail.com ಗೆ ರವಾನಿಸಲು ಸೂಚಿಸಲಾಗಿದೆ. ಸರ್ಕಾರದ ಆದೇಶದ ಅನುಸಾರ ನಿಗದಿತ ದಿನಾಂಕದೊಳಗಾಗಿ ಮಾಹಿತಿಗಳನ್ನು ಹಾಗೂ ದಾಖಲಾತಿಗಳನ್ನು ಈ ಕಛೇರಿಗೆ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಏಕಾಏಕಿ ಕುಸಿದ ನಿರ್ಮಾಣ ಹಂತದಲ್ಲಿದ್ದ ಸುರಂಗ – 40 ಮಂದಿ ಕಾರ್ಮಿಕರು ಸಿಲುಕಿರುವ ಶಂಕೆ!!

Leave A Reply

Your email address will not be published.