Home latest Odisha: ಉಂಡು ಮಲಗಿದ ಮೇಲೆ ಕೂಡಾ ನಿಲ್ಲದ ಪತಿ ಪತ್ನಿ ಜಗಳ – ಪತಿಯ ಗುಪ್ತಾಂಗಕ್ಕೆ...

Odisha: ಉಂಡು ಮಲಗಿದ ಮೇಲೆ ಕೂಡಾ ನಿಲ್ಲದ ಪತಿ ಪತ್ನಿ ಜಗಳ – ಪತಿಯ ಗುಪ್ತಾಂಗಕ್ಕೆ ಚಾಕು ಹಾಕಿದ ಪತ್ನಿ !

Odisha

Hindu neighbor gifts plot of land

Hindu neighbour gifts land to Muslim journalist

Odisha: ಗಂಡ-ಹೆಂಡತಿ ಮಧ್ಯೆ ಜಗಳ ಉಂಡು ಮಲಗಿದ ನಂತರ ಕಡಿಮೆ ಆಗುವ ಬದಲು ಅದು ತಾರಕಕ್ಕೇರಿ ಪತ್ನಿಯೇ ಪತಿಯ ಗುಪ್ತಾಂಗಕ್ಕೆ ಕೈ ಹಾಕಿದ ಘಟನೆ ವರದಿಯಾಗಿದೆ. ಸಂತ್ರಸ್ತ ವ್ಯಕ್ತಿಯನ್ನು ಪರಮಾನಂದ ಮುದುಲಿ ಎಂದು ಗುರುತಿಸಲಾಗಿದ್ದು, ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಡನ ಸ್ಥಿತಿ ಚಿಂತಾಜನಕವಾಗಿದೆ.

ಘಟನೆಯು ಒಡಿಶಾ(Odisha) ರಾಜ್ಯದ ಅಂಗುಲ್ ಎಂಬಲ್ಲಿ ನಡೆದಿದ್ದು ಗಂಡ ಪರಮಾನಂದ ಮತ್ತು ಪತ್ನಿ ನಡುವೆ ಜಗಳ ಆಗುತ್ತಿತ್ತು. ತನ್ನ ಪತ್ನಿ ತನಗೆ ವಂಚನೆ ಮಾಡಿದ್ದಾಳೆಂದು ಶಂಕಿಸಿ ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು.
ಮೊನ್ನೆ ಭಾನುವಾರ ರಾತ್ರಿ ಪತಿ ಪರಮಾನಂದನು ತನ್ನ ಪತ್ನಿ ಸುಕಾಂತಿಗೆ ವಿವಾಹೇತರ ಸಂಬಂಧ ಇದೆ ಎಂದು ಮತ್ತೊಮ್ಮೆ ಆರೋಪಿಸಿ ಜಗಳ ತೆಗೆದಿದ್ದ. ಆಗ ಕೋಪ ಬಂದು ಭರದಲ್ಲಿ ಪತ್ನಿ ಸುಕಾಂತಿ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಪತಿಯ ಗುಪ್ತಾಂಗವನ್ನು ಕತ್ತರಿಸಿದ್ದಾಳೆ.
ಪರಮಾನಂದನ ಕಿರುಚಾಟವನ್ನು ಕೇಳಿದ ನೆರೆಹೊರೆಯವರು ಅವರ ಮನೆಗೆ ಬಂದು ನೋಡಿದಾಗ ಅವರು ತೀವ್ರ ರಕ್ತಸ್ರಾವದಲ್ಲಿ ಬಿದ್ದು ಹೊರಳಾಡುತ್ತಿರುವುದು ಕಾಣಿಸಿತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ಪರಮಾನಂದ ಪತ್ನಿ ಸುಕಾಂತಿ ಮುದುಳಿಯನ್ನು ಇನ್ನೂ ಪೊಲೀಸರು ಬಂಧಿಸಿಲ್ಲ.
ಈ ಬಗ್ಗೆ ಪೊಲೀಸರು ಇನ್ನೂ ಯಾವುದೇ ದೂರು ಸ್ವೀಕರಿಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Bengalore: ನಟ ದರ್ಶನ್ ಮನೆ ಮುಂದೆ ಕಾರು ನಿಲ್ಸಿದಕ್ಕೆ ಮಹಿಳೆ ಮೇಲೆ ಮನೆಯ ನಾಯಿಯಿಂದ ಅಟ್ಯಾಕ್- ಛೂ ಬಿಟ್ಟದ್ದು ಯಾರು ಗೊತ್ತಾ !!