Two Wicks in Diya: ದೀಪಗಳಿಗೆ ಎರಡು ಬತ್ತಿ ಹಾಕಿ ಬೆಳಗಿಸೋದು ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಷ್ಯ!!

Diya Interesting news do you know why light the lamps with two wicks

Two Wicks in Diya: ಭಾರತ ಮಾತ್ರವಲ್ಲದೇ, ದೀಪಗಳ ಹಬ್ಬ ದೀಪಾವಳಿಯನ್ನು ಪ್ರಪಂಚದಾದ್ಯಂತ ಇರುವ ಭಾರತೀಯರು ಸಂಭ್ರಮದಿಂದ ಆಚರಿಸುವ ಹಬ್ಬ. ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ದೀಪಾವಳಿಗೆ ಮಹತ್ವದ ಸ್ಥಾನವಿದೆ. ದೀಪಗಳ ಹಬ್ಬ ಕತ್ತಲೆಯನ್ನು ಹೊಡೆದೋಡಿಸಿ, ಬೆಳಕನ್ನು ಚೆಲ್ಲುವ ದೀಪಗಳು ನೋಡಲು ಚೆಂದ. ಮುಖ್ಯವಾಗಿ ಜ್ಞಾನದ ಸಂಕೇತವಾದ ದೀಪಗಳನ್ನು ಬೆಳಗಿಸುವಾಗ ಪ್ರತಿ ದೀಪಕ್ಕೂ ಎರಡು ಬತ್ತಿಗಳನ್ನು ಹಾಕಬೇಕು (Two Wicks in Diya) ಎಂಬ ನಿಯಮ ಇದೆ. ಇದಕ್ಕೊಂದು ವಿಶೇಷ (Interesting Fact) ಕಾರಣವೂ ಇದೆ.

ಮುಖ್ಯವಾಗಿ ದೇವರ ಮನೆಗೆ ದೀಪದ ಬೆಳಕೇ ಶೋಭೆ. ಸಾಮಾನ್ಯವಾಗಿ ಎರಡು ದೀಪಗಳನ್ನು ದೇವರ ಮುಂದೆ ಬೆಳಗಿಸಲಾಗುತ್ತದೆ. ಪ್ರತಿ ದೀಪಕ್ಕೂ ಎರಡು ಬತ್ತಿಯ ಕಾರಣ ಇಷ್ಟೇ, ಎರಡು ದೀಪ ಅಥವಾ ಎರಡು ಬತ್ತಿ ಪತಿ ಪತ್ನಿಯ ಸ್ವರೂಪವಾಗಿದೆ ಎನ್ನಲಾಗುತ್ತದೆ.

ಪತಿ ಪತ್ನಿ ಜೊತೆಗಿದ್ದರೆ ಮನೆ ಎಂಬ ಭಾವನೆ ಮೂಡುತ್ತದೆ. ಮನೆಯಲ್ಲಿ ಗಂಡು ಹೆಣ್ಣು ಪ್ರತ್ಯೇಕ ವಾಸ ಮಾಡುತ್ತಿದ್ದರೆ ಅದು ಮನೆ ಆಗಿರಲು ಸಾಧ್ಯವಿಲ್ಲ. ಹಾಗಾಗಿ ಮನೆಯ ಸಂಪೂರ್ಣ ಅಭಿವೃದ್ಧಿ ಯ ಹೊಣೆ ಪತಿ ಪತ್ನಿಯದ್ದೇ ಆಗಿರುತ್ತದೆ.

ನಾವು ದೇವರ ಮುಂದೆ ಬೆಳಗೋ ಎರಡು ದೀಪಗಳು, ದೀಪದಲ್ಲಿ ಉರಿಯುವ ಎರಡು ಬತ್ತಿಗಳು ಕುಟುಂಬಕ್ಕಾಗಿ ತ್ಯಾಗ, ಸೇವೆಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ದೀಪದ ಬೆಳಕು ಪತಿ ಪತ್ನಿ ಯ ಪ್ರೀತಿಯ ಸಂಕೇತ. ಬೆಳಗುವ ದೀಪ ಹೇಗೆ ನೋಡಲು ಸುಂದರವೊ, ಹಾಗೆ ಪತಿ ಪತ್ನಿಯರ ಪ್ರೀತಿ ಬಾಂಧವ್ಯ ಕುಟುಂಬದ ಶ್ರೇಯಸ್ಸಿಗೆ ಕಾರಣ. ದೇವರಲ್ಲಿ ತಮ್ಮ ಈ ಬಾಂಧವ್ಯ ಗಟ್ಟಿಯಾಗಿರಲಿ, ಕುಟುಂಬ ವೃದ್ಧಿಯಾಗಲಿ ಎಂಬ ಭಾವವೇ ಎರಡು ಬತ್ತಿ ಜೊತೆಗೆ ದೀಪ ಬೆಳಗುವುದರ ಹಿಂದಿನ ಮಹತ್ವ ಆಗಿದೆ .

ಇದನ್ನೂ ಓದಿ: ರೈತರಿಗೂ ಗುಡ್ ನ್ಯೂಸ್ ಕೊಟ್ಟ ಬಿಜೆಪಿ- ಇನ್ಮುಂದೆ ಭರ್ಜರಿ ಬೆಲೆಗೆ ಖರೀದಿಯಾಗುತ್ತೆ ನೀವು ಬೆಳೆದ ಈ ಬೆಳೆಗಳು

Leave A Reply

Your email address will not be published.