Lifestyle: ಪುರುಷರೇ ನಿಮಗೂ ತಿಂಗಳಿಗೊಮ್ಮೆ ಮುಟ್ಟಾಗುತ್ತೆ, ಹೇಗಂತೀರಾ? ಶಾಕಿಂಗ್ ನ್ಯೂಸ್!!!
ಮಹಿಳೆಯರಿಗೆ ಹೇಗೆ ತಿಂಗಳು ತಿಂಗಳು ಮಟ್ಟು ಆಗುತ್ತದೆಯೋ ಅದೇ ರೀತಿ ಪುರುಷರೂ ಮುಟ್ಟಾಗ್ತಾರೆ ಎಂಬ ಸಂಗತಿ ನಿಮಗೆ ಗೊತ್ತಾ? ಅಚ್ಚರಿ, ಆಶ್ಚರ್ಯ ಅನ್ನಿಸಿದ್ರೂ ಇದು ಸತ್ಯ ಹಾಗೂ ನಂಬಲೇಬೇಕು. ಕೆಲ ಸಂಶೋಧನೆಗಳಿಂದ ಇದು ಸಾಭೀತಾಗಿದೆ.
ಪುರುಷರ ಮುಟ್ಟಿನ ಬಗ್ಗೆ ಸಮೀಕ್ಷೆಗಳು ಕೂಡ ನಡೆದಿವೆ. ಸರ್ವೆ ಪ್ರಕಾರ, ನಾಲ್ಕರಲ್ಲಿ ಒಬ್ಬ ಪುರುಷರಿಗೆ ಪ್ರತಿ ತಿಂಗಳು ಪಿರಿಯಡ್ಸ್ ಆಗುತ್ತದೆ. ಈ ಸರ್ವೆಯಲ್ಲಿ 2412 ಜನರು ಪಾಲ್ಗೊಂಡಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಅದರಲ್ಲಿ 26 ಪ್ರತಿಶತ ಪುರುಷರು ಮುಟ್ಟಿನ ಲಕ್ಷಣಗಳನ್ನು ಹೊಂದಿರುವುದು ಗಮನಕ್ಕೆ ಬಂದಿದೆ. ಈ ಸಮೀಕ್ಷೆಯಲ್ಲಿ 43 ಪ್ರತಿಶತ ಮಹಿಳೆಯರು ಈ ಸಮಯದಲ್ಲಿ ತಮ್ಮ ಪುರುಷ ಸಂಗಾತಿಯ ನೋವನ್ನು ಕಡಿಮೆ ಮಾಡಲು ಹಲವು ಕ್ರಮ ಮಾಡಿದ್ದಾರೆ.
ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಜನರಲ್ಲಿ ಶೇಕಡಾ 56 ರಷ್ಟು ಪುರುಷರಲ್ಲಿ ಕಿರಿಕಿರಿ ಕಾಣಿಸಿಕೊಂಡಿದೆ. ಶೇಕಡಾ 51ರಲ್ಲಿ ಆಯಾಸ. ಶೇಕಡಾ 47ರಷ್ಟು ಪುರುಷರಲ್ಲಿ ಕಡುಬಯಕೆ, ಶೇಕಡಾ 43ರಷ್ಟು ಪುರುಷರಲ್ಲಿ ಅತಿಯಾದ ಹಸಿವು ಮತ್ತು ಶೇಕಡಾ 43ರಷ್ಟು ಪುರುಷರು ಸಣ್ಣ ಪುಟ್ಟ ವಿಷಯಗಳಿಗೆ ಬೇಸರಿಸಿಕೊಳ್ಳುತ್ತಿರುವ ಲಕ್ಷಣ ಕಂಡು ಬಂದಿದೆಯಂತೆ. ಶೇಕಡಾ 15ರಷ್ಟು ಪುರುಷರಲ್ಲಿ ಹೊಟ್ಟೆ ಉಬ್ಬುವುದು ಮುಂತಾದ ಲಕ್ಷಣಗಳು ಕಂಡುಬಂದಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಮಹಿಳೆಯರ ತರಹ ಪುರುಷರಿಗೆ ಪ್ಯಾಡ್ ಅವಶ್ಯಕತೆಯಿಲ್ಲ. ಆದರೆ ಪುರುಷರ ಮುಟ್ಟು ಹಾಗೂ ಮಹಿಳೆಯರ ಮುಟ್ಟಿಗೆ ಸ್ವಲ್ಪ ವ್ಯತ್ಯಾಸವಿದೆ. ಮಹಿಳೆಯರ ರೀತಿ ಪುರುಷರಿಗೆ ಬ್ಲೀಡಿಂಗ್ ಆಗೋದಿಲ್ಲವಂತೆ. ಇದನ್ನು ಹೊರತುಪಡಿಸಿ ಮುಟ್ಟಿನಲ್ಲಿ ಮಹಿಳೆಯರು ಅನುಭವಿಸುವ ಎಲ್ಲ ಸಮಸ್ಯೆಯನ್ನು ಎದುರಿಸುತ್ತಾರೆ. ಸಂಶೋಧಕರು ಹೇಳುವ ಪ್ರಕಾರ ಇದೊಂದು ಸಹಜವಾದ ಸಂಗತಿ ಎಂದು ಹೇಳಿದ್ದಾರೆ. ಪುರುಷರಲ್ಲಿ ಹಾರ್ಮೋನ್ ಬದಲಾವಣೆ ಈ ಸಮಯದಲ್ಲಿ ಸಂಭವಿಸುತ್ತವೆ. ಇದರಿಂದಾಗಿ ಅವರು ಬೇಗನೆ ಕೆರಳುತ್ತಾರೆ ಮತ್ತು ಸುಸ್ತಾಗುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ.
ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಸಾಂತ್ವನ ಇನ್ನೊಬ್ಬರ ಅಗತ್ಯವಿರುತ್ತದೆ. ಈ ಸಮಯದಲ್ಲಿ ಮಹಿಳೆಯರ ಮನಸ್ಸು ಪ್ರೀತಿಸುವವರನ್ನು ಬಯಸುತ್ತದೆ. ಇದೇ ರೀತಿ ಪುರುಷರ ಮುಟ್ಟಿನ ಸಂದರ್ಭದಲ್ಲಿ ಕೂಡ ಮಹಿಳೆಯರು ತಾಳ್ಮೆ ಕಳೆದುಕೊಳ್ಳಬಾರದು. ಪುರುಷರು ಆ ಒತ್ತಡದಿಂದ ಹೊರಬರಲು ನೆರವಾಗಬೇಕು ಎನ್ನುತ್ತಾರೆ ತಜ್ಞರ ಅಭಿಪ್ರಾಯ.
ಇದನ್ನು ಓದಿ: Missing Case: ಬಿಜೆಪಿ ಶಾಸಕನ ಪತ್ನಿ ನಾಪತ್ತೆ!