LIC Policy: LIC ಈ ಯೋಜನೆಯಡಿ ಪ್ರತಿ ದಿನ 87ರೂ ಇನ್ವೆಸ್ಟ್ ಮಾಡಿ – ಕೊನೆಗೆ ಬರೋಬ್ಬರಿ 11 ಲಕ್ಷ ಪಡೆಯಿರಿ !!
LIC Policy: ಮುಂದಿನ ದಿನಗಳಿಗೆ ಅನುಕೂಲವಾಗಲಿ, ಹಣದ ಅಗತ್ಯತೆ ಇದೆ ಎಂದಾಗ ನಮ್ಮದೇ ಒಂದು ಪುಟ್ಟ ಸೇವಿಂಗ್ಸ್ ಇರಲಿ ಎಂದು ನಾವು ಮಾಡವ ಇನ್ವೆಸ್ಟ್ಮೆಂಟ್ ಆಗಿದೆ. ಹೀಗಾಗಿ ಜನಸಾಮಾನ್ಯರು ಬ್ಯಾಂಕ್, ಅಂಚೆ ಕಚೇರಿ ಹಾಗೂ LIC(ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್) ಮೂಲಕ ವಿವಿಧ ಹೂಡಿಕೆ ಆಯ್ಕೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಅಂತೆಯೇ ಈ ಸಂಸ್ಥೆಗಳು ಜನರ ಅನುಕೂಲಕ್ಕಾಗಿ ಹಲವಾರು ಸ್ಕೀಮ್ ಗಳನ್ನು ಜಾರಿಗೊಳಿಸಿವೆ. ಅಂತೆಯೇ ಇದೀಗ LIC ಯಿಂದ ಹೊಸ ಯೋಜನೆಯೊಂದು ಜಾರಿಯಾಗಿದ್ದು, ಮಹಿಳಾ ಹೂಡಿಕೆದಾರರಿಗೆ ಭರ್ಜರಿ ಆಫರ್ ಸಿಕ್ಕಂತಾಗಿದೆ.
ಹೌದು, ಬ್ಯಾಂಕ್, ಪೋಸ್ಟ್ ಆಫೀಸ್ ಹೂಡಿಕೆ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಇಂದು LIC ಪಾಲಿಸಿಯಲ್ಲೇ ಹೂಡಿಕೆ ಮಾಡುವವರು ಹೆಚ್ಚು ಎನ್ನಬಹುದು. ಸದ್ಯ ಈ ಸಂಸ್ಥೆಯು ತನ್ನ ಮಹಿಳಾ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದು LICಯ ಈ ‘ಶಿಲಾ ಯೋಜನೆಯಾಗಿದ್ದು, ಈ ಯೋಜನೆಯಲ್ಲಿ ನೀವು ಪ್ರತಿ ದಿನ 87 ರೂಪಾಯಿ ಹೂಡಿಕೆ ಮಾಡಿದರೆ, 11 ಲಕ್ಷ ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ.
ಏನಿದು ಶೀಲಾ ಆಧಾರ್ ಯೋಜನೆ ಅಂದ್ರೆ?
* ಆಧಾರ್ ಶೀಲಾ ಯೋಜನೆಯು ಮಹಿಳೆಯರಿಗೆ ಆರ್ಥಿಕ ಸಹಾಯ ಒದಗಿಸುತ್ತದೆ. ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿ ಹೂಡಿಕೆದಾರರಾಗಬಹುದು. ಪ್ರತಿದಿನ 87 ರೂಪಾಯಿ ಹೂಡಿಕೆ ಮಾಡುವುದರಿಂದ 11 ಲಕ್ಷದ ವರೆಗಿನ ಲಾಭವನ್ನು ಪಡೆದುಕೊಳ್ಳಬುದು.
* 8 ರಿಂದ 55 ವರ್ಷದ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. 10 ರಿಂದ 20 ಅವಧಿಯನ್ನು ಈ ಯೋಜನೆ ಹೊಂದಿದ್ದು, ಮುಕ್ತಾಯದ ವರ್ಷವೂ 70 ವರ್ಷವಾಗಿರುತ್ತದೆ.
ಉಳಿತಾಯ ಹೇಗೆ?
* 55 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮುಂದಿನ 15 ವರ್ಷಗಳವರೆಗೆ ಪ್ರತಿ ದಿನ 87 ರೂಪಾಯಿ ಡೆಪಾಸಿಟ್ ಮಾಡಿದರೆ, ಮೊದಲ ವರ್ಷದ ಕೊನೆಯಲ್ಲಿ ಒಟ್ಟು ಡೆಪಾಸಿಟ್ 31,755 ರೂಪಾಯಿ ಆಗುತ್ತದೆ.
* ಹತ್ತು ವರ್ಷಗಳ ಅವಧಿಯಲ್ಲಿ, ಡೆಪಾಸಿಟ್ ಮಾಡಿದ ಮೊತ್ತವು 3,17,550 ರೂಪಾಯಿ ಆಗಿರುತ್ತದೆ. ಅಂತಿಮವಾಗಿ, 70 ವರ್ಷವನ್ನು ತಲುಪಿದ ನಂತರ, ವಿಮೆದಾರರು ಒಟ್ಟು 11 ಲಕ್ಷ ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ.
* ಯೋಜನೆಗೆ ಕನಿಷ್ಠ ಪ್ರವೇಶ ವಯಸ್ಸು 8 ವರ್ಷಗಳು
* ಗರಿಷ್ಠ ವಯಸ್ಸಿನ ಮಿತಿ 55 ವರ್ಷಗಳು ಆಗಿದೆ.
ಇದನ್ನು ಓದಿ: Snake Bite: ಹಾವಿನ ದ್ವೇಷ 12 ವರುಷ ಅಂತಾರೆ, ಕಾಟ ನೀಡಿದ ಯುವಕನ ಪ್ರಾಣ ತೆಗೆಯಿತೇ ನಾಗರಹಾವು?