Satish jarakiholi: ಸಿಎಂ ಸ್ಥಾನ ವಿಚಾರ- ಹೊಸ ಬಾಂಬ್ ಸಿಡಿಸಿದ ಸತೀಶ್ ಜಾರಕಿಹೊಳಿ !!

Karnataka politics news Minister Satish jarakiholi statement about Karnataka Chief Minister post

Satish jarakiholi: ರಾಜ್ಯದಲ್ಲಿ ಈಗಾಗಲೇ ಸಿಎಂ ಬದಲಾವಣೆ ವಿಚಾರ ಬಹಳಷ್ಟು ಸುದ್ದಿ ಮಾಡುತ್ತಿದೆ. ಡಿಕೆಶಿ ಹಾಗೂ ಸಿದ್ದರಾಮಯ್ಯನವರ ಬಣಗಳು ಇದಕ್ಕಾಗಿ ಕಚ್ಚಾಡುತ್ತಿವೆ. ಆದರೂ ಈ ನಡುವೆ ದಲಿತ ಸಿಎಂ ಎಂಬ ಕೂಗು ಕೂಡ ಕೇಳಿಬರುತ್ತದೆ. ಇದರೆಡೆಯಲ್ಲೇ ಸತೀಶ್ ಜಾರಕಿಹೊಳಿಯವರು(Satish jarakiholi) ಹೊಸ ಬಾಂಬ್ ಅನ್ನು ಸಿಡಿಸಿದ್ದಾರೆ.

ಹೌದು, ಕೆಲ ದಿನಗಳ ಹಿಂದಷ್ಟೇ ಸಿಎಂ ಬದಲಾವಣೆ ವಿಚಾರ ಬಹಳಷ್ಟು ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ದಲಿತಲಿಗೂ ಸಿಎಂ ಪಟ್ಟ ಬೇಕು ಎಂಬಂತಹ ವಿಚಾರ ಕೂಡ ಮುನ್ನಲೆಗೆ ಬಂದಿತ್ತು. ಈ ಕುರಿತಾಗಿ ವಾಲ್ಮೀಕಿ ಸಮುದಾಯದ ಸ್ವಾಮಿಗಳು ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಸಮಾವೇಶವನ್ನು ಕೂಡ ಮಾಡಿದ್ದರು. ಆದರೆ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ಸತೀಶ್ ಜಾರಕಿಹೊಳಿ ಅವರು ನೀಡಿರಲಿಲ್ಲ. ಆದರೆ ಈಗ ಇದ್ದಕ್ಕಿದ್ದಂತೆ 2028 ರ ಚುನಾವಣೆಯಲ್ಲಿ ಸಿಎಂ ಪಟ್ಟ ನನಗೆ ಬೇಕು ಎಂದು ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಅಂದಹಾಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ ಅವರೊಂದಿಗೆ ರಾಜ್ಯದಲ್ಲಿ ಎದ್ದಿರುವ ದಲಿತ ಮುಖ್ಯಮಂತ್ರಿ ಕೂಗು ಹಾಗೂ ವಾಲ್ಮೀಕಿ ಸ್ವಾಮೀಜಿ ಅವರು ತಾವು ಮುಂದೆ ಸಿಎಂ ಆಗುವುದಾಗಿ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಯನ್ನು ಕೇಳಿದರು. ಆಗ ಅದಕ್ಕೆ ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ನಾನು 2028ರ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ವೇಳೆಗೆ ಮುಖ್ಯಮಂತ್ರಿ ಸ್ಥಾನವನ್ನು ಕ್ಲೇಮ್‌ ಮಾಡುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಇದನ್ನೂ ಓದಿ: Bank of Baroda: ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆ ಹೊಂದಿದ್ದೀರಾ ?! ಹಾಗಿದ್ರೆ ಇಲ್ಲಿದೆ ನಿಮಗೊಂದು ಭರ್ಜರಿ ಸಿಹಿ ಸುದ್ದಿ

Leave A Reply

Your email address will not be published.