KEA Exam Irregularity: KEA ಪರೀಕ್ಷೆ ಅಕ್ರಮ – ಅರೇ.. ಕಬ್ಬಿನ ಗದ್ದೆಯಲ್ಲಿ ಅಭ್ಯರ್ಥಿಗಳು ಮಾಡಿದ್ದೇನು ಗೊತ್ತಾ ?!
Karnataka Education news kEA exam irregularity Bluetooth set distributed in sugarcane field of kEA exam
KEA Exam Irregularity : KEA ಪರೀಕ್ಷೆಗಳಲ್ಲಿ ನಡೆಯತ್ತಿರುವ ಅಕ್ರಮ ರಾಜ್ಯಾದ್ಯಂತ ಭಾರೀ ಸದ್ದಮಾಡುತ್ತಿದೆ. ನಿನ್ನೆ ತಾನೆ ಇದರ ಕಿಂಗ್ ಪಿನ್ ತಪ್ಪಿಸಿಕೊಂಡು ಓಡಿದಂತಹ ದೃಶ್ಯ ಕೂಡ ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದ್ದು ಬಹಳಷ್ಟು ವಿವಾದಕ್ಕೆ ಕಾರಣವಾಗಿದೆ. ಆದರೆ ಈ ವಿಚಾರಕ್ಕೆ ಇದೀಗ ‘ಕಬ್ಬಿನ ಗದ್ದೆ’ ಎಂಟ್ರಿ ಕೊಟ್ಟಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) FDA ಪರೀಕ್ಷೆಯಲ್ಲಿ ಅಕ್ರಮ(KEA Exam Irregularity) ನಡೆಯುತ್ತಿರುವ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಅಭ್ಯರ್ಥಿಗಳ ಭವಿಷ್ಯದಲ್ಲಿ ಆಟವಾಡುತ್ತಿರುವ ಪಾಪಿಗಳನ್ನು ಹೆಡೆಮುರಿ ಕಟ್ಟಲು ಪೋಲೀಸ್ ಪಡೆಗಳು ಸಜ್ಜಾಗಿವೆ. ಇದೀಗ ಅಕ್ರಮ ಮೂಲದ ಬೆನ್ನು ಹತ್ತಿರುವ ಪೋಲೀಸರಿಗೆ ಸಖತ್ ಹಿಂಟ್ ಸಿಕ್ಕಿದ್ದು ಪರೀಕ್ಷೆಗಾಗಿ ಎರಡ್ಮೂರು ದಿನಗಳ ಮೊದಲೇ ಬ್ಲೂಟೂತ್ ಡಿವೈಸ್‌ಗಳನ್ನು ಹಂಚಿಕೆ ಮಾಡಲು ಕಬ್ಬಿನ ಗದ್ದೆಗಳು ಸ್ಪಾಟ್ ಆಗಿದ್ದವು ಎಂದು ತಿಳಿದುಬಂದಿದೆ.
ಹೌದು, ಅಕ್ರಮ ಆರೋಪದಡಿ, ಯಾದಗಿರಿಯಲ್ಲಿ ಬಂಧಿತ ಕಲಬುರಗಿ ಜಿಲ್ಲೆಯ ಅಫಜಲ್ಪೂರ ಹಾಗೂ ವಿಜಯಪುರ ಜಿಲ್ಲೆ ಸಿಂಧಗಿ ಮೂಲದ 9 ಅಭ್ಯರ್ಥಿಗಳನ್ನು ಹೆಚ್ಚಿನ ವಿಚಾರಣೆಗೆಂದು ಕಸ್ಟಡಿಗೆ ಪಡೆದಿರುವ ಇಲ್ಲಿನ ಪೊಲೀಸರು, ಮಂಗಳವಾರ ಸ್ಥಳ ಮಹಜರಿಗೆ ಕರೆದುಕೊಂಡು ಹೋದಾಗ ಇಂತಹ ಅಂಶವನ್ನು ಆರೋಪಿಗಳು ಬಾಯ್ಬಿಟ್ಟು, ಸ್ಳಳ ತೋರಿಸಿದ್ದಾರೆ. ಕಲಬುರಗಿ ಜಿಲ್ಲೆ ಅಫಜಲ್ಪೂರ ಚವಡಾಪುರ ಮಧ್ಯೆ ನಿರ್ಜನ ಪ್ರದೇಶದಲ್ಲಿ, ಅದೂ ಕಬ್ಬಿನ ಗದ್ದಗಳಲ್ಲಿ ಬ್ಲೂಟೂತ್ ಹಂಚಿಕೆಯಾಗಿದ್ದವು. ಮೊಬೈಲ್ ಮೂಲಕ ಸಂಪರ್ಕಿಸಿದಾಗ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಬ್ಲೂಟೂತ್ ಕೊಟ್ಟಿದ್ದಾರೆಂದು ವಿಚಾರಣೆಯಲ್ಲಿ ಆರೋಪಿಗಳು ತಿಳಿಸಿದ್ದಾರೆಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಅಂತೆಯೇ ಈ ಕುರಿತು ತನಿಖೆ ನಡೆಸುತ್ತಿರುವ ಪೋಲೀಸರು ಅರೋಪಿಗಳನ್ನು ಒಬ್ಬೊಬ್ಬರನ್ನಾಗೆ ಹೆಡೆಮುರಿಕಟ್ಟುತ್ತಿದ್ದಾರೆ. ಅಷ್ಟೊಂದ ಕಾಲಾವಕಾಶ ಇದ್ದರೂ ಓದದೆ ಬಂದು ಈ ರೀತಿ ಅಕ್ರಮ ಎಸಗುವ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಿ, ಮುಂದೆ ಇಂತಹ ಆಲೋಚನೆ ಇರುವವರಿಗೆ ಇದು ಪಾಠವಾಗಲಿ. ಬದುಕು ರೂಪಿಸಿಕೊಳ್ಳಲು ಶ್ರಮ ಪಟ್ಟ ಅಭ್ಯರ್ಥಿಗಳಿಗೆ ನ್ಯಾಯ ದೊರಕಲಿ.
ಇದನ್ನೂ ಓದಿ: Satish jarakiholi: ಸಿಎಂ ಸ್ಥಾನ ವಿಚಾರ- ಹೊಸ ಬಾಂಬ್ ಸಿಡಿಸಿದ ಸತೀಶ್ ಜಾರಕಿಹೊಳಿ !!